ತಂಡದಲ್ಲಿ ಸ್ಥಾನ ಅಷ್ಟೇ ಅಲ್ಲಾ, ದಿನೇಶ್ ಕಾರ್ತಿಕ್ ರವರಿಗೆ ಮತ್ತೊಂದು ಜವಾಬ್ದಾರಿ ವಹಿಸಿದ ರಾಹುಲ್ ದ್ರಾವಿಡ್, ಆರ್ಸಿಬಿ ಫ್ಯಾನ್ಸ್ ಗೆ ಇದು ಭರ್ಜರಿ ಸಿಹಿ ಸುದ್ದಿ. ಏನು ಗೊತ್ತೇ?

ತಂಡದಲ್ಲಿ ಸ್ಥಾನ ಅಷ್ಟೇ ಅಲ್ಲಾ, ದಿನೇಶ್ ಕಾರ್ತಿಕ್ ರವರಿಗೆ ಮತ್ತೊಂದು ಜವಾಬ್ದಾರಿ ವಹಿಸಿದ ರಾಹುಲ್ ದ್ರಾವಿಡ್, ಆರ್ಸಿಬಿ ಫ್ಯಾನ್ಸ್ ಗೆ ಇದು ಭರ್ಜರಿ ಸಿಹಿ ಸುದ್ದಿ. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲದೇ ಇರಬಹುದು ಆದರೆ ಭಾರತೀಯ ತಂಡಕ್ಕೆ ಒಬ್ಬ ಒಳ್ಳೆಯ ಪ್ಲೇಯರ್ ಅನ್ನು ನೀಡಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ರವರು ಇಂದು ಭಾರತೀಯ ಕ್ರಿಕೆಟ್ ತಂಡದ ಸೇವಿಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಗೆಳೆಯರೆ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಕಂಬ್ಯಾಕ್ ಮಾಡಿರುವ ದಿನೇಶ್ ಕಾರ್ತಿಕ್ ರವರು ಈ ಬಾರಿ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆಯಲೇಬೇಕು ಎನ್ನುವ ಹಠದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ.

Follow us on Google News

ಈಗಾಗಲೇ ಸೌತ್ ಆಫ್ರಿಕಾ ಸರಣಿಯಲ್ಲಿ ಕೂಡ ಅದ್ಭುತ ಬ್ಯಾಟಿಂಗ್ ದರ್ಶನವನ್ನು ನೀಡಿರುವ ದಿನೇಶ್ ಕಾರ್ತಿಕ್ ರವರನ್ನು ಐರ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಕೂಡ ಆಯ್ಕೆ ಮಾಡಲಾಗಿತ್ತು. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಹಾರ್ದಿಕ್ ಪಾಂಡ್ಯ ರವರು ನಾಯಕನಾಗಿ ಮುನ್ನಡೆಸಿದ್ದರು. ಇನ್ನು ಈಗಾಗಲೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಪ್ರಾರಂಭಿಸಲಾಗಿದ್ದು ಅನುಭವಿ ಆಟಗಾರರು ಈ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ. ಇದರ ನಡುವಲ್ಲಿ ಇಂಗ್ಲೆಂಡ್ ವಿರುದ್ಧ ಟಿ-ಟ್ವೆಂಟಿ ಸರಣಿಯ ಮುನ್ನವೇ ಭಾರತೀಯ ಕ್ರಿಕೆಟ್ ತಂಡ ನಾರ್ಥಾಂಪ್ಟನ್ ಶೈರ್ ಹಾಗೂ ಡರ್ಬಿ ಶೈರ್ ತಂಡಗಳ ವಿರುದ್ಧ ಎರಡು ಅಭ್ಯಾಸ ಟಿ20 ಪಂದ್ಯಗಳನ್ನು ಭಾರತೀಯ ಕ್ರಿಕೆಟ್ ತಂಡ ಆಡಳಿದೆ.

ಈ ಹಿನ್ನೆಲೆಯಲ್ಲಿ ಕೋಚ್ ರಾಹುಲ್ ದ್ರಾವಿಡ್ ದಿನೇಶ್ ಕಾರ್ತಿಕ್ ರವರಿಗೆ ಹೊಸ ಜವಾಬ್ದಾರಿಯನ್ನು ನೀಡಿದ್ದಾರೆ. ಹೌದು ಗೆಳೆಯರೇ ಈ ಅಭ್ಯಾಸ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ರವರಿಗೆ ನಾಯಕನ ಪಟ್ಟವನ್ನು ನೀಡಿದ್ದು ಹಾರ್ದಿಕ್ ಪಾಂಡ್ಯ ರವರಿಗೆ ವಿಶ್ರಾಂತಿಯನ್ನು ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಈ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಗೆದ್ದರೆ ಗೆಲುವಿನ ಸರಿಯಾ ಖಂಡಿತವಾಗಿ ದಿನೇಶ್ ಕಾರ್ತಿಕ್ ರವರಿಗೆ ಸಿಗಲಿದೆ. ಇದು ಅವರನ್ನು ಟಿ-ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಸೇರಲು ಮತ್ತಷ್ಟು ಅವಕಾಶವನ್ನು ತೆರೆದಿಡಲಿದೆ ಎಂಬುದಾಗಿ ಹೇಳಬಹುದಾಗಿದೆ.