ದೇಶದಲ್ಲಿಯೇ ಸಂಚಲ ಸೃಷ್ಟಿಸಿದ ಅಟಲ್ ರವರ ಜೀವನ ಚರಿತ್ರೆ: ಘೋಷಣೆಯಾಯಿತು ಅಟಲ್ ರವರ ಬೈಯೋಪಿಕ್.

ದೇಶದಲ್ಲಿಯೇ ಸಂಚಲ ಸೃಷ್ಟಿಸಿದ ಅಟಲ್ ರವರ ಜೀವನ ಚರಿತ್ರೆ: ಘೋಷಣೆಯಾಯಿತು ಅಟಲ್ ರವರ ಬೈಯೋಪಿಕ್.

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದಲ್ಲಿ ಹಲವಾರು ಬಯೋಪಿಕ್ ಸಿನಿಮಾಗಳು ಬಿಡುಗಡೆಯಾಗಿವೆ. ಮೊದಮೊದಲಿಗೆ ಬಾಲಿವುಡ್ ಚಿತ್ರರಂಗ ಗ್ಯಾಂಗ್ ಸ್ಟರ್ಗಳ ಸಿನಿಮಾ ಕುರಿತಂತೆ ಹೆಚ್ಚಿನ ಗಮನವನ್ನು ವಹಿಸುತ್ತಿದ್ದು ಆದರೆ ನಂತರದ ದಿನಗಳಲ್ಲಿ ಕ್ರೀಡಾ ಹಾಗೂ ಸಿನಿಮಾ ಹಾಗೂ ವ್ಯಾಪಾರ-ವಹಿವಾಟು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರ ಕುರಿತಂತೆ ಕೂಡ ಬಯೋಪಿಕ್ ಸಿನಿಮಾಗಳನ್ನು ಈಗಾಗಲೇ ಮಾಡುತ್ತಿದೆ. ಸದ್ಯಕ್ಕೆ ಬಾಲಿವುಡ್ ಚಿತ್ರರಂಗದ ರಾಜಕಾರಣಿಗಳ ಆತ್ಮಚರಿತ್ರೆಯನ್ನು ಕೂಡ ಸಿನಿಮಾ ವನ್ನಾಗಿ ಮಾಡುತ್ತಿದೆ. ಈಗಾಗಲೇ ನಿಮಗೆ ತಿಳಿದಿರುವಂತೆ ನಮ್ಮ ಭಾರತ ದೇಶದ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿ ರವರ ಬಯೋಪಿಕ್ ಸಿನಿಮಾವನ್ನು ಕೂಡ ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಕೇವಲ ಮೋದಿಯವರ ಕುರಿತಂತೆ ಮಾತ್ರವಲ್ಲದೆ ಮಾಜಿ ಪ್ರಧಾನಮಂತ್ರಿ ಗಳಾಗಿರುವ ಮನಮೋಹನ್ ಸಿಂಗ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಕುರಿತಂತೆ ಕೂಡ ಈಗಾಗಲೇ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆದರೆ ಈಗ ಸದ್ದು ಮಾಡುತ್ತಿರುವುದು ಭಾರತ ಕಂಡಂತಹ ಸರ್ವಶ್ರೇಷ್ಠ ಪ್ರಧಾನಮಂತ್ರಿ ಗಳಲ್ಲಿ ಒಬ್ಬರಾಗಿರುವ ಭಾರತೀಯ ರಾಜಕೀಯ ಕ್ಷೇತ್ರದ ಅಜಾತಶತ್ರು ಎಂದೇ ಖ್ಯಾತರಾಗಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್ ಸಿನಿಮಾದ ಅಧಿಕೃತ ಘೋಷಣೆ ಈಗಾಗಲೇ ನಡೆದಿದೆ. ಪಕ್ಷಗಳು ಬರುತ್ತವೆ ಹೋಗುತ್ತವೆ ಆದರೆ ನಮ್ಮ ರಾಜತಂತ್ರ ಇರಬೇಕು ನಮ್ಮ ದೇಶ ಉನ್ನತ ಸ್ಥಾನದಲ್ಲಿ ಇರಬೇಕು ಎನ್ನುವುದಾಗಿ ಎಲ್ಲರೂ ಮೆಚ್ಚುವಂತಹ ಮಾತನ್ನು ಹೇಳಿ ಇತಿಹಾಸದ ಪುಟಗಳಲ್ಲಿ ಇಂದಿಗೂ ಕೂಡ ನೆಚ್ಚಿನ ಜನಪ್ರಿಯ ಪ್ರಧಾನಮಂತ್ರಿ ಗಳಲ್ಲಿ ಒಬ್ಬರಾಗಿ ಉಳಿದುಕೊಂಡಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ರವರ ಜನ್ಮದಿನ ಮುಂದಿನ ವರ್ಷದಲ್ಲಿ ಇದೆ. ಈ ವರ್ಷಾಂತ್ಯಕ್ಕೆ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದ್ದು ಮುಂದಿನ ವರ್ಷದ ಡಿಸೆಂಬರ್ ಗೆ ಅಂದರೆ ವಾಜಪೇಯಿರವರ 99ನೇ ಜನ್ಮ ಜಯಂತಿಯಂದು ಈ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಸಿನಿಮಾದ ನಿರ್ಮಾಪಕರಾಗಿರುವ ವಿನೋದ್ ಭಾನುಶಾಲಿ ಹಾಗೂ ಸಂದೀಪ್ ಸಿಂಗ್ ಘೋಷಿಸಿದ್ದಾರೆ. ಭಾರತ ದೇಶ ಕಂಡಂತಹ ಧೀಮಂತ ನಾಯಕನ ಕಥೆಯನ್ನು ನೋಡಲು ಪ್ರತಿಯೊಬ್ಬರು ಕೂಡ ಉತ್ಸುಕರಾಗಿದ್ದಾರೆ.