ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶನಿ ದೇವರಿಗೆ ಅಚ್ಚು ಮೆಚ್ಚಿನ ರಾಶಿ ಯಾವುದು ಗೊತ್ತೇ? ಈ ರಾಶಿಯವರಿಗೆ ಶನಿ ದೇವಾ ಸತಾಯಿಸುವುದಿಲ್ಲ.

246

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪೌರಾಣಿಕ ಗ್ರಂಥಗಳಿಂದಲೂ ಕೂಡ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಶನಿದೇವನಿಂದ ಪ್ರತಿಯೊಬ್ಬರು ಕೂಡ ನಷ್ಟವನ್ನು ಅನುಭವಿಸಿದ್ದಾರೆ. ಶನಿಯ ಪ್ರಕೋಪವನ್ನು ತಡೆದುಕೊಳ್ಳಲು ಅಷ್ಟೊಂದು ಸುಲಭವಾಗಿ ಸಾಧ್ಯವಿಲ್ಲ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಅದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಒಂದು ಕಾಲದಲ್ಲಿ ದೇವರ ದೇವ ಮಹಾಶಿವನಿಗೆ ಕೂಡ ಶನಿಯ ಪ್ರಕೋಪವನ್ನು ತಾಳಲಾರದೆ ಆನೆಯ ರೂಪವನ್ನು ಧರಿಸಿದ್ದರು ಎಂಬುದಾಗಿ ಹೇಳಲಾಗುತ್ತದೆ.

ಅಷ್ಟರಮಟ್ಟಿಗೆ ಶನಿ ತನ್ನ ಪ್ರಕೋಪವನ್ನು ಬೀರುತ್ತಾನೆ ಎಂದು ಹೇಳಬಹುದಾಗಿದೆ. ಇನ್ನು ಶನಿಯ ಪ್ರಭಾವದಿಂದ ಎಲ್ಲರಿಗಿಂತ ಕಡಿಮೆ ಕೆಟ್ಟ ಪರಿಣಾಮವನ್ನು ಎದುರಿಸುವ ರಾಶಿಯ ಕುರಿತಂತೆ ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ. ಮಕರ ಹಾಗೂ ಕುಂಭ ರಾಶಿಗಳಿಗೆ ಶನಿ ಅಧಿಪತಿಯಾಗಿದ್ದಾನೆ ಎಂಬುದಾಗಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಿಳಿದುಬರುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯ ನೆಚ್ಚಿನ ರಾಶಿ ಎಂದರೆ ಅದು ತುಲಾ ರಾಶಿ. ವಿಶೇಷ ಪರಿಸ್ಥಿತಿಗಳಲ್ಲಿ ಹಾಗೂ ಈ ರಾಶಿಯವರು ಅತ್ಯಂತ ಕೆಟ್ಟ ಹಾಗೂ ಅಕ್ಷಮ್ಯ ಅಪರಾಧ ಮಾಡುವಂತಹ ಕೆಲಸವನ್ನು ಮಾಡಿದರೆ ಮಾತ್ರ ಇವರಿಗೆ ಶನಿದೇವ ಶಿಕ್ಷೆ ನೀಡುತ್ತಾನೆ ಇಲ್ಲದಿದ್ದರೆ ತುಲಾ ರಾಶಿಯವರಿಗೆ ಶಿಕ್ಷೆ ನೀಡುವುದು ಅತ್ಯಂತ ವಿರಳಾತಿವಿರಳ ಎಂದು ಹೇಳಬಹುದು.

ಶನಿಯ ದೋಷದಿಂದ ದೂರ ಹೇಗಿರಬೇಕು ಎನ್ನುವುದರ ಕುರಿತಂತೆ ತಿಳಿಯುವುದಾದರೆ ಯಾವತ್ತೂ ಕೂಡ ಕೆಲಸ ಇಲ್ಲದೆ ಸೋಮಾರಿಗಳಂತೆ ಇರಬಾರದು ಹಾಗೂ ನಾವು ಶಕ್ತರಾಗಿದ್ದರೆ ಅಶಕ್ತರಿಗೆ ಅವರಿಗೆ ಬೇಕಾಗುವಂತಹ ಅಗತ್ಯ ಸಹಾಯಗಳನ್ನು ಮಾಡಬೇಕು. ಈ ಮೂಲಕ ಶನಿದೇವನ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ.