ಏನೇ ಮಾಡಿದರೂ ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಕೂಡ ಟೀಮ್ ಇಂಡಿಯಾದ ಸ್ಟಾರ್ ಆಟಗಾರನಿಗೆ ವಿಶ್ವಕಪ್ ನಲ್ಲಿ ಅವಕಾಶ ಇಲ್ಲ. ಯಾಕೆ ಗೊತ್ತೇ??

ಏನೇ ಮಾಡಿದರೂ ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಕೂಡ ಟೀಮ್ ಇಂಡಿಯಾದ ಸ್ಟಾರ್ ಆಟಗಾರನಿಗೆ ವಿಶ್ವಕಪ್ ನಲ್ಲಿ ಅವಕಾಶ ಇಲ್ಲ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈಯನ್ನು ಸಾಧಿಸಿದೆ ಎಂದು ಹೇಳಬಹುದಾಗಿದೆ. ಆದರೂ ಇಂಗ್ಲೆಂಡ್ ಟಕ್ಕರ್ ಕಾಂಪಿಟೇಷನ್ ನೀಡುತ್ತಿದೆ. ಇನ್ನು ಈ ವರ್ಷ ಭಾರತೀಯ ಕ್ರಿಕೆಟ್ ತಂಡ ಮುಖ್ಯವಾಗಿ ಪರಿಗಣಿಸುತ್ತಿರುವುದು ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ವಿಶ್ವಕಪ್ ವಿಚಾರ. ಕಳೆದ ಬಾರಿ ಟಿ-ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮುಖಭಂಗವನ್ನು ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಅನುಭವಿಸಿತು.

ಮೊದಲ ಟಿ20 ವಿಶ್ವಕಪ್ ಅನ್ನು ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಗೆದ್ದಿದೆ ಕೊನೆ ಹಾಗೂ ಮೊದಲು. ಅದರ ನಂತರ ಯಾವುದೇ ಟಿ-ಟ್ವೆಂಟಿ ವಿಶ್ವ ಕಪ್ ನ್ನು ಭಾರತೀಯ ಕ್ರಿಕೆಟ್ ತಂಡ ಗೆದ್ದಿಲ್ಲ. ಹೀಗಾಗಿ ಈ ಬಾರಿ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯದಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಗೆಲ್ಲಲೇ ಬೇಕು ಎನ್ನುವ ಹಠವನ್ನು ಹಿಡಿದಿದೆ. ಇದಕ್ಕಾಗಿ ಆಯ್ಕೆ ಸಮಿತಿ ಕೂಡ ಸಾಕಷ್ಟು ಕಸರತ್ತನ್ನು ಮಾಡುವ ಯೋಚನೆ ಮಾಡಿದೆ. ಸರಿಯಾದ ತಂಡವನ್ನು ಆಯ್ಕೆ ಮಾಡಿ ಆಸ್ಟ್ರೇಲಿಯ ನೆಲಕ್ಕೆ ಕಳಿಸುವ ಯೋಜನೆಯಲ್ಲಿದೆ. ಆದರೆ ಈ ಬಾರಿ ಈ ಒಬ್ಬ ಸ್ಟಾರ್ ಆಟಗಾರ ಆಸ್ಟ್ರೇಲಿಯ ನೆಲವನ್ನು ತಲುಪುವುದು ಅನುಮಾನವಾಗಿದೆ. ಹೌದು ಗೆಳೆಯರೇ ಅದು ಇನ್ಯಾರು ಅಲ್ಲ ರವಿಚಂದ್ರನ್ ಅಶ್ವಿನ್.

ಇತ್ತೀಚಿನದಿನಗಳಲ್ಲಿ ನಿಯಮಿತ ಓವರ್ಗಳ ಪಂದ್ಯದಿಂದ ರವಿಚಂದ್ರನ್ ಅಶ್ವಿನ್ ರವರು ಸಂಪೂರ್ಣವಾಗಿ ದೂರವಾಗುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಸ್ಪಿನ್ ವಿಚಾರಕ್ಕೆ ಬರುವುದಾದರೆ ಚಹಲ್ ಕುಲದೀಪ್ ಯಾದವ್ ಹಾಗೂ ರವಿ ಬಿಷ್ಣೋಯಿ ಅವರಂತಹ ಸ್ಟಾರ್ ಆಟಗಾರರಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಹಾಗೂ ದೀಪಕ್ ಹೂಡ ಕೂಡ ಪ್ರಮುಖ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಷ್ಟು ದೊಡ್ಡಮಟ್ಟದ ಕಾಂಪಿಟೇಷನ್ನಲ್ಲಿ ರವಿಚಂದ್ರನ್ ರವರು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದು ಅನುಮಾನ ಎಂಬುದಾಗಿ ಬಿಸಿಸಿಐ ಅಧಿಕಾರಿಗಳು ಹೇಳುತ್ತಿದ್ದಾರೆ.