ಮುಂದಿನ 2023 ರ ವಿಶ್ವಕಪ್ ನಲ್ಲಿ ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬಬಲ್ಲ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

ಮುಂದಿನ 2023 ರ ವಿಶ್ವಕಪ್ ನಲ್ಲಿ ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬಬಲ್ಲ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಏಕದಿನ ಕ್ರಿಕೆಟ್ ನಲ್ಲಿ ನಾಯಕ ರೋಹಿತ್ ಶರ್ಮಾ ರವರು ಯಾವ ಮಟ್ಟದ ದಾಖಲೆಯನ್ನು ಹೊಂದಿದ್ದಾರೆ ಎಂಬುದು ನಿಮಗೆಲ್ಲ ತಿಳಿದಿದೆ. ಕೆಲವು ಆಟಗಾರರು ಶತಕವನ್ನು ಸಿಡಿಸಲು ಕಷ್ಟಪಡುತ್ತಿದ್ದಾರೆ ಈ ಪುಣ್ಯಾತ್ಮ ಈಗಾಗಲೇ ದ್ವಿಶತಕ ಗಳ ಸುರಿಮಳೆ ಸುರಿಸಿದ್ದಾರೆ. ಆದರೆ ಮುಂದಿನ ವರ್ಷ ಅಂದರೆ 2023 ರ ವಿಶ್ವಕಪ್ ಪ್ರಾರಂಭವಾಗುವ ಹೊತ್ತಿಗೆ ರೋಹಿತ್ ಶರ್ಮಾ ರವರಿಗೆ 36ವರ್ಷ ವಯಸ್ಸಾಗುತ್ತದೆ ಹೀಗಾಗಿ ಹಿಂದಿನಂತೆ ಬ್ಯಾಟಿಂಗ್ ಮಾಡಲು ಅವರಿಂದ ಸಾಧ್ಯವಾಗುವುದಿಲ್ಲ. ಹಾಗಿದ್ದರೆ ಅವರ ಸ್ಥಾನವನ್ನು ತುಂಬಬಲ್ಲ ಅಂತಹ ಐದು ಟಾಪ್ ಆಟಗಾರರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕೆ ಎಲ್ ರಾಹುಲ್; ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಾರಂಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ರೋಹಿತ್ ಶರ್ಮಾ ರವರು ಅಷ್ಟೊಂದು ಚೆನ್ನಾಗಿ ಪ್ರದರ್ಶನ ನೀಡುತ್ತಿರಲಿಲ್ಲ ಆದರೆ ಧೋನಿ ರವರು ರೋಹಿತ್ ಶರ್ಮಾ ರವರಿಗೆ ಆರಂಭಿಕ ಆಟಗಾರರ ಅವಕಾಶವನ್ನು ನೀಡಿದ ಸಂದರ್ಭದಿಂದ ಅವರು ಭಾರತ ಕಂಡ ಅತ್ಯಂತ ಶ್ರೇಷ್ಠ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕಾಣಿಸಿಕೊಳ್ಳುತ್ತಾರೆ. ಕೆ ಎಲ್ ರಾಹುಲ್ ರವರು ಕೂಡ ಈಗ ಅದೇ ಮಾರ್ಗದಲ್ಲಿ ಸಾಗಿ ಬರುತ್ತಿದೆ ಹಲವಾರು ಪಂದ್ಯಗಳಲ್ಲಿ ತಮ್ಮನ್ನು ತಾವು ಅತ್ಯುತ್ತಮ ಓಪನಿಂಗ್ ಬ್ಯಾಟ್ಸ್ಮನ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ ಕೆಲವೊಂದು ವಿಚಾರಗಳಿಗಾಗಿ ತಂಡದಿಂದ ಅವರ ತಪ್ಪಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಏಕದಿನ ಪಂದ್ಯದಲ್ಲಿ ಕೂಡ ಅವರಿಗೆ ಓಪನಿಂಗ್ ಬ್ಯಾಟಿಂಗ್ ಮಾಡು ಅವಕಾಶವನ್ನು ನೀಡಿದರೆ ಖಂಡಿತವಾಗಿ ಅವರು ಭಾರತ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮ ರವರನ್ನು ಕೆಲವೇ ವರ್ಷಗಳಲ್ಲಿ ಅವರ ಸ್ಥಾನವನ್ನು ತುಂಬಬಲ್ಲ ಪರ್ಫೆಕ್ಟ್ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಪೃಥ್ವಿ ಶಾ; ಅಂಡರ್ 19 ಕ್ರಿಕೆಟ್ ತಂಡದಲ್ಲಿ ತಮ್ಮ ಓಪನಿಂಗ್ ಬ್ಯಾಟಿಂಗ್ ಪ್ರದರ್ಶನವನ್ನು ಸಾಬೀತು ಪಡಿಸಿರುವ ಪೃಥ್ವಿ ಶಾ ಟಿ20 ಫಾರ್ಮೆಟ್ ನಲ್ಲಿ ಕೂಡ ಐಪಿಎಲ್ನಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸಿದ್ದಾರೆ. ಅಂಡರ್ 19 ತಂಡದ ಚಾಂಪಿಯನ್ ಕಪ್ತಾನ ಆಗಿರುವ ಪೃಥ್ವಿ ಶಾ ಅವರಿಗೆ ರಾಹುಲ್ ದ್ರಾವಿಡ್ ಹಾಗೂ ರಿಕಿ ಪಾಂಟಿಂಗ್ ಅವರಂತಹ ದಿಗ್ಗಜ ಕ್ರಿಕೆಟಿಗರ ಮಾರ್ಗದರ್ಶನದ ಬೆಂಬಲವು ಕೂಡ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಆಕ್ರಮಣಕಾರಿಯಾಗಿ ನುಗ್ಗಿ ಬಾರಿಸುವಂತಹ ಕ್ಷಮತೆಯು ಕೂಡ ಇವರಲ್ಲಿ ಇರುವುದರಿಂದಾಗಿ ಅದು ಕೂಡ ಇನ್ನು ಅತ್ಯಂತ ಯುವ ಆಟಗಾರ ಆಗಿರುವ ಇವರು ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮತ್ತೊಬ್ಬ ರೋಹಿತ್ ಶರ್ಮ ಆಗಿ ಕಾಣಿಸಿಕೊಂಡರು ಕೂಡ ಅಚ್ಚರಿ ಏನಿಲ್ಲ.

ಶುಭಮನ್ ಗಿಲ್; ಗಿಲ್ ಕೂಡ ಅಂಡರ್-19 ತಂಡದ ಪ್ರತಿಭೆಯೇ ಆಗಿದ್ದಾರೆ. ಅಂದರೆ ಇವರು ಕೂಡ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಮತ್ತೊಬ್ಬ ಆಟಗಾರ. ಐಪಿಎಲ್ ನಲ್ಲಿ ಮಿಂಚುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಿರುವ ಇವರು ಅಲ್ಲಿಯೂ ಕೂಡ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸುವ ಮೂಲಕ ಯಾರಿಗೇನು ಕಮ್ಮಿ ಇಲ್ಲ ಎನ್ನುವುದನ್ನು ಇಷ್ಟೊಂದು ಚಿಕ್ಕವಯಸ್ಸಿನಲ್ಲಿ ತೋರ್ಪಡಿಸಿದ್ದಾರೆ. ಹೀಗಾಗಿ ಮುಂದಿನ ವರ್ಷದ ವಿಶ್ವಕಪ್ ಗೆ ರೋಹಿತ್ ಶರ್ಮ ರವರ ಸ್ಥಾನವನ್ನು ಗಿಲ್ ತುಂಬ ಬಹುದಾಗಿದೆ.

ಮಯಾಂಕ್ ಅಗರ್ವಾಲ್; ಕರ್ನಾಟಕ ಮೂಲದ ಆಟಗಾರ ಆಗಿರುವ ಮಯಾಂಕ್ ಅಗರ್ವಾಲ್ ರವರಿಗೆ ಆರಂಭಿಕ ಆಟಗಾರನಾಗಿ ಆಡಿರುವ ಹಲವಾರು ವರ್ಷಗಳ ಅನುಭವವಿದೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಇವರು ತಮ್ಮ ಸ್ಥಾನಕ್ಕೆ ನ್ಯಾಯವನ್ನು ಸಲ್ಲಿಸುವ ಆಟವನ್ನು ಆಡಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರನ್ನು ತಮ್ಮ ನೆಚ್ಚಿನ ಆಟಗಾರ ನನ್ನಾಗಿ ಇಷ್ಟಪಡುವವರು ಅವರಂತೆಯೇ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡುತ್ತಾರೆ. ಪೃಥ್ವಿ ಶಾ ಹಾಗೂ ಕೆಎಲ್ ರಾಹುಲ್ ರವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಜುರಿ ಆಗಿದ್ದಾಗ ಅವರ ಸ್ಥಾನವನ್ನು ರಿಪ್ಲೈ ಮಾಡುವ ಇವರು ವಿಶ್ವದ ಅತ್ಯಂತ ಬೆಸ್ಟ್ ಬೌಲಿಂಗ್ ಲೈನ್ ಅಪ್ ಇರುವ ತಂಡದೆದುರು ಕಷ್ಟದ ಪಿಚ್ ನಲ್ಲಿ ಬರೋಬ್ಬರಿ 77 ರನ್ನುಗಳನ್ನು ಬಾರಿಸುತ್ತಾರೆ. ಇವರು ಕೂಡ ಒಂದುವೇಳೆ ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬಬಲ್ಲಂತಹ ಆಟಗಾರನನ್ನು ಬಿಸಿಸಿಐ ಹುಡುಕುತ್ತಿದ್ದಾರೆ ಉತ್ತಮ ಆಯ್ಕೆ ಎಂದು ಹೇಳಬಹುದಾಗಿದೆ.

ಇಶಾನ್ ಕಿಶನ್; ಮಹೇಂದ್ರ ಸಿಂಗ್ ಧೋನಿ ರವರ ನಂತರ ಮತ್ತೊಬ್ಬ ಆಟಗಾರ ರಾಂಚಿಯಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಇಶಾನ್. ಇಶಾನ್ ಕಿಶನ್ ರವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಈ ವರ್ಷ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾದ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೂಡ ಅತ್ಯಂತ ಹೆಚ್ಚು ರನ್ ಗಳಿಸಿರುವ ಆಟಗಾರನಾಗಿ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಅವರ ಮಾರ್ಗದರ್ಶನದಲ್ಲಿ ಮುಂಬೈ ಇಂಡಿಯನ್ಸ್ ನಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿರುವ ಭಾರತದ ಸದ್ಯದ ಮಟ್ಟಿಗೆ ಇರುವಂತಹ ಅತ್ಯಂತ ಅಗ್ರೆಸ್ಸಿವ್ ಬ್ಯಾಟ್ಸ್ಮನ್ ಆಗಿದ್ದಾರೆ. ಅತ್ಯಂತ ಯುವ ಆಟಗಾರನಾಗಿರುವ ಇವರನ್ನು ಉತ್ತಮ ಮಾರ್ಗದರ್ಶನ ನೀಡಿ ಪ್ರತಿಯೊಂದು ಪಂದ್ಯದಲ್ಲಿ ಅವರ ನಿಜವಾದ ಆಟವನ್ನು ಪ್ರದರ್ಶಿಸುವ ಅವಕಾಶವನ್ನು ನೀಡಿದರೆ ಖಂಡಿತವಾಗಿ ಮುಂದಿನ ವಿಶ್ವಕಪ್ ನಲ್ಲಿ ರೋಹಿತ್ ಶರ್ಮ ರವರ ಸ್ಥಾನವನ್ನು ಸುಭದ್ರವಾಗಿ ಕಾಪಾಡಿಕೊಳ್ಳುವುದು ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಆಟಗಾರರ ಕುರಿತಂತೆ ಹಾಗೂ ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.