ಕೇವಲ 395 ರುಪಾಯಿಗೆ ಜಿಯೋ ದಲ್ಲಿ ಇರುವ ಪ್ಲಾನ್ ನಲ್ಲಿ 84 ದಿನಗಳ ಅವಧಿಗೆ ಏನೆಲ್ಲಾ ಸಿಗುತ್ತಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಸಂಸ್ಥೆ ಮೊದಲ ಸ್ಥಾನದಲ್ಲಿ ಹಲವಾರು ಸಮಯಗಳಿಂದ ಲೂ ಕೂಡ ಇರಲು ಮುಖ್ಯ ಕಾರಣ ಎಂದರೆ ಅವರು ಸತತವಾಗಿ ಪರಿಚಯಿಸುತ್ತಿರುವ ಜನಪ್ರಿಯ ಯೋಜನೆಗಳು ಎಂದರೆ ತಪ್ಪಾಗಲಾರದು. ಈ ಜನಪ್ರಿಯ ಯೋಜನೆಗಳಿಂದಲೇ ಟೆಲಿಕಾಂ ಗ್ರಾಹಕರು ಜೀವ ಸಂಸ್ಥೆಯನ್ನು ತಮ್ಮ ಮೊದಲ ಆಯ್ಕೆ ಯನ್ನಾಗಿ ಮಾಡಿಕೊಳ್ಳುತ್ತಾರೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಜಿಯೋ ಸಂಸ್ಥೆ ಇತ್ತೀಚಿಗಷ್ಟೇ ಪರಿಚಯಿಸಿರುವ 395 ರೂಪಾಯಿಗಳ ರಿಚಾರ್ಜ್ ಪ್ಲಾನ್ ಕುರಿತಂತೆ.

ಇದರಲ್ಲಿ ಯಾವೆಲ್ಲ ಲಾಭ ಹಾಗೂ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಖಂಡಿತವಾಗಿ ಇಂಟರ್ನೆಟ್ ಡೇಟಾ ಕಡಿಮೆಯಾಗಿ ಬಳಸುವವರಿಗೆ ಇದೊಂದು ಅತ್ಯುತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಈ ಯೋಜನೆ 84 ದಿನಗಳ ವ್ಯಾಲಿಡಿಟಿ ಯೊಂದಿಗೆ ಬರುತ್ತದೆ. ಜಿಯೋ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಕೂಡ ರಿಚಾರ್ಜ್ ಪ್ಲಾನ್ ಜೊತೆಗೆ ಖಂಡಿತವಾಗಿ ಸಿಕ್ಕೆ ಸಿಗುತ್ತದೆ. ಇನ್ನು ಮತ್ತೊಂದು ಲಾಭವೆಂದರೆ ಸಾವಿರ ಉಚಿತ ಮೆಸೇಜ್ ಗಳ ಸೌಲಭ್ಯ ಕೂಡ ಈ ರಿಚಾರ್ಜ್ ಪ್ಲಾನ್ ನಲ್ಲಿ ದೊರಕುತ್ತದೆ. ಅನಿಮಿಯತ ಕರೆಗಳು ಕೂಡ ಈ ರಿಚಾರ್ಜ್ ಪ್ಲಾನ್ ಜೊತೆಗೆ ಯಾವುದೇ ನೆಟ್ವರ್ಕ್ನಲ್ಲಿ ಕೂಡ ಮಾಡಬಹುದಾಗಿದೆ.

ಈಗಾಗಲೇ ನಾವು ಮೊದಲೇ ಹೇಳಿರುವಂತೆ ಕಡಿಮೆ ಇಂಟರ್ನೆಟ್ ಬಳಕೆ ಮಾಡುವವರಿಗೆ ಇದೊಂದು ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ಹೆಚ್ಚು ದಿನಗಳ ಕಾಲ ಇವುಗಳ ಕರೆ ಹಾಗೂ ಎಸ್ಎಂಎಸ್ ಸೇವೆಯನ್ನು ಬಳಸುವಂತಹ ಅವಕಾಶ ಸಿಗಲಿದೆ. ಹೀಗಾಗಿ ಕೇವಲ 6gb ಇಂಟರ್ನೆಟ್ ಡೇಟಾ ಮಾತ್ರ ಸಿಗುತ್ತದೆ. ಒಂದು ವೇಳೆ ನೀವು ಕಡಿಮೆ ಇಂಟರ್ನೆಟ್ ಬಳಸುತ್ತಿದ್ದೀರಿ ಎಂದರೆ ಇದೊಂದು ಅತ್ಯುತ್ತಮ ರಿಚಾರ್ಜ್ ಆಯ್ಕೆಯಾಗಿದೆ ಎಂದು ಹೇಳಬಹುದಾಗಿದೆ.