ಹೆಚ್ಚಿನ ಶಾಸಕರಿದ್ದರೂ ಕೂಡ ದೇವೇಂದ್ರ ಫಡ್ನವಿಸ್ ಸುಲಭವಾಗಿ ಸಿಎಂ ಕುರ್ಚಿ ಬಿಟ್ಟದ್ದು ಯಾಕೆ ಗೊತ್ತೇ?

ಹೆಚ್ಚಿನ ಶಾಸಕರಿದ್ದರೂ ಕೂಡ ದೇವೇಂದ್ರ ಫಡ್ನವಿಸ್ ಸುಲಭವಾಗಿ ಸಿಎಂ ಕುರ್ಚಿ ಬಿಟ್ಟದ್ದು ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ರಾಷ್ಟ್ರರಾಜಕಾರಣದಲ್ಲಿ ಈಗ ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆಗಳು ಹಾಗೂ ಸರ್ಕಾರದ ಉರುಳುವಿಕೆ ಹಾಗೂ ಹೊಸ ಸರ್ಕಾರ ಎದ್ದುನಿಲ್ಲುವ ಪ್ರಕ್ರಿಯೆಗಳು ಕೂಡ ಎದ್ದು ಕಾಣುತ್ತಿವೆ. ಇಂದು ನಾವು ಮಾತನಾಡುವ ಹೊರಟಿರುವುದು ನಮ್ಮ ನೆರೆಯ ರಾಜ್ಯವಾಗಿರುವ ಮಹಾರಾಷ್ಟ್ರ ಸರ್ಕಾರದ ಕುರಿತಂತೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಸರ್ಕಾರ ಈಗಷ್ಟೇ ಉರುಳಿಬಿದ್ದಿದ್ದು ಶಿವಸೇನೆಯ ಮತ್ತೊಬ್ಬ ನಾಯಕ ಆಗಿರುವ ಏಕನಾಥ್ ಹಿಂದೆ ಹಾಗೂ ಪಡ್ನವಿಸ್ ರವರ ಬಿಜೆಪಿಯ ಸಮ್ಮಿಶ್ರ ಸರ್ಕಾರ ಈಗ ಮಹಾರಾಷ್ಟ್ರದಲ್ಲಿ ರಚಿತವಾಗಿದ್ದು ಸುಲಭವಾಗಿ ಮುಖ್ಯಮಂತ್ರಿ ಸ್ಥಾನವನ್ನು ಪಡೆಯುವ ಅವಕಾಶವಿದ್ದರೂ ಕೂಡ..

ಬಿಜೆಪಿಯ ಪಡ್ನವಿಸ್ ರವರು ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನೆಯ ಏಕನಾಥ್ ಹಿಂದೆ ರವರಿಗೆ ಬಿಟ್ಟುಕೊಟ್ಟಿದ್ದು ಯಾಕೆ ಎನ್ನುವುದರ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಸಾಮಾನ್ಯವಾಗಿ ಹೀಗೆ ಮೈತ್ರಿ ರೂಪದ ಸರ್ಕಾರವನ್ನು ರಚಿಸಿದಾಗ ಮುಖ್ಯ ಪಕ್ಷ ಇನ್ನೊಂದು ಪಕ್ಷಕ್ಕೆ ಮುಖ್ಯ ಸ್ಥಾನಗಳನ್ನು ನೀಡದೆ ಮೋಸ ಮಾಡುತ್ತದೆ ಎಂಬ ಕೂಗುಗಳು ಕೇಳಿ ಬರುತ್ತವೆ. ಆದರೆ ಪಡ್ನವಿಸ್ ನೇತೃತ್ವದ ಬಿಜೆಪಿ ಪಕ್ಷ ಹಾಗೆ ಮಾಡದೆ ಶಿವಸೇನೆಯ ಏಕನಾಥ್ ಹಿಂದೆ ರವರಿಗೆ ಸಿಎಂ ಪಟ್ಟವನ್ನು ಬಿಟ್ಟುಕೊಟ್ಟು ದ್ರೋಹದ ರಾಜಕೀಯವನ್ನು ಮಾಡಿಲ್ಲ ಎಂಬ ಉತ್ತಮ ಸಂದೇಶವನ್ನು ಸಾರಿದೆ. ಇಲ್ಲಿ ರಾಜಕೀಯ ಲಾಭಕ್ಕಾಗಿ ಈ ತರಹ ಮಾಡಿಲ್ಲ ಎನ್ನುವುದನ್ನು ಕೂಡ ಎಲ್ಲರಿಗೆ ತಿಳಿ ಹೇಳುವಂತೆ ಸರಕಾರ ರಚನೆಯಾಗಿದೆ.

ಶಿವಸೇನಾ ಅದರಲ್ಲೂ ಮರಾಠ ಕಮ್ಯುನಿಟಿ ಯಿಂದ ಬಂದಿರುವ ಏಕನಾಥ ಶಿಂದೆ ರವರಿಗೆ ಅಧಿಕಾರ ನೀಡುವ ಮುಖೇನ ಬೆಂಬಲ ನೀಡಿ ಇರುವವರಿಗೆ ಸಮಾನ ಹಕ್ಕನ್ನು ನೀಡಿದಂತಾಗಿದೆ. ಈ ಮೂಲಕ ಮಹಾರಾಷ್ಟ್ರ ರಾಜ್ಯದಲ್ಲಿ ಅತ್ಯಧಿಕ ಮರಾಠ ಸಮುದಾಯದ ಬೆಂಬಲವನ್ನು ಕೂಡ ಬಿಜೆಪಿ ನೇತೃತ್ವದ ಸರ್ಕಾರ ಮುಂದಿನ ದಿನಗಳಲ್ಲಿ ಪಡೆಯುವ ನಿಶ್ಚಿತ ಫಲಿತಾಂಶವನ್ನು ಈಗಲೇ ರೂಪಿಸಿದಂತಿದೆ ಎಂದು ಹೇಳಬಹುದಾಗಿದೆ. ಫಡ್ನವಿಸ್ ರವರ ಬದಲಿಗೆ ಏಕನಾಥ್ ಶಿಂಧೆ ರವರಿಗೆ ಅಧಿಕಾರ ನೀಡಿರುವ ಈ ಮಾಸ್ಟರ್ ಪ್ಲಾನ್ ಅನ್ನು ಎಲ್ಲರೂ ಕೂಡ ಈಗ ಮೆಚ್ಚಲೇ ಬೇಕಾಗಿದೆ.