ಆರ್ದ್ರ ನಕ್ಷತ್ರ ಪ್ರವೇಶ ಮಾಡಿದ ಗ್ರಹಗಳ ರಾಜ ಸೂರ್ಯ ದೇವ. ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ?

ಆರ್ದ್ರ ನಕ್ಷತ್ರ ಪ್ರವೇಶ ಮಾಡಿದ ಗ್ರಹಗಳ ರಾಜ ಸೂರ್ಯ ದೇವ. ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಆಗಿರುವ ಸೂರ್ಯದೇವನು ಮಿಥುನರಾಶಿಯಲ್ಲಿ ಈಗ ಸ್ಥಿತನಾಗಿದ್ದಾನೆ. ಜೂನ್ 22ರಂದು ಆರ್ದ್ರ ನಕ್ಷತ್ರಕ್ಕೆ ಸ್ಥಾನಪಲ್ಲಟವನ್ನು ಮಾಡಿರುವ ಕಾರಣದಿಂದಾಗಿ ಮೂರು ರಾಶಿಯವರಿಗೆ ಅದೃಷ್ಟದ ದಿನಗಳು ಒದಗಿ ಬರಲಿವೆ. ಹಾಗಿದ್ದರೆ ಸೂರ್ಯದೇವನ ಆರ್ದ್ರ ನಕ್ಷತ್ರಕ್ಕೆ ಸ್ಥಾನಪಲ್ಲಟ ಮಾಡಿರುವ ಹಿನ್ನೆಲೆಯಲ್ಲಿ ಜುಲೈ 6ರವರೆಗೆ ಅದೃಷ್ಟದ ದಿನಗಳನ್ನು ಕಾಣಲಿರುವ 3 ರಾಶಿಗಳು ಯಾವೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮಿಥುನ ರಾಶಿ; ಹೊಸ ಕೆಲಸವನ್ನು ಆರಂಭಿಸಬೇಕು ಎನ್ನುವ ಯೋಚನೆ ಇದ್ದರೆ ಪ್ರಾರಂಭಿಸಲು ಇದೊಂದು ಪ್ರಶಸ್ತವಾದ ಸಮಯ. ಮಾಡುವ ಕೆಲಸದಲ್ಲಿ ಸಿಗುವ ಪ್ರಗತಿಯಿಂದಾಗಿ ಬಡ್ತಿ ಹಾಗೂ ಆದಾಯ ಹೆಚ್ಚಳವು ಕೂಡ ನಡೆಯಲಿದ್ದು ಆರ್ಥಿಕವಾಗಿ ನೀವು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲಿದ್ದೀರಿ.

ಸಿಂಹ ರಾಶಿ; ಸಾಕಷ್ಟು ಸಮಯಗಳಿಂದ ಅರ್ಧದಲ್ಲಿ ನಿಂತುಕೊಂಡಿರುವ ಕೆಲಸಗಳು ಈ ಸಂದರ್ಭದಲ್ಲಿ ಸಂಪೂರ್ಣವಾಗಿ ಪರಿ ಪೂರ್ಣಗೊಳ್ಳುತ್ತದೆ. ಕೆಲಸದ ಕ್ಷೇತ್ರದಲ್ಲಿ ಪ್ರಮೋಷನ್ ಹಾಗೂ ಆದಾಯದ ಹೆಚ್ಚಳದ ಸಿಹಿಸುದ್ದಿ ಸಿಗಲಿದೆ. ಹೊಸ ವಾಹನವನ್ನು ಖರೀದಿಸಬೇಕು ಎನ್ನುವ ಇಚ್ಛೆ ಇದ್ದರೆ ಈ ಸಂದರ್ಭದಲ್ಲಿ ನೀವು ಖರೀದಿಸಬಹುದಾಗಿದೆ. ನಿಮ್ಮನ್ನು ಕಂಡರೆ ಆಗದವರು ಈ ಸಂದರ್ಭದಲ್ಲಿ ನಿಮ್ಮ ವಿರುದ್ಧ ಕಾರ್ಯತಂತ್ರವನ್ನು ನೆನೆಯಬಹುದಾಗಿದೆ ಆದರೆ ಅದೆಲ್ಲವೂ ಕೂಡ ವಿಫಲವಾಗಲಿವೆ.

ಕನ್ಯಾ ರಾಶಿ; ಇವರು ಪರಿಶ್ರಮದಿಂದ ಕೆಲಸ ಮಾಡುವ ಕಾರಣದಿಂದಾಗಿ ಇವರ ಪರಿಶ್ರಮಕ್ಕೆ ತಕ್ಕಂತಹ ಪ್ರತಿಫಲ ಸಿಗಲಿದೆ. ಈಗಾಗಲೇ ಈ ರಾಶಿಯವರು ಮಾಡುತ್ತಿರುವ ಕೆಲಸದಲ್ಲಿ ಉನ್ನತಿ ದೊರೆಯಲಿದ್ದು ಸರ್ಕಾರಿ ಕೆಲಸದ ಅಪೇಕ್ಷೆಯಲ್ಲಿ ಇರುವವರಿಗೆ ಉತ್ತಮ ಸುದ್ದಿ ಶೀಘ್ರದಲ್ಲಿ ಕೇಳಿಬರಲಿದೆ. ಸೂರ್ಯನ ನಕ್ಷತ್ರ ಬದಲಾವಣೆಯಿಂದಾಗಿ ಈ ಮೂರು ರಾಶಿಯವರಿಗೆ ಲಾಭ ಉಂಟಾಗಲಿದೆ.