ಬಿಗ್ ನ್ಯೂಸ್: ಕೊರೊನ ಕಡಿಮೆಯಾಗುತ್ತಿದ್ದಂತೆ ಜನಸಾಮಾನ್ಯರ ಹೊರೆ ಹಿಳಿಸಲು ಮುಂದಾದ ಕೇಂದ್ರ, ಅಂದು ಪೆಟ್ರೋಲ್ ಬೆಲೆ ಇಳಿಕೆ ಇಂದು ಅಡುಗೆ ಎಣ್ಣೆ. ಎಷ್ಟಾಗಿದೆ ಗೊತ್ತೇ?

ಬಿಗ್ ನ್ಯೂಸ್: ಕೊರೊನ ಕಡಿಮೆಯಾಗುತ್ತಿದ್ದಂತೆ ಜನಸಾಮಾನ್ಯರ ಹೊರೆ ಹಿಳಿಸಲು ಮುಂದಾದ ಕೇಂದ್ರ, ಅಂದು ಪೆಟ್ರೋಲ್ ಬೆಲೆ ಇಳಿಕೆ ಇಂದು ಅಡುಗೆ ಎಣ್ಣೆ. ಎಷ್ಟಾಗಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಲಾಕ್ಡೌನ್ ಕಾರಣದಿಂದಾಗಿ ನಮ್ಮ ದೇಶದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ಕೂಡ ಗಣನೀಯವಾಗಿ ಹೆಚ್ಚಳವನ್ನು ಕಂಡಿತ್ತು. ಹೀಗಾಗಿ ಜನಜೀವನ ದೈನಂದಿನ ಜೀವನದಲ್ಲಿ ಇಂತಹ ಬೆಲೆ ಏರಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಮಧ್ಯಮ ವರ್ಗದ ಹಾಗೂ ಮಧ್ಯಮವರ್ಗ ಕಿಂತ ಕೆಳವರ್ಗದಲ್ಲಿ ಇರುವ ಜನರಿಗೆ ಸರ್ಕಾರ ಈಗ ಶುಭ ಸುದ್ದಿಯನ್ನು ಹೇಳಲು ಹೊರಟಂತಿದೆ. ಕಡಲೆಕಾಯಿ ಎಣ್ಣೆಯನ್ನು ಹೊರತುಪಡಿಸಿ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಸದ್ಯದ ಮಟ್ಟಿಗೆ ಉಳಿದ ಪ್ಯಾಕ್ಡ್ ಎಣ್ಣೆ ಗಳ ಬೆಲೆ ಸರಾಸರಿ 150ರಿಂದ 190 ರೂಪಾಯಿಗಳ ಬೆಲೆಯಲ್ಲಿ ಪ್ರತಿ ಕೆಜಿಗೆ ಮಾರಾಟ ಮಾಡಲಾಗುತ್ತಿದೆ.

ದೇಶದ ಪ್ರತಿಷ್ಠಿತ ತೈಲ ಸಂಸ್ಥೆಗಳ ಆಗಿರುವ ಅದಾನಿ ವಿಲ್ಮರ್ ಹಾಗೂ ಮದರ್ ಡೈರಿ ಬೇರೆ ಬೇರೆ ವಿಧದ ಅಡುಗೆ ಎಣ್ಣೆಯ ಬೆಲೆಗಳನ್ನು ಪ್ರತಿ ಕೆಜಿಗೆ ಹತ್ತರಿಂದ ಹದಿನೈದು ರೂಪಾಯಿ ಕಡಿಮೆ ಮಾಡಿತ್ತು. ಕಳೆದ ವಾರವಷ್ಟೇ ಈ ಎರಡು ಸಂಸ್ಥೆಗಳು ಕೂಡ ಹೊಸ ಎಂಆರ್ಪಿ ಇರುವಂತಹ ಬೆಲೆಗಳು ಮಾರುಕಟ್ಟೆಗೆ ಬರಲಿವೆ ಎಂಬುದಾಗಿ ಕೂಡ ಘೋಷಣೆಯನ್ನು ಹೊರಡಿಸಿತ್ತು. ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವಂತೆ ಪ್ರತಿ ಪ್ರಮುಖ ಖಾದ್ಯ ತೈಲದ ಎಂಆರ್ಪಿ ಪ್ರತಿ ಕೆಜಿಗೆ ಹತ್ತರಿಂದ ಹದಿನೈದು ರೂಪಾಯಿ ಕಡಿತಗೊಳಿಸಲಾಗಿದೆ ಎಂಬುದಾಗಿ ಕೂಡ ಹೇಳಿದ್ದಾರೆ.

ಜೂನ್ 1ರಂದು 188.14 ರೂಪಾಯಿ ಶೇಂಗಾ ಎಣ್ಣೆಯ ಪ್ರತಿ ಕೆಜಿಗೆ ಬೆಲೆ ಇದ್ದಿದ್ದು. ಅದು ಈಗ 186.43 ರೂಪಾಯಿ ಇಳಿಕೆ ಕಂಡಿದೆ. 183.68 ರೂಪಾಯಿ ಇದ್ದ ಸಾಸಿವೆ ಎಣ್ಣೆ ಈಗ 180.65 ಆಗಿದೆ. ವನಸ್ಪತಿ ಎಣ್ಣೆ ಪ್ರತಿ ಕೆಜಿಗೆ ಬೆಲೆ 165 ರೂಪಾಯಿ ಆಗಿದೆ. ಸೂರ್ಯಕಾಂತಿ ಎಣ್ಣೆ 169.35 ರಿಂದ 167.67 ಆಗಿದೆ. ಸೂರ್ಯಕಾಂತಿ ಎಣ್ಣೆಯ ಬೆಲೆ 193 ರೂಪಾಯಿಯಿಂದ 189.99ಗೆ ಕುಸಿದಿದೆ. ತಾಳೆ ಎಣ್ಣೆ ಬೆಲೆ 156.4ರಿಂದ 152.52 ಕ್ಕೆ ಇಳಿದಿದೆ. ಸಾರ್ವಜನಿಕರಿಗೆ ಕಂಡಿತವಾಗಿ ಇದೊಂದು ಶುಭ ಸುದ್ದಿ ಎಂದರೆ ತಪ್ಪಾಗಲಾರದು.