ಕಿಂಗ್ ಕೊಹ್ಲಿ ಮುಖ್ಯ ಅದು ಎಲ್ಲರಿಗೂ ಗೊತ್ತು, ಆದರೆ ಅವರು ಬಿಟ್ಟರೆ ಭಾರತಕ್ಕೆ ಈ ಮೂವರೇ ಗತಿ. ಇವರಿಲ್ಲದೆ ಗೆಲ್ಲಲು ಸಾಧ್ಯವೇ ಇಲ್ಲ. ಯಾರ್ಯಾರು ಗೊತ್ತೇ??

ಕಿಂಗ್ ಕೊಹ್ಲಿ ಮುಖ್ಯ ಅದು ಎಲ್ಲರಿಗೂ ಗೊತ್ತು, ಆದರೆ ಅವರು ಬಿಟ್ಟರೆ ಭಾರತಕ್ಕೆ ಈ ಮೂವರೇ ಗತಿ. ಇವರಿಲ್ಲದೆ ಗೆಲ್ಲಲು ಸಾಧ್ಯವೇ ಇಲ್ಲ. ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿ ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ನಡೆಯುವಂತಹ ಟಿ-20ವಿಶ್ವಕಪ್ ಗಾಗಿ ಭಾರತ ಕ್ರಿಕೆಟ್ ತಂಡ ಸೇರಿದಂತೆ ಪ್ರತಿಯೊಂದು ದೇಶಗಳು ಕೂಡ ತಯಾರಿಯನ್ನು ನಡೆಸುತ್ತಿವೆ. ಕಳೆದ ಬಾರಿ ವಿಶ್ವಕಪ್ ನಲ್ಲಿ ಮುಖಭಂಗ ಅನುಭವಿಸಿರುವ ಭಾರತ ಕ್ರಿಕೆಟ್ ತಂಡಕ್ಕೆ ಈ ಬಾರಿ ಕಪ್ ಗೆಲ್ಲುವುದು ಪ್ರಮುಖವಾಗಿದೆ. ಇನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿ ವಿಶ್ವಕಪ್ ಅಂದರೆ ಅಂತರಾಷ್ಟ್ರೀಯ ಮಟ್ಟದ ಐಸಿಸಿ ಈವೆಂಟ್ ಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರವರ ಅಗತ್ಯತೆ ತುಂಬಾನೇ ಇರುತ್ತದೆ. ಇವರಿಬ್ಬರು ಅನುಭವ ಭಾರತೀಯ ಕ್ರಿಕೆಟ್ ತಂಡವನ್ನು ಉತ್ತಮ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತದೆ.

ಇನ್ನು ಟಿ ಟ್ವೆಂಟಿ ವಿಶ್ವಕಪ್ ಗಾಗಿ ಪ್ರತಿ ದೇಶಗಳು ಕೂಡ ತಂಡವನ್ನು ಸಪ್ಟಂಬರ್ 15ರ ಒಳಗಡೆ ಗಾಗಿ ಬಿಡುಗಡೆ ಮಾಡಬೇಕಾಗಿದೆ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರನ್ನು ಒಳಗೊಂಡಂತಹ ಭಾರತೀಯ ಕ್ರಿಕೆಟ್ ತಂಡವನ್ನು ವಿಶ್ವಕಪ್ ಗಾಗಿ ಆಯ್ಕೆ ಮಾಡಬೇಕಾಗಿರುವುದು ಅಗತ್ಯವಾಗಿದೆ. ಅದರಲ್ಲೂ ಭಾರತೀಯ ಕ್ರಿಕೆಟ್ ತಂಡ ಇವರಿಬ್ಬರನ್ನು ಹೊರತುಪಡಿಸಿ ಈ ಮೂರು ಆಟಗಾರರನ್ನು ಆಯ್ಕೆ ಮಾಡಬೇಕಾಗಿರುವುದು ಪ್ರಮುಖವಾಗಿದೆ. ಹಾಗಿದ್ದರೆ ಅವರು ಯಾರು ಎಂಬುದನ್ನು ತಿಳಿಯೋಣ ಬನ್ನಿ. ಮೊದಲಿಗೆ ಹಾರ್ದಿಕ್ ಪಾಂಡ್ಯ; ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ನಾಯಕನಾಗಿ ಪಾದಾರ್ಪಣೆ ಮಾಡಿದ ಮೊದಲ ಆವೃತ್ತಿಯಲ್ಲಿಯೇ ಕಪ್ ಗೆಲ್ಲುತ್ತಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ ಹಾಗೂ ಐರ್ಲೆಂಡ್ ವಿರುದ್ಧದ ಟಿ-20 ಸರಣಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿದ್ದಾರೆ. ವೈಟ್ ಬಾಲ್ ಕ್ರಿಕೆಟ್ ನಲ್ಲಿ ಅವರ ಅನುಭವ ಹಾಗೂ ಪ್ರದರ್ಶನ ಅತ್ಯುತ್ತಮವಾಗಿ ಇರುವ ಕಾರಣದಿಂದಾಗಿ ಇವರು ಆಸ್ಟ್ರೇಲಿಯಾದ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಭಾರತೀಯ ತಂಡದಲ್ಲಿ ಬಹಳಷ್ಟು ಪರಿಣಾಮ ಬೀರಲಿದ್ದಾರೆ.

ಸೂರ್ಯ ಕುಮಾರ್ ಯಾದವ್; ಇತ್ತೀಚಿಗಷ್ಟೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರ ಸ್ಥಾನವನ್ನು ಪಡೆದುಕೊಂಡಿರಬಹುದು ಆದರೆ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಿಗೆ ಫಿನಿಶರ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ನಾಗಿ ತಮ್ಮ ಮೌಲ್ಯವನ್ನು ಸಾಬೀತುಪಡಿಸಿದ್ದಾರೆ. ಅದರಲ್ಲೂ ಟಿ-ಟ್ವೆಂಟಿ ಫಾರ್ಮೆಟ್ ನಲ್ಲಿ ಪರ್ಫೆಕ್ಟ್ ಆಟಗಾರ ಎಂದರೆ ತಪ್ಪಾಗಲಾರದು. ಇಶನ್ ಕಿಶನ್; ಈ ಬಾರಿ ಐಪಿಎಲ್ ನಲ್ಲಿ ನಿರಾಶದಾಯಕ ಪ್ರದರ್ಶನವನ್ನು ನೀಡಿದ್ದರೂ ಕೂಡ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಆಟಗಾರ ಆಗಿದ್ದಾರೆ. ಟಿ-ಟ್ವೆಂಟಿ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಭಾರತ ತಂಡದ ಅತ್ಯುತ್ತಮ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಆಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಮೂವರು ತಂಡದಲ್ಲಿ ಇರಲೇಬೇಕು.