ಭಾರತದಲ್ಲಿ ಸಾಕಷ್ಟು ಚರ್ಚೆ ಮಾಡಿರುವ ಅಗ್ನಿಪಥ್ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು?? ಇದಕ್ಕೆ ವಿರೋಧ ಮಾಡುತ್ತಿರುವ ಜನರ ವಾದವೇನು ಗೊತ್ತೇ?

ಭಾರತದಲ್ಲಿ ಸಾಕಷ್ಟು ಚರ್ಚೆ ಮಾಡಿರುವ ಅಗ್ನಿಪಥ್ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು?? ಇದಕ್ಕೆ ವಿರೋಧ ಮಾಡುತ್ತಿರುವ ಜನರ ವಾದವೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಇಸ್ರೇಲ್ ಕುರಿತಂತೆ ತಿಳಿದಿದೆ. ಚಿಕ್ಕ ದೇಶ ವಾಗಿದ್ದರೂ ಕೂಡ ಮಿಲಿಟರಿ ವಿಚಾರದಲ್ಲಿ ಅತ್ಯಂತ ಶಕ್ತಿಶಾಲಿ ದೇಶವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲಿ ಸುತ್ತಮುತ್ತ ದೇಶಗಳಿಂದ ಗಡಿ ಬಿಕ್ಕಟ್ಟನ್ನು ಹೊಂದಿರುವ ಕಾರಣದಿಂದಾಗಿ ಪ್ರತಿಯೊಂದು ಮನೆಯಿಂದ ಕೂಡ ಒಬ್ಬ ವ್ಯಕ್ತಿ ಸೈನ್ಯದ ತರಬೇತಿಯನ್ನು ಪಡೆದುಕೊಳ್ಳುವ ನಿಯಮವಿದೆ. ಇದೇ ರೀತಿಯ ನಿಯಮವಾಗಿರುವ ಅಗ್ನಿಪಥ್ ಈಗ ಸದ್ಯಕ್ಕೆ ಭಾರತದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಆದರೆ ಇದು ಇಸ್ರೇಲ್ ನಂತೆ ಕಡ್ಡಾಯವಾಗಿರುವುದಿಲ್ಲ.

ಹತ್ತನೇ ತರಗತಿ ಹಾಗೂ ಪಿಯುಸಿ ಪಾಸ್ ಆಗಿರುವವರು ಅಗ್ನಿಪಥ್ ಯೋಜನೆಯಲ್ಲಿ ಸೇನೆಯ ಮೂರು ವಿಭಾಗಗಳಲ್ಲಿ ನಾಲ್ಕು ವರ್ಷದ ವರೆಗೆ ಯೋಧರಾಗಿ ಅಂದರೆ ಅಗ್ನಿ ವೀರರಾಗಿ ಕಾರ್ಯನಿರ್ವಹಿಸಬಹುದಾದಂತಹ ಪದ್ಧತಿಯನ್ನೇ ಅಗ್ನಿಪಥ್ ಎಂಬುದಾಗಿ ಕರೆಯುತ್ತಾರೆ. ನಾಲ್ಕು ವರ್ಷದಲ್ಲಿ ಮೊದಲ ಆರು ತಿಂಗಳು ತರಬೇತಿಯನ್ನು ನೀಡಲಾಗುತ್ತದೆ. ಅಗ್ನಿ ವೀರ ರಾಗಿರುವ ಪ್ರತಿಯೊಬ್ಬ ಯೋಧರಿಗೂ ಕೂಡ ಮೊದಲು ನಾಲ್ಕು ವರ್ಷದ ಅವಧಿಗೆ 4.62 ಲಕ್ಷ ರೂಪಾಯಿಂದ 6.92 ಲಕ್ಷ ರೂಪಾಯಿ ಅಂದರೆ ತಿಂಗಳಿಗೆ 30 ರಿಂದ 40 ಸಾವಿರ ಸಂಬಳ ಸಿಗಲಿದೆ. ಒಂದು ವೇಳೆ ನಾಲ್ಕು ವರ್ಷದ ಸೇವೆ ಸಂಪೂರ್ಣ ವಾದರೆ ವರ್ಷಕ್ಕೆ ಅವರಿಗೆ 11.70 ಲಕ್ಷ ರೂಪಾಯಿ ಸಂಬಳ ದೊರಕಲಿದೆ. ಯಾವುದೇ ಟ್ಯಾಕ್ಸ್ ಇರುವುದಿಲ್ಲ ಹಾಗೂ ವೈದ್ಯಕೀಯ ವಿಮೆ ಕೂಡ ದೊರಕುತ್ತದೆ ಆದರೆ ಪಿಂಚಣಿ ಸಿಗುವುದಿಲ್ಲ.

ಒಂದು ವೇಳೆ ಅಗ್ನಿ ವೀರರು ತಮ್ಮ ಸೇವೆಯ ಸಂದರ್ಭದಲ್ಲಿ ಹುತಾತ್ಮರಾದರು ವಿಮೆಯನ್ನು ಹೊರತುಪಡಿಸಿ ಅವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರವನ್ನು ಘೋಷಿಸಲಾಗುತ್ತದೆ. ಇನ್ನು ಇದಕ್ಕೆ ವಿರೋಧ ಯಾಕೆ ಎಂಬುದಾಗಿ ನೀವು ಕೇಳಬಹುದು. ನಿರುದ್ಯೋಗದಿಂದ ತಕ್ಷಣ ಹೊರಬರಲು ಮಾಡಿರುವ ಯೋಜನೆಯಾಗಿದ್ದು ಇದು ಕೇವಲ ತಾತ್ಕಾಲಿಕ ಪರಿಹಾರ ಎಂಬುದಾಗಿ ವಿರೋಧಿಸುತ್ತಿರುವವರು ತಮ್ಮ ವಾದ ವನ್ನು ಮಂಡಿಸಿದ್ದಾರೆ. ನಾಲ್ಕು ವರ್ಷದ ಅವಧಿಯ ನಂತರ ಏನು ಇದು ಕೇವಲ ನಾಲ್ಕು ವರ್ಷದ ದೇಶಭಕ್ತಿ ಎಂಬ ಭಾವನೆಯನ್ನು ಮೂಡಿಸುವಂತೆ ಮಾಡುತ್ತದೆ ಎಂಬುದಾಗಿ ವಿರೋಧಿಸುವವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ಪ್ರತಿಭಟನೆ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿದೆ ಎಂಬುದು ಹೆಚ್ಚು ಜನರ ಅಭಿಪ್ರಾಯವಾಗಿದೆ. ಇನ್ನು ಈ ಅಗ್ನಿಪಥ್ ಕುರಿತಂತೆ ನಿಮ್ಮ ಮನೋಭಾವನೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.