ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ವಿಶೇಷ ಕ್ಯಾಪ್ ಧರಿಸಿ ಕಣಕ್ಕೆ ಇಳಿದಿದ್ದು ಯಾಕೆ ಗೊತ್ತೇ?

2,224

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಕ್ರಿಕೆಟ್ ವಿಚಾರಕ್ಕಾಗಿ ಸಾಕಷ್ಟು ಸುದ್ದಿ ಮಾಡುತ್ತಿದೆ ಆದರೆ 2ನೇ ದಿನ ಎರಡು ತಂಡದ ಕ್ರಿಕೆಟಿಗರು ಬೇರೊಂದು ವಿಚಾರಕ್ಕಾಗಿ ಈಗ ಸುದ್ದಿಯಾಗುತ್ತಿದ್ದಾರೆ. ಹೌದು ಗೆಳೆಯರೇ ಎರಡು ತಂಡಗಳ ಆಟಗಾರರು ನೀಲಿಬಣ್ಣದ ಕ್ಯಾಪ್ ವನ್ನು ತೊಡುವ ಮೂಲಕ ಪ್ರತಿಯೊಬ್ಬರೂ ಕೂಡ ಆಶ್ಚರ್ಯಕ್ಕೆ ಒಳಗಾಗುವಂತೆ ಮಾಡುತ್ತಾರೆ. ಹೌದು ಗೆಳೆಯರೇ ಇದಕ್ಕೆ ಒಂದು ಕಾರಣವೂ ಕೂಡ ಇದೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಆಗಿರುವ ಬಾಬ್ ವಿಲ್ಲೀಸ್ ಅವರು ತಮ್ಮ 70ನೇ ವಯಸ್ಸಿನಲ್ಲಿ ಪ್ರಾಸ್ಟೇಟ್ ಕ್ಯಾನ್ಸ’ರ್ ಕಾರಣದಿಂದಾಗಿ ಮರಣವನ್ನು ಹೊಂದುತ್ತಾರೆ.

ಹೀಗಾಗಿ ಈ ಕ್ಯಾ’ನ್ಸರ್ ಇದುವರೆಗೂ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿಯೇ ಬಾಬ್ ವಿಲ್ಲಿಸ್ ರವರ ಪತ್ನಿ ಲಾರೆನ್ ಕ್ಲಾರ್ಕ್ ಹಾಗೂ ಅವರ ಸಹೋದರ ಸೇರಿದಂತೆ ಅವರ ಕುಟುಂಬಸ್ಥರು ಪ್ರಾಸ್ಟೇಟ್ ಕ್ಯಾ’ನ್ಸರ್ ಗಾಗಿ ಔಷಧಿಯನ್ನು ಕಂಡು ಹುಡುಕಲು ಬಾಬ್ ವಿಲ್ಲೀಸ್ ಫಂಡ್ ಅನು ಪ್ರಾರಂಭಿಸಿದ್ದಾರೆ. ವಿಲ್ಲಿಸ್ ಈಗಾಗಲೇ ಕ್ರಿಕೆಟಿಗೆ ಕೂಡ ಆಗಿದ್ದು ಇದೇ ಕಾರಣದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡ ಒಳ್ಳೆಯ ಪ್ರಯತ್ನಕ್ಕೆ ಕೈಜೋಡಿಸಿದೆ.

ಇದೇ ಕಾರಣಕ್ಕಾಗಿ 5ನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಎರಡು ತಂಡಗಳ ಆಟಗಾರರು ಬ್ಲೂ ಬಣ್ಣದ ಕ್ಯಾಪ್ಟನ್ ಧರಿಸುವ ಮೂಲಕ ಹಾಗೂ 45 ಸೆಕೆಂಡುಗಳ ಕಾಲ ಚಪ್ಪಾಳೆಯನ್ನು ತಟ್ಟುವ ಮೂಲಕ ಬಾಬ್ ವಿಲ್ಲಿಸ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಇನ್ನು ಎರಡು ತಂಡಗಳ ಆಟಗಾರರು ಧರಿಸಿರುವ ಕ್ಯಾಪನ್ನು ಬಿಡ್ಡಿಂಗ್ ನಲ್ಲಿ ಮಾರಿ ಅದರಿಂದ ಬರುವ ಹಣವನ್ನು ಫಂಡ್ ಗೆ ಸೇರಿಸಲಾಗುವುದು ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಕೇವಲ ಸಾಮಾನ್ಯವಾಗಿ ಮಾತ್ರವಲ್ಲದೆ ಎರಡು ತಂಡಗಳ ಆಟಗಾರರು ಈ ಕ್ಯಾಪನ್ನು ಧರಿಸುವ ಮೂಲಕ ಒಂದೊಳ್ಳೆ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Get real time updates directly on you device, subscribe now.