ಬೆಂಗಳೂರಿನಲ್ಲಿ ಆರಂಭವಾಗಿರುವ ಐಕೀಯ ಶೋ ರೂಮ್ ನಲ್ಲಿ ಕೇವಲ 100 ರುಪಾಯಿಗೆ ಏನೆಲ್ಲಾ ಸಿಗಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಐಕಿಯ ಸಂಸ್ಥೆ ಪೀಠೋಪಕರಣ ಮಳಿಗೆಯ ವಿಚಾರದಲ್ಲಿ ಜಾಗತಿಕವಾಗಿ ಹೆಸರು ಪಡೆದಿರುವ ದೊಡ್ಡ ಸಂಸ್ಥೆ ಈಗ ಬೆಂಗಳೂರಿನಲ್ಲಿ ಕೂಡ ಜೂನ್ 22ರಿಂದ ತನ್ನ ಹೊಸ ಮಳಿಗೆಯನ್ನು ಪ್ರಾರಂಭಿಸಿದ್ದು ಇಲ್ಲಿ ಜನಸಾಗರವೇ ತುಂಬಿತುಳುಕುತ್ತಿದೆ ಎಂದು ಹೇಳಬಹುದಾಗಿದೆ. ಇಲ್ಲಿ ನೂರು ರೂಪಾಯಿಗೆ ಏನೆಲ್ಲ ಸಿಗುತ್ತದೆ ಎಂಬುದಾಗಿ ತಿಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಿ. ಇದಕ್ಕಾಗಿ ಜನರು ಗಂಟೆಗಟ್ಟಲೆ ಇಲ್ಲಿ ಸಾಲಿನಲ್ಲಿ ನಿಲ್ಲುತ್ತಾರೆ. ಹಣ್ಣು ಹಾಗೂ ತರಕಾರಿಗಳನ್ನು ಇಡುವುದಕ್ಕೆ ಇಲ್ಲಿ ಬಾಕ್ಸ್ ಕೇವಲ 99 ರೂಪಾಯಿಗಳಲ್ಲಿ ಸಿಗುತ್ತದೆ. ನೀರು ಕಾಫಿ ಟೀ ಕುಡಿಯಲು ಆರು ಕಪ್ ಗಳ ಸೆಟ್ ಕೇವಲ 99ಕ್ಕೆ ಸಿಗಲಿದೆ.

ಇನ್ನು ಇಲ್ಲ ಗ್ಲಾಸ್ ಕಪ್ ಕೇವಲ 59 ಕ್ಕೆ ಸಿಗಲಿದೆ. ಹೈಜನಿಕ್ ಆಗಿರಲು ಸೋಪ್ ದಿಸ್ಪೆನ್ಸರ್ ಬೇಕಾಗುತ್ತದೆ ಹಾಗೂ ಇದು ಕೇವಲ ಇಲ್ಲಿಯ 59 ಕ್ಕೆ ಸಿಗಲಿದೆ. ಊಟೋಪಚಾರಗಳಿಗೆ ಪ್ಲೇಟ್ ಖಂಡಿತವಾಗಿ ಮೊದಲು ಬೇಕಾಗುವಂತಹ ವಸ್ತುವಾಗಿರುವ ಕಾರಣದಿಂದಾಗಿ ಇದು ಮನೆಯಲ್ಲಿ ಪ್ರಮುಖವಾಗಿ ಬೇಕಾಗುತ್ತದೆ ಇದು ಕೇವಲ ಇಲ್ಲಿ 59ಕ್ಕೆ ಸಿಗಲಿದೆ. ಇನ್ನು ಇದು ಜಾಗತಿಕ ಸಂಸ್ಥೆಯಾಗಿರುವ ಕಾರಣದಿಂದಾಗಿ ಇಲ್ಲಿ ಕ್ವಾಲಿಟಿಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ತುಂಬಾ ನೆನಪು ಮಾಡುವಂತಹ ಫೋಟೋಗಳನ್ನು ನಾವು ಯಾವತ್ತೂ ಕೂಡ ಫ್ರೇಮ್ ಮಾಡಿ ಗೋಡೆಯಲ್ಲಿ ತೂಗು ಹಾಕುತ್ತೇವೆ. ಈ ಫೋಟೋ ಫ್ರೇಮ್ ಕೂಡ ಇಲ್ಲಿ 99 ರೂಪಾಯಿಗಳಿಗೆ ಸಿಗಲಿದೆ.

ಒಂದು ಮನೆಯಲ್ಲಿ ಟಾಯ್ಲೆಟ್ ಎಷ್ಟು ಶುಚಿಯಾಗಿರುತ್ತದೆಯೋ ಅಷ್ಟು ಮನೆಯವರ ಆರೋಗ್ಯ ಚೆನ್ನಾಗಿರುತ್ತದೆ ಹೀಗಾಗಿ ಟಾಯ್ಲೆಟ್ ಶುಚಿ ಮಾಡುವ ಬ್ರಷ್ ಕೇವಲ 89 ರೂಪಾಯಿ ಸಿಗಲಿದೆ. ಮನೆಯ ಸೌಂದರ್ಯವನ್ನು ಹೆಚ್ಚಿಸುವ ಅಲಂಕಾರಿಕ ಪ್ಲಾಸ್ಟಿಕ್ ಹೂಗಳು ಕೇವಲ ಅಂದರೆ ಕೇವಲ 89 ರೂಪಾಯಿಗಳಿಗೆ ಸಿಗಲಿದೆ. ಐಕಿಯದಲ್ಲಿ 100 ರೂಪಾಯಿಗೆ ಕಡಿಮೆ ದರದಲ್ಲಿ ಸಿಗುವ ಕ್ವಾಲಿಟಿ ವಸ್ತುಗಳು ಇದಾಗಿವೆ.