ಅಗ್ನಿಪಥ್ ಯೋಜನೆಗೆ ಸಂಪೂರ್ಣ ಎಂಟ್ರಿ ಕೊಟ್ಟ ಅಜಿತ್ ದೋವಲ್, ಖಡಕ್ ಆಗಿ ಹೇಳಿದ್ದೇನು ಗೊತ್ತೇ??, ಮುಂದಿದೆ ಮಾರಿ ಹಬ್ಬ??

ಅಗ್ನಿಪಥ್ ಯೋಜನೆಗೆ ಸಂಪೂರ್ಣ ಎಂಟ್ರಿ ಕೊಟ್ಟ ಅಜಿತ್ ದೋವಲ್, ಖಡಕ್ ಆಗಿ ಹೇಳಿದ್ದೇನು ಗೊತ್ತೇ??, ಮುಂದಿದೆ ಮಾರಿ ಹಬ್ಬ??

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಪ್ರಕಟಿತ ವಾಗಿರುವ ಅಲ್ಪಾವಧಿ ಮಿಲಿಟರಿ ನೇಮಕಾತಿ ಯೋಜನೆಯಾಗಿರುವ ಅಗ್ನಿಪಥ್ ಗೆ ಹಲವಾರು ವಿರೋಧಿ ಪ್ರತಿಭಟನೆಗಳು ಈಗಾಗಲೇ ದೇಶದಾದ್ಯಂತ ಕೆಲವೊಂದು ಪ್ರದೇಶಗಳಲ್ಲಿ ನಡೆದಿರುವುದು ನಿಮಗೆಲ್ಲರಿಗೂ ಸುದ್ದಿವಾಹಿನಿಗಳ ಮೂಲಕ ತಿಳಿದು ಬಂದಿದೆ. ನಿಜಕ್ಕೂ ಕೂಡ ಇಂತಹ ಪ್ರತಿಭಟನೆಗಳಲ್ಲಿ ಸಾರ್ವಜನಿಕ ಸ್ಥಳಗಳ ಹಲವಾರು ಆಸ್ತಿಪಾಸ್ತಿಗಳು ಹಾನಿಗೆ ಒಳಗಾಗಿರುವುದು ಕೂಡ ಈಗಾಗಲೇ ವಿಡಿಯೋಗಳಲ್ಲಿ ನೀವು ನೋಡಿರಬಹುದಾಗಿದೆ. ಈ ಕುರಿತಂತೆ ಈಗ ಕಣಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಗಿರುವ ಅಜಿತ್ ದೋವಲ್ ರವರೆ ಇಳಿದಿದ್ದಾರೆ.

ಅಗ್ನಿಪಥ್ ಯೋಜನೆಯನ್ನು ಹಿಂದೆ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ ಹಿಂ’ಸಾಚಾರವನ್ನು ಯಾವತ್ತೂ ಸಹಿಸಲು ಸಾಧ್ಯವೇ ಇಲ್ಲ ಎಂಬುದಾಗಿ ಖಡಕ್ಕಾಗಿ ಪ್ರತಿಭಟನಾಕಾರರಿಗೆ ಜವಾಬ್ ಅನ್ನು ನೀಡಿದ್ದಾರೆ. ಶಸ್ತ್ರ ಪಡೆಗಳ ಆಧುನಿಕ ಉನ್ನತಿಕರಣ ಇದಾಗಿದ್ದು ಸೇನೆಯಲ್ಲಿ ಸದೃಢ ಹಾಗೂ ಚಾಣಾಕ್ಷಮತಿ ಗಳ ಅವಶ್ಯಕತೆ ಇದ್ದು ಅಗ್ನಿಪಥ್ ಯೋಜನೆ ಇದಕ್ಕೆ ಬಹುವಾಗಿ ಸಹಕಾರಿ ಆಗಿರಲಿದೆ ಎಂಬುದಾಗಿ ಅಜಿತ್ ದೋವಲ್ ಹೇಳಿದ್ದಾರೆ. ಮೂರು ವಿಭಾಗದ ಸೈನ್ಯದ ಸರ್ವತೋಮುಖ ಅಭಿವೃದ್ಧಿ ಹಾಗೂ ಉನ್ನತೀಕರಣದ ವಿಚಾರದಲ್ಲಿ ಅಗ್ನಿ ವೀರರ ನೇಮಕಾತಿ ಸಾಕಷ್ಟು ಸಹಕಾರಿ ಆಗಿರಲಿದೆ ಹೀಗಾಗಿ ಈ ಯೋಜನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಯಾವುದೇ ಪ್ರಶ್ನೆ ಇಲ್ಲ ಎಂಬುದಾಗಿ ಹೇಳಿದ್ದು ಈ ಯೋಜನೆ ಪ್ರಕಟವಾದ ನಂತರ ಒಂದು ವಾರವಾದರೂ ಕೂಡ ಇನ್ನು ಕೂಡ ಪ್ರತಿಭಟನೆ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿಯೇ ಅಜಿತ್ ದೋವಲ್ ರವರು ಈ ಪ್ರಕಟಣೆಯನ್ನು ಅಧಿಕೃತವಾಗಿ ಹೇಳಿದ್ದಾರೆ.

ಈಗಾಗಲೇ ಈ ಯೋಜನೆಯ ವಿರುದ್ಧ ಸುಪ್ರೀಂಕೋರ್ಟಿಗೆ ಹಲವಾರು ಅರ್ಜಿಗಳು ಕೂಡ ಸಲ್ಲಿಕೆಯಾಗಿವೆ. ಇನ್ನು ಈ ಕುರಿತಂತೆ ಕೇಂದ್ರ ಸರ್ಕಾರವು ಮೂರು ಸೇನೆಯ ವಿಭಾಗದ ಮುಖ್ಯಸ್ಥರ ಜೊತೆಗೂ ಕೂಡ ಚರ್ಚಿಸಿದ್ದು ಈಗಾಗಲೇ ನೇಮಕಾತಿ ಜೋರಾಗಿ ನಡೆಯುತ್ತಿದೆ. ಹರಿಯಾಣದ ಮುಖ್ಯಮಂತ್ರಿ ಗಳಾಗಿರುವ ಮನೋಹರ್ ಲಾಲ್ ಖಟ್ಟರ್ ನಾಲ್ಕು ವರ್ಷದ ಸೇನೆಯ ಸೇವೆಯ ಅವಧಿಯ ನಂತರ ಹೊರಬರುವ ಅಗ್ನಿ ವೀರರಿಗೆ ರಾಜ್ಯಸರ್ಕಾರದ ಕೆಲಸಗಳನ್ನು ನೀಡುವ ಹೊಣೆ ನಮ್ಮದು ಎಂಬುದಾಗಿ ಈಗಾಗಲೇ ಘೋಷಿಸಿದ್ದಾರೆ. ಒಟ್ಟಾರೆಯಾಗಿ ಸೇನೆಯ ಬಲವನ್ನು ಹೆಚ್ಚು ಮಾಡುವುದರ ಜೊತೆಗೆ ದೇಶದಲ್ಲಿ ನಿರುದ್ಯೋಗದ ಸಂಖ್ಯೆಯನ್ನು ಕೂಡ ಈ ಯೋಜನೆ ಕಡಿಮೆ ಮಾಡುತ್ತಿದ್ದೇನೆ ಇದರಲ್ಲಿ ಯಾವುದೇ ಅನುಮಾನವಿಲ್ಲ.