ಪೋಸ್ಟ್ ಆಫೀಸ್ ನಲ್ಲಿಯೇ ಬೆಸ್ಟ್ ಯೋಜನೆಗಳಲ್ಲಿ ಒಂದು. ತಿಂಗಳಿಗೆ ನೀಡುತ್ತೆ ಬರೋಬ್ಬರಿ 5 ಸಾವಿರ: ಯಾವ ಸ್ಕೀಮ್ ಗೊತ್ತೇ?

ನಮಸ್ಕಾರ ಸ್ನೇಹಿತರೆ ನಾವು ಯಾವುದೇ ಹೂಡಿಕೆ ಮಾಡಿದರೂ ಕೂಡ ಅದರಿಂದ ದ್ವಿಗುಣ ಮಟ್ಟದ ಲಾಭವನ್ನು ಅಪೇಕ್ಷಿಸುತ್ತೇವೆ. ಯಾವುದೇ ಒಬ್ಬ ವ್ಯಾಪಾರಿ ಕೊಡುತ್ತಾನೋ ಹೂಡಿಕೆ ಮಾಡಿದ ಹಣಕ್ಕಿಂತ ಹೆಚ್ಚಾಗಿ ಯಾವುದೇ ನಷ್ಟವಿಲ್ಲದೆ ಲಾಭವನ್ನು ಗಳಿಸಲು ಯೋಚಿಸುತ್ತಾನೆ. ಅಂಚೆ ಕಚೇರಿಯಲ್ಲಿ ಕೂಡ ಇದೇ ಮಾದರಿಯ ಒಂದು ಯೋಜನೆ ಇದ್ದು ಇದರಲ್ಲಿ ‌ಹೂಡಿಕೆ ಮಾಡಿದರೆ ನಿಮಗೆ ಮಾಸಿಕವಾಗಿ ಹಣ ದೊರೆಯುತ್ತದೆ. ಹೌದು ಗೆಳೆಯರೇ ಇಂದು ನಾವು ನಿಮಗೆ ಅಂಚೆ ಕಚೇರಿಯಲ್ಲಿ ಮಾಸಿಕ ಆದಾಯ ಯೋಜನೆ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಇದರಲ್ಲಿ ಒಮ್ಮೆ ನೀವು ದೊಡ್ಡಮಟ್ಟದ ಹಣವನ್ನು ಹೂಡಿಕೆ ಮಾಡಿದರೆ ಮಾಸಿಕವಾಗಿ ಆದಾಯವನ್ನು ಪಡೆಯಬಹುದಾಗಿದೆ. ಒಂಟಿ ಖಾತೆ ಹಾಗೂ ಜಂಟಿ ಖಾತೆ ಎರಡು ರೀತಿಯ ಖಾತೆಗಳು ಇಲ್ಲಿ ಉಪಲಬ್ಧವಿವೆ. ಒಂಟಿ ಖಾತೆಯಲ್ಲಿ ನೀವು ಮ್ಯಾಕ್ಸಿಮಮ್ 4.5 ಲಕ್ಷ ರೂಪಾಯಿ ಹಾಗೂ ಜಂಟಿ ಖಾತೆಯಲ್ಲಿ 9 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯ ಮುಕ್ತಾಯದ ಅವಧಿ 5 ವರ್ಷಗಳಾಗಿದೆ. ನೀವು ಖಾತೆಯನ್ನು ತೆರೆದ ದಿನಾಂಕದಿಂದ ಖಾತೆ ಮುಗಿಯುವವರೆಗೂ ಕೂಡ ಪ್ರತಿ ತಿಂಗಳು ಬಡ್ಡಿಯನ್ನು ನಿಮಗೆ ತಿಂಗಳ ಕೊನೆಯಲ್ಲಿ ಪಾವತಿಸಲಾಗುತ್ತದೆ. ಒಂದು ವೇಳೆ ಗ್ರಾಹಕರು ಬಡ್ಡಿಯನ್ನು ಕ್ಲೈಂ ಮಾಡದಿದ್ದರೆ ಬಡ್ಡಿಯನ್ನು ವಿಧಿಸಲು ಸಾಧ್ಯವಾಗುವುದಿಲ್ಲ.

ಹೀಗಾಗಿ ಬಡ್ಡಿಯನ್ನು ಉಳಿಸಿಕೊಳ್ಳಲು ಅದೇ ಪೋಸ್ಟ್ ಆಫೀಸ್ ನ ಉಳಿತಾಯ ಖಾತೆಗೆ ಇಸಿಎಸ್ ನಲ್ಲಿ ಕ್ರೆಡಿಟ್ ಆಯ್ಕೆ ಮಾಡುವುದು ಒಳ್ಳೆಯದಾಗಿದೆ. ವರ್ಷಕ್ಕೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮುಖಾಂತರ 59400 ರೂಪಾಯಿ ಬಡ್ಡಿಯನ್ನು ಪಡೆಯಬಹುದಾಗಿದೆ. ಈ ಹೂಡಿಕೆಯಲ್ಲಿ ನೀವು ಶೇಕಡ 6.6 ರಷ್ಟು ಬಡ್ಡಿಯನ್ನು ಪಡೆಯಬಹುದಾಗಿದೆ. ವಿವಾಹಿತರಿಗೆ ಇದೊಂದು ಉತ್ತಮ ಯೋಜನೆಯಾಗಿದೆ ಎಂದರೆ ತಪ್ಪಾಗಲಾರದು.