ಕಿಂಗ್ ಕೊಹ್ಲಿ ಫಾರ್ಮ್ ಕಳೆದುಕೊಂಡು ಈ ಸ್ಥಿತಿ ಬರಲು, ಪ್ರಮುಖ ಕಾರಣ ಯಾರಂತೆ ಗೊತ್ತೇ?? ಆತನಿಂದಲೇ ಕೊಹ್ಲಿ ಹೀಗಾಗಿದ್ದ ??

ಕಿಂಗ್ ಕೊಹ್ಲಿ ಫಾರ್ಮ್ ಕಳೆದುಕೊಂಡು ಈ ಸ್ಥಿತಿ ಬರಲು, ಪ್ರಮುಖ ಕಾರಣ ಯಾರಂತೆ ಗೊತ್ತೇ?? ಆತನಿಂದಲೇ ಕೊಹ್ಲಿ ಹೀಗಾಗಿದ್ದ ??

ನಮಸ್ಕಾರ ಸ್ನೇಹಿತರೆ ಈಗಾಗಲೆ ನಿಮಗೆಲ್ಲರಿಗೂ ತಿಳಿದಿರುವಂತೆ ಈ ವರ್ಷದ ಅಕ್ಟೋಬರ್ ಹಾಗೂ ನವಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಎನ್ನುವುದು ಭಾರತೀಯ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಮಹತ್ವವನ್ನು ವಹಿಸಿದೆ. ಅದರಲ್ಲೂ ವಿರಾಟ್ ಕೊಹ್ಲಿ ರವರ ಫಾರ್ಮ್ ಎನ್ನುವುದು ಭಾರತೀಯ ಕ್ರಿಕೆಟ್ ತಂಡಕ್ಕೆ ಸಾಕಷ್ಟು ತಲೆನೋ’ವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ವಿದೇಶಿ ಆಟಗಾರರಿಗೆ ಸಿಂಹಸ್ವಪ್ನರಾಗಿದ್ದ ವಿರಾಟ್ ಕೊಹ್ಲಿ ರವರು ಇತ್ತೀಚಿನ ದಿನಗಳಲ್ಲಿ ಎರಡಂಕಿಯನ್ನು ದಾಟಲು ಪರದಾಡುತ್ತಿದ್ದಾರೆ ಎನ್ನುವುದೇ ಸಂಕಟದ ವಿಚಾರವಾಗಿದೆ. 2019 ರ ನಂತರ ವಿರಾಟ್ ಕೊಹ್ಲಿ ರವರ ಫಾರ್ಮ್ ಎನ್ನುವುದು ನಿಜಕ್ಕೂ ಕೂಡ ಶೋಚನೀಯವಾಗಿದೆ.

ಒಂದು ಕಾಲದಲ್ಲಿ ಸಚಿನ್ ತೆಂಡೂಲ್ಕರ್ ರವರ 100 ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ರವರು ಮುರಿಯುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಅಷ್ಟೊಂದು ವೇಗವಾಗಿ ಶತಕಗಳ ಮೇಲೆ ಶತಕಗಳನ್ನು ಬಾರಿಸುತ್ತ ಬಂದಿದ್ದರು. ಆದರೆ ಈಗ ಶತಕ ವಿರಲಿ ಐಪಿಎಲ್ ನಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಯಾವ ರೀತಿ ಪ್ರದರ್ಶನ ಮಾಡಬಹುದು ಎನ್ನುವ ಅನುಮಾನವನ್ನು ಮೂಡಿಸುವಂತೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ರವರು ಔಟ್ ಆಫ್ ಫಾರ್ಮ್ ಆಗಲು ಕಾರಣ ಏನು ಎಂಬುದಾಗಿ ಎಲ್ಲರೂ ಯೋಚಿಸುತ್ತಿದ್ದಾರೆ ಅದೇ ವೇಳೆಗೆ ಪಾಕಿಸ್ತಾನದ ಮೂಲದ ಮಾಜಿ ವಿಕೆಟ್ ಕೀಪರ್ ಆಗಿರುವ ರಶಿದ್ ಲತಿಫ್ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಈ ವಿಚಾರದ ಕುರಿತಂತೆ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಗೆ ಕಾರಣ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿ ಎಂಬುದಾಗಿ ಹೇಳಿದ್ದಾರೆ. ಅವರಿಗೆ ಕೋಚ್ ಆಗುವ ಅರ್ಹತೆ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಅವರು ಕಾಮೆಂಟ್ರಿ ಬಾಕ್ಸ್ನಲ್ಲಿ ಸೀಮಿತವಾಗಿದ್ದರೆ ಒಳ್ಳೆಯದಾಗಿತ್ತು. ಕುಂಬ್ಳೆ ರವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಿ ರವಿಶಾಸ್ತ್ರಿ ಅವರನ್ನು ಕೋಚ್ ಮಾಡಿದ್ದೆ ವಿರಾಟ್ ಕೊಹ್ಲಿ ರವರ ಹಿನ್ನಡೆಗೆ ಕಾರಣವಾಗಿದೆ ಎಂಬುದಾಗಿ ಲತೀಫ್ ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದ್ದು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಯಾವರೀತಿಯ ಪ್ರದರ್ಶನವನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.