ಹೆಚ್ಚು ಬೇಡ, ಕೇವಲ ಎರಡೇ ಎರಡು ಲಕ್ಷ ರೊಪಾಯಿ ಹಾಕಿ, ತಿಂಗಳಿಗೆ 50 ಸಾವಿರ ಸ್ವಂತದಿಂದ ಗಳಿಸಿ. ಯಾವ ಉದ್ಯಮ ಗೊತ್ತೇ?

ಹೆಚ್ಚು ಬೇಡ, ಕೇವಲ ಎರಡೇ ಎರಡು ಲಕ್ಷ ರೊಪಾಯಿ ಹಾಕಿ, ತಿಂಗಳಿಗೆ 50 ಸಾವಿರ ಸ್ವಂತದಿಂದ ಗಳಿಸಿ. ಯಾವ ಉದ್ಯಮ ಗೊತ್ತೇ?

ನಮಸ್ಕಾರ ಸ್ನೇಹಿತರೆ ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರು ಕೂಡ ಮೊದಲು ಗಮನಿಸುವುದು ಹಣದ ಕುರಿತಂತೆ. ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರ ವ್ಯಾಪಾರ ವ್ಯವಹಾರ ಹಾಗೂ ಆದಾಯದ ಮೂಲಗಳು ನೆಲಕಚ್ಚಿದ್ದವು. ಹೀಗಾಗಿ ಈ ಸಂದರ್ಭದಲ್ಲಿ ಹಣ ಕೊಂಚಮಟ್ಟಿಗೆ ಇದ್ದವರು ಕೂಡ ಯಾವ ವ್ಯಾಪಾರವನ್ನು ಮಾಡಿದರೆ ಹೇಗೆ ಹಣ ಗಳಿಸಬಹುದು ಎನ್ನುವ ಚಿಂತೆಯಲ್ಲಿದ್ದಾರೆ. ಆದರೆ ಯಾರೂ ಕೂಡ ಸಂಪೂರ್ಣವಾಗಿ ಪ್ರಯತ್ನ ಪಡಲು ಹೋಗುತ್ತಿಲ್ಲ ಯಾಕೆಂದರೆ ಒಂದು ವೇಳೆ ನಷ್ಟವಾದರೆ ಅವರ ಜೀವನವೇ ಬೀದಿಗೆ ಬರುತ್ತದೆ. ಇದೇ ಕಾರಣಕ್ಕಾಗಿ ಕಡಿಮೆ ಬಂಡವಾಳವನ್ನು ಹೂಡಿ ನಿರಂತರ ಆದಾಯವನ್ನು ಪಡೆಯುವ ಒಂದು ವ್ಯಾಪಾರದ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.

ಇತ್ತೀಚಿನ ದಿನಗಳಲ್ಲಿ ಅಡುಗೆ ತೈಲದ ಬೆಲೆ ಗಗನಕ್ಕೇರಿರುವ ಕಾರಣದಿಂದಾಗಿ ನೀವು ಈ ವಿಭಾಗದಲ್ಲಿ ವ್ಯಾಪಾರವನ್ನು ಆರಂಭಿಸಿದರೆ ಉತ್ತಮ ಲಾಭವನ್ನು ಪಡೆಯಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವಯಂ ಚಾಲಿತ ಯಂತ್ರಗಳು ಬಂದಿರುವ ಕಾರಣಕ್ಕಾಗಿ ಹೆಚ್ಚಿನ ಖರ್ಚು ಮಾಡಬೇಕಾಗಿಲ್ಲ ಯಂತ್ರ ಸೇರಿದಂತೆ ಅದಕ್ಕಾಗಿ ಜಾಗ ಮತ್ತು ಎಣ್ಣೆಯನ್ನು ತೆಗೆಯಲು ಅದರ ಬೀಜಗಳು ಬೇಕಾಗುತ್ತದೆ ಅಷ್ಟೇ. ಮೊದಲಿಗೆ ಮಧ್ಯಮಗಾತ್ರದ ಯಂತ್ರವನ್ನು ಖರೀದಿಸಬೇಕು ಲಾಭ ಬಂದಮೇಲೆ ದೊಡ್ಡದು ನೋಡಬಹುದು. ಎಣ್ಣೆ ತಯಾರಿಸುವ ಯಂತ್ರಕ್ಕೆ ಕೇವಲ ಎರಡು ಲಕ್ಷ ರೂಪಾಯಿ. ಸರಕಾರದಿಂದ ಪರವಾನಿಗೆ ಹಾಗೂ ಇನ್ನಿತರ ಖರ್ಚುಗಳು ಸೇರಿದಂತೆ ಒಟ್ಟಾರೆಯಾಗಿ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳು ಖರ್ಚಾಗಬಹುದು.

ಒಮ್ಮೆ ನೀವು ಗುಣಮಟ್ಟದ ತೈಲವನ್ನು ಗ್ರಾಹಕರಿಗೆ ನೀಡಿದರೆ ನಿಮ್ಮ ಬಳಿಯೇ ದೊಡ್ಡಮಟ್ಟದ ಗ್ರಾಹಕರ ಸಂಖ್ಯೆ ಬೆಳೆಯಲಿದೆ. ಗ್ರಾಹಕರ ಮನ ಮೆಚ್ಚಿಸುವುದು ನಿಮ್ಮ ಕ್ವಾಲಿಟಿಯ ಮೇಲೆ ನಿಂತಿದೆ. ಅಂಗಡಿಯ ಮಾಲೀಕರೊಂದಿಗೆ ಟೈ ಅಪ್ ಮಾಡಿಕೊಂಡು ಮಾರಾಟ ಮಾಡಬಹುದಾಗಿದೆ. ಉಳಿದ ತ್ಯಾಜ್ಯಗಳನ್ನು ಜಾನುವಾರುಗಳ ಆಹಾರಕ್ಕೆ ಬಳಸಿಕೊಳ್ಳಬಹುದು. ನಿಮ್ಮ ಈ ವ್ಯಾಪಾರದ ಕಚ್ಚಾವಸ್ತುಗಳ ಬೆಲೆ ಕಡಿಮೆ ಆದಷ್ಟು ನೀವು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ತಿಂಗಳಿಗೆ ಕಡಿಮೆ ಎಂದರೂ ಇಪ್ಪತ್ತರಿಂದ ಐವತ್ತು ಸಾವಿರ ರೂಪಾಯಿಗಳನ್ನು ಸುಲಭವಾಗಿ ಕಮಾಯಿ ಮಾಡಿಕೊಳ್ಳಬಹುದು.