ನೀವು ನಿಮ್ಮ ಮನೆಯಲ್ಲಿ ಕರೆಂಟ್ ಬಿಲ್ ಕಡಿಮೆ ಮಾಡಬೇಕು ಎಂದರೆ, ಏನೆಲ್ಲಾ ಮಾಡಿ ಉಳಿಸಬಹುದು ಗೊತ್ತೇ?? ಉಳಿಸಿ ಮನೆ ಬೆಳೆಸಿ.

ನೀವು ನಿಮ್ಮ ಮನೆಯಲ್ಲಿ ಕರೆಂಟ್ ಬಿಲ್ ಕಡಿಮೆ ಮಾಡಬೇಕು ಎಂದರೆ, ಏನೆಲ್ಲಾ ಮಾಡಿ ಉಳಿಸಬಹುದು ಗೊತ್ತೇ?? ಉಳಿಸಿ ಮನೆ ಬೆಳೆಸಿ.

5 ವರ್ಷಕ್ಕೊಮ್ಮೆ ಬರುವ ಎಲ್ಲಾ ಸರ್ಕಾರಗಳು ಸಹ ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ವಿದ್ಯುತ್ ನೀಡುವುದಾಗಿ ಭರವಸೆ ನೀಡುತ್ತಾರೆ. ಆದರೆ ಜನರು ಮಾತ್ರ, ತಮ್ಮ ಮನೆಯ ಎಲೆಕ್ಟ್ರಿಸಿಟಿ ಬಿಲ್ ಜಾಸ್ತಿ ಬಂದಿದೆ ಎಂದು ಯೋಚನೆ ಮಾಡುತ್ತಾರೆ. ಇಂದು ನಾವು ನಿಮಗೆ ಈ ರೀತಿ ಹೆಚ್ಚಾಗಿ ಬರುವ ಎಲೆಕ್ಟ್ರಿಸಿಟಿ ಬಿಲ್ ಅನ್ನು ಕಡಿಮೆ ಮಾಡುವ ದಾರಿ ಹೇಳಿಕೊಡುತ್ತೇವೆ. ಯಾವುದೇ ಸೌಲಭ್ಯವನ್ನು ಕಡಿಮೆ ಮಾಡದೆ, ಸುಲಭವಾಗಿ ಎಲೆಕ್ಟ್ರಿಸಿಟಿ ಬಿಲ್ ಕಡಿಮೆ ಬರುವ ಹಾಗೆ ಮಾಡಲು ಈ ಕ್ರಮಗಳನ್ನು ಅನುಸರಿಸಿ.

1.ನಿಮ್ಮ ಮನೆಯಲ್ಲಿರುವ ರೆಫ್ರಿಜಿರೇಟರ್ ನ ಟೆಂಪರೇಚರ್ ಅನ್ನು ಕೆಲವು ಡಿಗ್ರಿಗಳು ಹೆಚ್ಚಿಗೆ ಮಾಡುವ ಮೂಲಕ ನೀವು ವಿದ್ಯುತ್ ಉಳಿತಾಯ ಮಾಡಬಹುದು. ಆಹಾರ ಫ್ರೆಶ್ ಆಗಿರಲು 36-39°ಗಳಷ್ಟು ಟೆಂಪರೇಚರ್ ಸಾಕು.
2.ಮನೆಯಲ್ಲಿ ಬಳಸುವ ವಾಷಿಂಗ್ ಮಷಿನ್ ಅನ್ನು ಸರಿಯಾದ ಸಮಯದಲ್ಲಿ, ಆಗಾಗ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಕಡಿಮೆ ಸಮಯ ಡ್ರೈಯರ್ ಹೆಚ್ಚಿನ ಕೆಲಸ ಮಾಡುತ್ತದೆ. ಬೆಳಗಿನ ಅವಧಿಯಲ್ಲಿ ಬಟ್ಟೆ ಒಗೆಯಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ, ರಾತ್ರಿ ಸಮಯ ಇದಕ್ಕೆ ಸೂಕ್ತವಾಗಿದೆ.
3.ಬೇಸಿಗೆ ಸಮಯದಲ್ಲಿ ಕಿಟಕಿಯನ್ನು ಹೆಚ್ಚು ತೆರೆದು ಇಡಿ. ಇದರಿಂದಾಗಿ ಗಾಳಿ ನಿಮ್ಮ ಮನೆಯ ಒಳಗೆ ಬೀಸುತ್ತದೆ, ಮನೆಯ ವಾತಾವರಣ ತಂಪಾಗಿರುತ್ತದೆ. ಈ ಮೂಲಕ ಎಸಿ, ಕೂಲರ್ ಗಳಿಂದ ಖರ್ಚಾಗುವ ವಿದ್ಯುತ್ ಅನ್ನು ಕಡಿಮೆ ಮಾಡಬಹುದು., ಹೀಗೆ ಮಾಡುವುದರಿಂದ ಎಸಿ ಅಥವಾ ಕೂಲರ್ ವಿದ್ಯುತ್ ತೆಗೆದುಕೊಳ್ಳುವ ಪ್ರಮಾಣ ಕಡಿಮೆ ಆಗುತ್ತದೆ.

4.ನಿಮ್ಮ ಮನೆಯಲ್ಲಿ ವಾಟರ್ ಹೀಟರ್ ಬಳಸುತ್ತಿದ್ದರೆ, ಅದರ ಟೆಂಪರೇಚರ್ ಅನ್ನು ಸಹ ನಿಯಂತ್ರಣ ಮಾಡುವ ಅವಶ್ಯಕತೆ ಇದೆ. ಇವುಗಳನ್ನು ಅಗತ್ಯಕ್ಕೆ ಅನುಗುಣವಾಗಿ ನೋಡಿಕೊಳ್ಳಬೇಕು. ಮನೆಯಲ್ಲಿರುವ ವಸ್ತುಗಳನ್ನು ಸರಿಮಾಡುವ ಮೂಲಕ ಕೂಡ, ವಿದ್ಯುತ್ ಉಳಿತಾಯ ಮಾಡಬಹುದು.
5.ಮನೆಯ ಬಳಿ ಸೋಲಾರ್ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು. ಹೊರಗಿರುವ ದೀಪ ಅಥವಾ ಬೆಳಕನ್ನು ಸೌರ ಫಲಕದ ಜೊತೆಗೆ ಸೇರಿಸಿ.
6.ನಿಮ್ಮ ಮನೆಯಲ್ಲಿ ಬಳಸುವ ಬಲ್ಬ್ ಗಳು ಎಲ್.ಇ.ಡಿ ಬಲ್ಬ್ ಗಳಾಗಿದೆಯೇ ಎಂದು ಪರೀಕ್ಷೆ ಮಾಡಿ, ಏಕೆಂದರೆ, ಎಲ್.ಇ. ಡಿ ಬಲ್ಬ್ ಗಳಿಂದ ಶೇ.80ರಷ್ಟು ವಿದ್ಯುತ್ ಉಳಿಸಬಹುದು. ಸಾಮಾನ್ಯವಾಗಿ ಎಲ್.ಇ.ಡಿ ಬಲ್ಬ್ ಗಳು ವಿದ್ಯುತ್ ಬಲ್ಬ್ ಗಳಿಗಿಂತ ಹೆಚ್ಚು ಉಳಿತಾಯ ಮಾಡುತ್ತದೆ.