ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊಹ್ಲಿ ಏನು ಶತಕ ಗಳಿಸುವುದು ಬೇಕಾಗಿಲ್ಲ, ಆದರೆ. ಕೊಹ್ಲಿ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ರಾಹುಲ್ ದ್ರಾವಿಡ್. ಹೇಳಿದ್ದೇನು ಗೊತ್ತೇ??

109

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ವಿದೇಶಿ ಬೌಲರ್ಗಳ ಬೆವರಿಳಿಸತ್ತಿದ ಕಿಂಗ್ ವಿರಾಟ್ ಕೊಹ್ಲಿ ರವರು ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಪಂದ್ಯದಲ್ಲಿ ಸಂಪೂರ್ಣವಾಗಿ ಮಂಕಾಗಿ ಕುಳಿತಿದ್ದಾರೆ ಎಂದರೆ ನಿಜಕ್ಕೂ ಕೂಡ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ಹಾಗೂ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ದುಃಖ ಕಾಡುತ್ತಿರುವುದು ಸಂದೇಹವಿಲ್ಲ. ಅವರ ಶತಕದ ಕಂಬ್ಯಾಕ್ ಅನ್ನೋ ಪ್ರತಿಯೊಬ್ಬರು ಕೂಡ ನಿರೀಕ್ಷಿಸುತ್ತಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ಮಾಜಿ ಕ್ರಿಕೆಟಿಗ ಆಗಿರುವ ರಾಹುಲ್ ದ್ರಾವಿಡ್ ರವರು ವಿರಾಟ್ ಕೊಹ್ಲಿ ರವರ ಶತಕ ಕ್ಕಾಗಿ ನಾವು ಎದುರು ನೋಡುತ್ತಿಲ್ಲ ಎನ್ನುವುದನ್ನು ಹೇಳಿದ್ದಾರೆ.

ಈ ಮೂಲಕ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ಆಶ್ಚರ್ಯವನ್ನು ಮೂಡಿಸುವಂತೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಹಾಗಿದ್ದರೆ ಈ ಹೇಳಿಕೆಯ ಹಿಂದಿನ ಮರ್ಮವೇನು ಎಂಬ ಎಲ್ಲಾ ವಿವರವನ್ನು ನೀಡುತ್ತೇವೆ ಬನ್ನಿ. ಹೌದು ಗೆಳೆಯರೇ ಪ್ರತಿಯೊಬ್ಬರು ಕೂಡ ವಿರಾಟ್ ಕೊಹ್ಲಿ ರವರ ಶತಕವನ್ನು ಎದುರುನೋಡುತ್ತಿದ್ದಾರೆ ಆದರೆ ನಾವು ಅವರ ಶತಕವನ್ನು ಎದುರು ನೋಡುತ್ತಿಲ್ಲ ಬದಲಾಗಿ ಅವರ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ಅನ್ನು ಎದುರುನೋಡುತ್ತಿದ್ದೇವೆ ಎಂಬುದಾಗಿ ರಾಹುಲ್ ದ್ರಾವಿಡ್ ಅವರು ಹೇಳಿಕೊಂಡಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ವಿರಾಟ್ ಕೊಹ್ಲಿ ಅವರ ಕುರಿತಂತೆ ಸಾಕಷ್ಟು ಮೆಚ್ಚುಗೆ ಮಾತುಗಳನ್ನು ಕೂಡ ಕೋಚ್ ಮಾತಾಡಿದ್ದಾರೆ.

ವಿರಾಟ್ ಕೊಹ್ಲಿ ಅವರಷ್ಟು ಪರಿಶ್ರಮವನ್ನು ನಾನು ಎಂದು ಕೂಡ ನೋಡಿಲ್ಲ ಎಂಬುದಾಗಿ ಕೂಡ ರಾಹುಲ್ ದ್ರಾವಿಡ್ ಅವರು ಪ್ರತಿಕ್ರಿಯಿಸಿದ್ದಾರೆ. ಇನ್ನು ತಂಡದ ಯುವ ಆಟಗಾರರಿಗೂ ಕೂಡ ಕೊಹ್ಲಿ ಸ್ಪೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಈಗಾಗಲೇ ಅಭ್ಯಾಸ ಬಂದಿದ್ದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ಭರವಸೆ ಮೂಡಿಸಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ಭರವಸೆಯನ್ನು ಕೂಡ ರಾಹುಲ್ ದ್ರಾವಿಡ್ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಅವರ ಭವಿಷ್ಯವಾಣಿ ನಿಜವಾಗುತ್ತದೆಯೇ ಎಂಬುದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.

Get real time updates directly on you device, subscribe now.