ಇದುವರೆಗೂ ಒಟ್ಟಾರೆಯಾಗಿ ರಾಮ ಮಂದಿರಕ್ಕೆ ಭಕ್ತರಿಂದ ಸಂಗ್ರಹವಾದ ದೇಣಿಗೆ ಎಷ್ಟು ಸಾವಿರ ಕೋಟಿ ಗೊತ್ತೇ??

ಇದುವರೆಗೂ ಒಟ್ಟಾರೆಯಾಗಿ ರಾಮ ಮಂದಿರಕ್ಕೆ ಭಕ್ತರಿಂದ ಸಂಗ್ರಹವಾದ ದೇಣಿಗೆ ಎಷ್ಟು ಸಾವಿರ ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೆ ರಾಮಜನ್ಮಭೂಮಿ ಆಗಿರುವ ಅಯೋಧ್ಯೆಯನ್ನು ಪಡೆದುಕೊಂಡ ದಿನದಿಂದಲೂ ಕೂಡ ರಾಮಮಂದಿರ ನಿರ್ಮಾಣದ ಕುರಿತಂತೆ ಪ್ರತಿಯೊಬ್ಬರು ಕೂಡ ಸಾಕಷ್ಟು ನಿರೀಕ್ಷೆ ನೇತ್ರದಿಂದ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರಿಗೂ ಕೂಡ ರಾಮಮಂದಿರವನ್ನು ನೋಡುವುದು ಜೀವನದ ಪರಮಧ್ಯೇಯ ಗುರಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ರಾಮಜನ್ಮಭೂಮಿ ಆಗಿರುವ ಅಯೋಧ್ಯೆಯಲ್ಲಿ ರಾಮನ ಮಂದಿರವನ್ನು ಕಟ್ಟಿಸುವುದು ಭಾರತದ ಪ್ರತಿಯೊಬ್ಬನ ಅದರಲ್ಲೂ ಕೂಡ ಹಿಂದೂ ವರ್ಗದ ಜನರ ಕನಸಾಗಿದೆ ಎಂದರೆ ತಪ್ಪಾಗಲಾರದು.

ಇದಕ್ಕಾಗಿ ಎಷ್ಟೊಂದು ವರ್ಷಗಳ ಕಾಲ ಹೋರಾಟ ನಡೆದಿದೆ ಎನ್ನುವುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಇನ್ನು ಈ ರಾಮಮಂದಿರವನ್ನು ಕಟ್ಟಿಸುವ ಕೆಲಸವನ್ನು ಸ್ವತಂತ್ರವಾಗಿ ಜನರೇ ಒಪ್ಪಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ. ಈಗಾಗಲೇ ರಾಮಮಂದಿರವನ್ನು ಕಟ್ಟಿಸುವುದಕ್ಕೆ ಆಗಿ ಒಟ್ಟಾಗಿರುವ ಹಣವನ್ನು ಕೇಳಿದರೆ ನೀವು ಕೂಡ ಬೆರಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ರಾಮಜನ್ಮಭೂಮಿ ಯಾಗಿರುವ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಮಧ್ಯಮ ವರ್ಗದಿಂದ ಶ್ರೀಮಂತವರ್ಗದ ಜನರವರೆಗೆ ನೀಡಿರುವ ಹಣದ ಒಟ್ಟಾರೆ ಪ್ರಮಾಣವನ್ನು ನೋಡಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಹಾಗಿದ್ದರೆ ಎಷ್ಟು ಒಟ್ಟಾರೆ ಹಣ ಸಂಗ್ರಹವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಉಸ್ತುವಾರಿಗಳು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಇದುವರೆಗೂ 11 ಕೋಟಿ ಜನರು ಬರೋಬ್ಬರಿ 3400 ಕೋಟಿಗಿಂತಲೂ ಅಧಿಕ ಹಣವನ್ನು ಈಗಾಗಲೇ ದೇಣಿಗೆಯಾಗಿ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮಧ್ಯಮ ವರ್ಗದಿಂದ ಶ್ರೀಮಂತ ವರೆಗೂ ಕೂಡ ಹತ್ತು ರೂಪಾಯಿಂದ ಕೋಟಿ ರೂಪಾಯಿ ವರೆಗೂ ಕೂಡ ದಾನಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. 2024 ರ ಹೊತ್ತಿಗೆ ರಾಮ ದೇವಾಲಯ ನಿರ್ಮಾಣವಾಗಲಿದ್ದು ರಾಮ ದೇವಾಲಯ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮನೆಮನೆಗೆ ಹೋಗಿ ಹಣದ ಸಂಗ್ರಹ ಮಾಡಿದ್ದಾರೆ ಎಂಬುದು ಕೂಡ ಇಲ್ಲಿ ಎಲ್ಲರೂ ನೆಚ್ಚಿಕೊಳ್ಳಬೇಕಾದ ವಿಷಯ.