ಪ್ರೀತಿ ಕೈ ಕೊಟ್ಟರು ಸ್ನೇಹ ಕೈ ಕೊಡುವುದಿಲ್ಲ, ಅದರಲ್ಲಿಯೂ ಈ ರಾಶಿಯವರು ಸ್ನೇಹಕ್ಕಾಗಿ ಏನು ಮಾಡಲು ಬೇಕಾದರೂ ಸಿದ್ದ, ಯಾರ್ಯಾರು ಗೊತ್ತೇ?

ಪ್ರೀತಿ ಕೈ ಕೊಟ್ಟರು ಸ್ನೇಹ ಕೈ ಕೊಡುವುದಿಲ್ಲ, ಅದರಲ್ಲಿಯೂ ಈ ರಾಶಿಯವರು ಸ್ನೇಹಕ್ಕಾಗಿ ಏನು ಮಾಡಲು ಬೇಕಾದರೂ ಸಿದ್ದ, ಯಾರ್ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೆ ಪ್ರೀತಿಗಿಂತ ಸ್ನೇಹ ದೊಡ್ಡದು ಎನ್ನುವುದಾಗಿ ಹಿರಿಯವರು ಹೇಳುತ್ತಾರೆ. ಜ್ಯೋತಿಷ್ಯಶಾಸ್ತ್ರದಲ್ಲಿ ಕೂಡ ಕೆಲವೊಂದು ರಾಶಿಯವರು ಸ್ನೇಹಕ್ಕಾಗಿ ಏನು ಕೂಡ ಮಾಡಲು ಸಿದ್ಧರಾಗಿರುತ್ತಾರೆ ಅವರೊಂದಿಗೆ ಸ್ನೇಹ ಮಾಡುವುದು ನಮ್ಮ ಸೌಭಾಗ್ಯ ಎಂದು ಹೇಳಬಹುದು ಎಂಬುದಾಗಿ ಹೇಳಿದ್ದಾರೆ. ಅಂತಹ ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ; ಈ ರಾಶಿಯವರ ಮೊದಲು ಸ್ನೇಹ ಹಸ್ತಕ್ಕಾಗಿ ಕೈ ಚಾಚುತ್ತಾರೆ. ಸ್ನೇಹದಲ್ಲಿ ಯಾವುದೇ ಹುಡುಕಲು ಕಂಡು ಹುಡುಕುವುದಿಲ್ಲ. ವೃಷಭ ರಾಶಿ; ಸ್ನೇಹದಲ್ಲಿ ಏನೇ ನಡೆದರೂ ಕೂಡ ಸ್ನೇಹ ದೊಡ್ಡದು ಎನ್ನುವ ಭಾವನೆಯಿಂದಾಗಿ ಸ್ನೇಹಿತರು ಏನು ತಪ್ಪು ಮಾಡಿದರೂ ಕೂಡ ಅದನ್ನು ಕ್ಷಮಿಸಿ ಬಿಡುತ್ತಾರೆ.

ಸಿಂಹ ರಾಶಿ; ಸ್ನೇಹವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಅವರು ಭಾವಿಸುತ್ತಾರೆ ಹೀಗಾಗಿ ಸ್ನೇಹಕೆ ಏನು ಮಾಡಲು ಬೇಕಾದರೂ ಕೂಡ ಸಿದ್ಧರಾಗಿರುತ್ತಾರೆ. ಕನ್ಯಾ ರಾಶಿ; ಸ್ನೇಹವಿಲ್ಲದ ಜೀವನ ನಶ್ವರ ಎಂಬುದಾಗಿ ಇವರ ಭಾವನೆ ಹೀಗಾಗಿ ಏನೇ ಕಷ್ಟ-ಸುಖಗಳು ಇದ್ದರೂ ಕೂಡ ತಮ್ಮ ಸ್ನೇಹಿತರೊಂದಿಗೆ ಮೊದಲು ಶೇರ್ ಮಾಡಿಕೊಳ್ಳುತ್ತಾರೆ.

ವೃಶ್ಚಿಕ ರಾಶಿ; ಈ ರಾಶಿಯವರಿಗೆ ಜೀವನದಲ್ಲಿ ಸ್ನೇಹವನ್ನು ಬಿಟ್ಟರೆ ಬೇರೆ ಯಾವ ಸಂಬಂಧಗಳು ಕೂಡ ಕಣ್ಣಿಗೆ ರುಚಿಸುವುದಿಲ್ಲ ಹಾಗೂ ಸ್ನೇಹಕ್ಕಾಗಿ ಯಾವ ತ್ಯಾಗವನ್ನು ಮಾಡಲು ಬೇಕಾದರೂ ಕೂಡ ಸಿದ್ಧರಾಗಿರುತ್ತಾರೆ. ಧನು ರಾಶಿ; ಧನು ರಾಶಿಯವರು ಸ್ನೇಹವನ್ನು ಮಾಡಲು ಸಾಕಷ್ಟು ಬಾರಿ ಯೋಚಿಸುತ್ತಾರೆ ಆದರೆ ಒಮ್ಮೆ ಸ್ನೇಹ ಮಾಡಿದ ಮೇಲೆ ಸ್ನೇಹಿತನಿಗಾಗಿ ಯಾವ ಕಷ್ಟವನ್ನು ಕೂಡ ತೆಗೆದುಕೊಳ್ಳಲು ಸಿದ್ಧರಾಗಿರುತ್ತಾರೆ. ಈ ರಾಶಿಯವರೊಂದಿಗೆ ನೀವು ಸ್ನೇಹವನ್ನು ಮಾಡಿದರೆ ಖಂಡಿತವಾಗಿ ಜೀವನಪೂರ್ತಿ ಭಾಗ್ಯಶಾಲಿ ಅನ್ನುವ ಭಾವನೆಯೊಂದಿಗೆ ಬದುಕುತ್ತೀರಿ.