ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ಓವರ್ ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದ ಬುಮ್ರಾ: 35 ರನ್ ಹೇಗೆ ಹರಿದು ಬಂತು ಗೊತ್ತೇ??

ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ಓವರ್ ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದ ಬುಮ್ರಾ: 35 ರನ್ ಹೇಗೆ ಹರಿದು ಬಂತು ಗೊತ್ತೇ??

206

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡಿನಲ್ಲಿ ಆಡುತ್ತಿದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಆರಂಭಿಕ ಆಘಾತವನ್ನು ಬ್ಯಾಟಿಂಗ್ನಲ್ಲಿ ಪಡೆದುಕೊಂಡಿತ್ತು. ನಂತರ ತಂಡವನ್ನು ಆಧರಿಸಿದ ರಿಷಬ್ ಪಂತ್ ತಂಡವನ್ನು ಉತ್ತಮ ಗುರಿಯೆಡೆಗೆ ಸಾಧಿಸುವಲ್ಲಿ ಯಶಸ್ವಿಯಾದರು. ರಿಷಬ್ ಪಂತ್ ರವರ ನಂತರ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗನ್ನು ಆಧರಿಸಿದ್ದು ಜಡ್ಡು. ರವೀಂದ್ರ ಜಡೇಜಾ ರವರು ಕೂಡ ಶತಕವನ್ನು ಬಾರಿಸಿ ಭಾರತೀಯ ಕ್ರಿಕೆಟ್ ತಂಡದ ಮೊತ್ತವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ.

Follow us on Google News

ಆದರೆ ಈಗ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಇವೆಲ್ಲದಕ್ಕಿಂತ ಹೆಚ್ಚಾಗಿ ಸುದ್ದಿ ಮಾಡ್ತಿರೋದು ತಂಡದ ನಾಯಕನಾಗಿ ಕಾಣಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ರವರು. ಹೌದು ಗೆಳೆಯರೇ ಜಸ್ಪ್ರೀತ್ ಬುಮ್ರಾ ರವರು ಈಗ ಕೇವಲ ಬೌಲರ್ ಆಗಿ ಮಾತ್ರವಲ್ಲದೆ ಬ್ಯಾಟ್ಸ್ಮನ್ ಆಗಿಯೂ ಕೂಡ ತಮ್ಮ ಸಾಧನೆಯ ಸ್ವರೂಪವನ್ನು ಜಗತ್ತಿಗೆ ತೋರ್ಪಡಿಸಿದ್ದಾರೆ. ಅದು ಕೂಡ ಇಂಗ್ಲೆಂಡ್ ತಂಡದ ಜಗದ್ವಿಖ್ಯಾತ ಬೌಲರ್ ಆಗಿರುವ ಸ್ಟುವರ್ಟ್ ಬ್ರಾಡ್ ರವರ ಎದುರು. ಈ ಮೂಲಕ ಟೆಸ್ಟ್ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಅತ್ಯಧಿಕ ರನ್ ಗಳಿಸಿರುವ ದಾಖಲೆಯನ್ನು ಮಾಡಿರುವ ವೆಸ್ಟ್ ಇಂಡೀಸ್ ಮೂಲದ ಬ್ರಿಯಾನ್ ಲಾರಾ ಹಾಗೂ ಆಸ್ಟ್ರೇಲಿಯಾ ಮೂಲದ ಜಾರ್ಜ್ ಬೈಲಿ ರವರ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ರವರು ಮುರಿದಿದ್ದಾರೆ. ಹೌದು ಗೆಳೆಯರೆ ಸ್ಟುವರ್ಟ್ ಬ್ರಾಡ್ ರವರ ಓವರ್ನಲ್ಲಿ ಬರೋಬ್ಬರಿ 35 ರನ್ನುಗಳನ್ನು ಬಾರಿಸಿದ್ದಾರೆ.

ಮೊದಲ ಎಸೆತವನ್ನು ಫೋರ್ ಬಾರಿಸಿದರೆ ಎರಡನೇ ಎಸೆತ ಅತಿರಿಕ್ತ ಬೌನ್ಸರ್ ಕಾರಣದಿಂದಾಗಿ ವೈಡ್ ನೀಡಲಾಯಿತು. ಇದರ ಜೊತೆಗೆ ನಾಲ್ಕು ಬೋನಸ್ ರನ್ ಗಳು ಕೂಡ ಸಿಕ್ಕಿವೆ. ಮತ್ತೊಂದು ಎಸೆತ ನೋಬಲ್ ಕೂಡ ಆಗಿದೆ. ಇದರ ಜೊತೆಗೆ ಭೂಮ್ರಾ ಎಸೆತದಲ್ಲಿ ನೇರವಾಗಿ ಸಿಕ್ಸರ್ ಕೂಡ ಬಾರಿಸಿದ್ದಾರೆ. ಮೂರನೇ ಎಸೆತದಲ್ಲಿ ಬೌಂಡರಿ ಕೂಡ ಬಂದಿದೆ. ನಾಲ್ಕನೇ ಎಸೆತವನ್ನು ಮತ್ತೆ ಬೌಂಡರಿ ಬಾರಿಸಿ ಐದನೇ ಎಸೆತವನ್ನು ಸಿಕ್ಸರ್ ಬಾರಿಸಿದ್ದಾರೆ. ಕೊನೆಯ ಎಸೆತವನ್ನು ಸಿಂಗಲ್ ಬಾರಿಸಿದರು. ಒಟ್ಟಾರೆಯಾಗಿ ಓವರ್ನಲ್ಲಿ 35 ರನ್ನು ಹರಿದುಬಂದಿದೆ. ಈ ಮೂಲಕ ಒಂದೇ ಓವರ್ ನಲ್ಲಿ ಟೆಸ್ಟ್ನಲ್ಲಿ ಅತ್ಯಂತ ಹೆಚ್ಚು ರನ್ನು ಬಿಟ್ಟುಕೊಟ್ಟಿರುವ ಬೌಲರ್ ಎನ್ನುವ ಅಪಖ್ಯಾತಿಗೆ ಸ್ಟುವರ್ಟ್ ಬ್ರಾಡ್ ಕಾರಣರಾಗಿದ್ದಾರೆ.