ವಿರಾಟ್ ಕೊಹ್ಲಿ ರವರಿಗೆ ವಿಶೇಷ ಸಂದೇಶ ರವಾನೆ ಮಾಡಿದ ಮಾಜಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಹೇಳಿದ್ದೇನು ಗೊತ್ತೇ?

ವಿರಾಟ್ ಕೊಹ್ಲಿ ರವರಿಗೆ ವಿಶೇಷ ಸಂದೇಶ ರವಾನೆ ಮಾಡಿದ ಮಾಜಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ರವರ ಪ್ರದರ್ಶನ ನಿಜಕ್ಕೂ ಕೂಡ ಅತ್ಯಂತ ನೀರಸವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಹೌದು ಗೆಳೆಯರೇ ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಅವರು ತಮ್ಮ ಬ್ಯಾಟಿಂಗ್ ಮೂಲಕ ಉತ್ತರವನ್ನು ನೀಡುವುದನ್ನೇ ಮರೆತುಬಿಟ್ಟಿದ್ದಾರೆ ಎಂದು ಹೇಳುವಷ್ಟರ ಮಟ್ಟಿಗೆ ಕಳಪೆ ಪ್ರದರ್ಶನವನ್ನು ತೋರುತ್ತಿದ್ದಾರೆ. ರನ್ ಮಷೀನ್ ಆಗಿರುವ ವಿರಾಟ್ ಕೊಹ್ಲಿ ರವರು ಕೊನೆಯ ಬಾರಿಗೆ ಸೆಂಚುರಿ ಸಿಡಿಸಿದ್ದು 2019 ರಲ್ಲಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ. ಅದಾದ ನಂತರ ಯಾವುದೇ ಫಾರ್ಮ್ಯಾಟ್ ನಲ್ಲಿ ಸೆಂಚುರಿಯನ್ನೂ ಬಾರಿಸಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಅವರ ಕಳಪೆ ಫಾರ್ಮ್ ನಿಂದಾಗಿ ಅವರು ಮೂರು ಫಾರ್ಮೆಟ್ ಗಳಲ್ಲಿ ನಾಯಕನ ಸ್ಥಾನವನ್ನು ಕಳೆದುಕೊಳ್ಳಬೇಕಾಗಿ ಬಂತು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅವರ ಕಳಪೆ ಫಾರ್ಮ್ ಮುಂದುವರೆದಿದ್ದು ಸ್ಥಾನವನ್ನು ಕಳೆದುಕೊಳ್ಳುವ ಭೀ’ತಿಯನ್ನು ಕೂಡ ಎದುರಿಸ ಬಹುದಾಗಿದೆ. ಈ ಕುರಿತಂತೆ 1983 ರ ವಿಶ್ವಕಪ್ ವಿಜೇತ ತಂಡದ ನಾಯಕ ಹಾಗೂ ಆಲ್-ರೌಂಡರ್ ಆಟಗಾರರಾಗಿರುವ ಕಪಿಲ್ ದೇವ್ ರವರು ಕೆಲವೊಂದು ವಿಚಾರಗಳನ್ನು ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಅವರಷ್ಟು ನಾನು ಕ್ರಿಕೆಟ್ ಆಡಬಹುದು ಆದರೆ ಕೆಲವೊಂದು ವಿಚಾರಗಳು ತಪ್ಪು ನಡೆಯುತ್ತಿರಬೇಕಾದರೆ ಅದರ ಕುರಿತಂತೆ ಮಾತನಾಡುವುದು ಹಾಗೂ ಅವರು ಅದನ್ನು ತಿದ್ದಿಕೊಳ್ಳಬೇಕು ಎಂದು ನಾವು ಹೇಳುವುದರಲ್ಲಿ ತಪ್ಪಿಲ್ಲ. ಅಷ್ಟು ಕ್ರಿಕೆಟನ್ನು ನಾನು ತಿಳಿದುಕೊಂಡಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ರವರ ಬ್ಯಾಟ್ ನಿಂದ ಎರಡುವರೆ ವರ್ಷಗಳಿಂದ ಶತಕ ಬರದಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿ. ರಾಹುಲ್ ದ್ರಾವಿಡ್ ಸಚಿನ್ ತೆಂಡೂಲ್ಕರ್ ಸುನಿಲ್ ಗವಾಸ್ಕರ್ ವೀರೇಂದ್ರ ಸೇವಾಗ್ ರವರಿಗೆ ಹೋಲಿಕೆ ಮಾಡುವಂತಹ ಆಟಗಾರ ಕಳಪೆ ಪ್ರದರ್ಶನವನ್ನು ನೀಡುತ್ತಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿ ಇಲ್ಲೇನೋ ತಪ್ಪಿದೆ ಅದನ್ನು ತಿದ್ದಿಕೊಂಡು ಮತ್ತೊಮ್ಮೆ ಫಾರ್ಮಿಗೆ ಮರಳ ಬೇಕಾಗಿದೆ ಅದೇ ನಮ್ಮ ಆಸೆ ಕೂಡ ಆಗಿದೆ. ನಿಮ್ಮ ತಪ್ಪಿನ ಕುರಿತಂತೆ ನಾವು ಮಾತನಾಡುತ್ತೇವೆ ಆದರೆ ನಮ್ಮ ಮಾತನ್ನು ತಪ್ಪು ಇನ್ನು ಹಾಗೆ ನೀವು ಪ್ರದರ್ಶನದ ಮೂಲಕ ಉತ್ತರ ನೀಡಿದರೆ ನಮಗೆ ಸಂತೋಷ ಎಂಬುದಾಗಿ ಕಪಿಲ್ ದೇವ್ ಹೇಳಿದ್ದಾರೆ.