ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಕನ್ನಡತಿ ಸಿನಿ ಶೆಟ್ಟಿ ರವರ ನಿಜಕ್ಕೂ ಯಾರು ಗೊತ್ತೇ?? ಇವರ ಹಿನ್ನೆಲೆಯೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಮ್ಮ ಉಡುಪಿ ಮೂಲದ ಚೆಂದುಳ್ಳಿ ಚೆಲುವೆ ಆಗಿರುವ ಸಿನಿ ಶೆಟ್ಟಿ ಈ ಬಾರಿ ಮುಂಬೈನಲ್ಲಿ ಇರುವ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದಿರುವ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಈ ಬಾರಿಯ ಮಿಸ್ ಇಂಡಿಯಾ ಆಗಿ ಮಿಂಚಿ ಮರೆದಿದ್ದಾರೆ ಇದು ಈಗಾಗಲೇ ಪ್ರತಿಯೊಂದು ಕಡೆಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಮುಂಬೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಳೆದ ಬಾರಿಯ ವಿನ್ನರ್ ಆಗಿದ್ದ ಮಾನಸ ವಾರಣಾಸಿ ಸಿನಿ ಶೆಟ್ಟಿ ರವರಿಗೆ ಕಿರೀಟವನ್ನು ತೊಡಿಸಿದ್ದಾರೆ. ಮೊದಲ ಸ್ಥಾನವನ್ನು ಸಿನಿ ಶೆಟ್ಟಿ ರವರು ಗೆದ್ದಿದ್ದರೆ ಎರಡನೇ ಸ್ಥಾನವನ್ನು ರೂಬಲ್ ಶೇಖಾವತ್ ಹಾಗೂ ಮೂರನೇ ಸ್ಥಾನವನ್ನು ಶಿನಾಟ ಚೌಹಾನ್ ರವರು ಗೆದ್ದಿದ್ದಾರೆ.

ನೆನ್ನೆ ಮೊನ್ನೆವರೆಗೂ ಯಾರಿಗೂ ಕೂಡ ಗೊತ್ತಿಲ್ಲದ ಸಿನಿ ಶೆಟ್ಟಿ ರವರು ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಮನೆಮನೆಯಲ್ಲಿ ಕೂಡ ಮಾತಾಗುತ್ತಿದ್ದಾರೆ. 31 ಸ್ಪರ್ಧಿಗಳನ್ನು ಹಿಂದಿಕ್ಕಿ ಈ ಬಾರಿಯ ಫೆಮಿನಾ ಮಿಸ್ ಇಂಡಿಯಾ ಕಾಂಪಿಟೇಷನ್ನಲ್ಲಿ 21 ವರ್ಷದ ಸಿನಿ ಶೆಟ್ಟಿ ರವರು ಕರ್ನಾಟಕ ಮೂಲದಿಂದ ಬಂದು ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. 21 ವರ್ಷದ ಸಿನಿ ಶೆಟ್ಟಿ ಅವರ ಕುರಿತಂತೆ ಹಾಗೂ ಅವರ ಹಿನ್ನೆಲೆ ಏನು ಎನ್ನುವುದರ ಕುರಿತಂತೆ ಪ್ರತಿಯೊಬ್ಬರು ಕೂಡ ಕಾತರರಾಗಿದ್ದಾರೆ. ಸಿನಿ ಶೆಟ್ಟಿ ಅವರ ಶಿಕ್ಷಣದ ಕುರಿತಂತೆ ಮಾತನಾಡುವುದಾದರೆ ಅಕೌಂಟಿಂಗ್ ಹಾಗೂ ಫೈನಾನ್ಸ್ ವಿಚಾರದಲ್ಲಿ ಪದವಿಯನ್ನು ಪಡೆದುಕೊಂಡಿರುವ ಇವರು ಚಾರ್ಟರ್ಡ್ ಫೈನಾನ್ಸಿಯಲ್ ಅನಾಲಿಸ್ ಕೋರ್ಸನ್ನು ಮಾಡುತ್ತಿದ್ದಾರೆ.

ಇನ್ನು ನಾಲ್ಕು ವರ್ಷದಿಂದ ನೃತ್ಯವನ್ನು ಪ್ರಾರಂಭಿಸಿರುವ ಇವರು 14 ವರ್ಷದ ಸಂದರ್ಭದಲ್ಲಿಯೇ ಹಲವಾರು ಸ್ಟೇಜ್ ಪರ್ಫಾರ್ಮೆನ್ಸ್ ಕೂಡ ನೀಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವವನ್ನು ಕೂಡ ಹೊಂದಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ನೆಹ ಧೂಪಿಯ ಮಲೈಕ ಅರೋರ ಸೇರಿದಂತೆ ಬಾಲಿವುಡ್ ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳು ಹಾಗೂ ತಂತ್ರಜ್ಞರು ಮುಖ್ಯ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಈಗ ಪ್ರಾರಂಭವಾಗಿರುವ ಸಿನಿ ಶೆಟ್ಟಿ ಅವರ ಹವಾ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಬೀಸಿದರು ಕೂಡ ಅಚ್ಚರಿಯೇನಿಲ್ಲ.