ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮುಂದಿನ ವಿಶ್ವಕಪ್ ನಲ್ಲಿ ಸೆಹ್ವಾಗ್ ರವರು ಕೊಹ್ಲಿ ಬದಲಿಗೆ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?ಆ ಟಾಪ್ ಆಟಗಾರ ಯಾರು ಗೊತ್ತೇ?

742

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಇನ್ನೇನು ಮೂರು ನಾಲ್ಕು ತಿಂಗಳುಗಳಲ್ಲಿ ಅಂದರೆ ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಈ ವರ್ಷದ ಟಿ-20ವಿಶ್ವಕಪ್ ಪ್ರಾರಂಭವಾಗಲಿದೆ. ಯಾರನ್ನೆಲ್ಲಾ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಬೇಕು ಎನ್ನುವ ಲೆಕ್ಕಾಚಾರಗಳು ಈಗಾಗಲೆ ನಡೆಯುತ್ತಿದ್ದು ಹಿರಿಯ ಕ್ರಿಕೆಟಿಗರು ಕೂಡ ತಮ್ಮ ಸಲಹೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಇದು ನಾವು ಮಾತನಾಡುವ ಹೊರಟಿರುವುದು ಮಾಜಿ ಕ್ರಿಕೆಟಿಗ ಆಗಿರುವ ವೀರೇಂದ್ರ ಸೆಹ್ವಾಗ್ ರವರ ಕುರಿತಂತೆ. ವೀರೇಂದ್ರ ಸೇವಾಗ್ ರವರು ಕೂಡ ವಿಶ್ವಕಪ್ ತಂಡಕ್ಕೆ ಯಾರೆಲ್ಲಾ ಆಯ್ಕೆಯಾಗಬೇಕು ತಮ್ಮ ನೆಚ್ಚಿನ ಆಟಗಾರರು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇನ್ನೂ ಅವರು ವಿರಾಟ್ ಕೊಹ್ಲಿ ಅವರ ಬದಲಿಗೆ ಯುವ ಆಟಗಾರರನ್ನು ಒಬ್ಬನನ್ನು ಸೆಲೆಕ್ಟ್ ಮಾಡಿದ್ದಾರೆ. ಹೌದು ಗೆಳೆಯರ ಸದ್ಯಕ್ಕೆ ವಿರಾಟ್ ಕೊಹ್ಲಿ ರವರು ಕಳಪೆ ಫಾರ್ಮ್ ನಲ್ಲಿದ್ದು ಅವರ ಬದಲಿಗೆ ಯುವ ಆರಂಭಿಕ ಆಟಗಾರ ಆಗಿರುವ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದ್ದಾರೆ. ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ ಇಶಾನ್ ರವರು ನಿರ್ಭೀತಿಯಿಂದ ಆಟವಾಡುವುದು ನನಗೆ ನೋಡಲು ಖುಷಿಯಾಗುತ್ತದೆ ಎಲ್ಲರೂ ಕೂಡ ಅವರಂತೆಯೇ ಆಡಬೇಕು ಅದಕ್ಕಾಗಿ ಅವರನ್ನು ಆಯ್ಕೆ ಮಾಡುತ್ತಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಅವರ ಜೊತೆಗೆ ರೋಹಿತ್ ಶರ್ಮಾ ರವರು ಆಟವನ್ನು ಆರಂಭಿಸಿದರೆ ಮೂರನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ರವರು ಆಡಬಹುದಾಗಿದೆ ಎಂಬುದಾಗಿ ಹೇಳಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಇರಲೇಬೇಕು ಎಂಬುದಾಗಿ ಸೆಹ್ವಾಗ್ ಹೇಳಿದ್ದಾರೆ. ಅವರ ಜೊತೆಗೆ ಅವರ ನೆಚ್ಚಿನ ಬೌಲರ್ ಆಗಿರುವ ಉಮ್ರಾನ್ ಮಲಿಕ್ ಕೂಡ ತಂಡದಲ್ಲಿ ಇರಬೇಕು ಎಂಬುದಾಗಿ ವೀರೇಂದ್ರ ಸೆಹ್ವಾಗ್ ಅವರು ಅಭಿಪ್ರಾಯಪಟ್ಟಿದ್ದಾರೆ. ವೀರೇಂದ್ರ ಸೆಹ್ವಾಗ್ ರವರ ಆಯ್ಕೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.