ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತಕ್ಕ ಮತ್ತೊಬ್ಬ ಕಪಿಲ್ ದೇವ್ ಸಿಕ್ಕಿದ್ದಾರೆ ಎಂದ ದಿಲೀಪ್ ವೆಂಗಸರ್ಕಾರ್, ಯಾರಂತೆ ಗೊತ್ತೇ?? ಈತನ ಕುರಿತು ಹೇಳಿದ್ದೇನು ಗೊತ್ತೇ??

839

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತ ಮೊಟ್ಟಮೊದಲ ವಿಶ್ವಕಪ್ ಗೆದ್ದು 40 ವರ್ಷವಾಗುತ್ತಾ ಬಂದಿದೆ. ಹರಿಯಾಣದ ಆಲ್ ರೌಂಡರ್ ಕಪಿಲ್ ದೇವ್ ನಾಯಕತ್ವದಲ್ಲಿ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿತ್ತು. ಆ ನಂತರ ಭಾರತ ತಂಡವನ್ನು ವೇಗದ ಬೌಲರ್ ಕಮ್ ಬ್ಯಾಟ್ಸ್ಮನ್ ಆಲ್ ರೌಂಡರ್ ಇದುವರೆಗೂ ಭಾರತ ತಂಡದ ನೇತೃತ್ವ ವಹಿಸಿರಲಿಲ್ಲ. ಆದರೇ ಇತ್ತೀಚಿನ ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವನ್ನು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನೆಡಿಸಿದ್ದಾರೆ. ಬಹಳ ವರ್ಷಗಳ ನಂತರ ಆಲ್ ರೌಂಡರ್ ಒಬ್ಬ ಭಾರತ ತಂಡವನ್ನು ಮುನ್ನೆಡಿಸಿದ್ದಾರೆ.

ಐರ್ಲೆಂಡ್ ಪ್ರವಾಸದಲ್ಲಿ ಮೊದಲ ಪಂದ್ಯದಲ್ಲಿಯೇ ಭಾರತ ಶುಭಾರಂಭ ಮಾಡಿದ್ದು, ಮಳೆಯಿಂದ ಪಂದ್ಯ ಅಡಚಣೆಗೊಂಡರೂ ಸಹ ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ದಿಗ್ವಿಜಯ ಸಾಧಿಸಿತು. ಅದ್ಭುತವಾಗಿ ತಂಡವನ್ನು ಮುನ್ನಡೆಸಿದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಗಮನಸೆಳೆದರು. ಎರಡನೇ ಪಂದ್ಯದಲ್ಲೂ ಕೂಡ ಜಯ ಕಂಡಿತು.
ಇನ್ನು ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಕೋಚ್ ದಿಲೀಪ್ ವೆಂಗಸರ್ಕಾರ್, ಹಾರ್ದಿಕ್ ಪಾಂಡ್ಯ ಪ್ರದರ್ಶನದ ಬಗ್ಗೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಕಳೆದ ವರ್ಷ ಇದೇ ದಿನ ಹಾರ್ದಿಕ್ ಪಾಂಡ್ಯ ತಮ್ಮ ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಬಂದರು. ಆದರೇ ತಮ್ಮ ಅದ್ಭುತ ಪ್ರದರ್ಶನದಿಂದ ಕಮ್ ಬ್ಯಾಕ್ ಮಾಡಿದ್ದಾರೆ. ಅದಲ್ಲದೇ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿ ಮೊದಲ ಬಾರಿಗೆ ಚಾಂಪಿಯನ್ ಆಗುವ ಹಾಗೆ ಮಾಡಿದ್ದಾರೆ.ತಂಡದ ಆಟಗಾರರನ್ನು ಬ್ಯಾಕ್ ಮಾಡುವುದಲ್ಲದೇ ಉತ್ತಮ ಪ್ರದರ್ಶನ ನೀಡಲು ಹುರಿದುಂಬಿಸುತ್ತಾರೆ. ಹಾಗಾಗಿ ಭವಿಷ್ಯದ ದಿನಗಳಲ್ಲಿ ಭಾರತ ತಂಡದ ಸೀಮಿತ ಓವರ್ ಗಳ ನಾಯಕ ಸ್ಥಾನ ಹಾರ್ದಿಕ್ ಪಾಂಡ್ಯ ರನ್ನು ಹುಡುಕಿಕೊಂಡು ಬರಲಿದೆ ಎಂದು ದಿಲೀಪ್ ವೆಂಗಸರ್ಕಾರ್ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ

Get real time updates directly on you device, subscribe now.