ಅತ್ಯಂತ ಡಿಮ್ಯಾಂಡ್ ಹೊಂದಿರುವ ಜಿಯೋ ಪ್ಲಾನ್ ಯಾವುದು ಗೊತ್ತೇ?? ಕೋಟಿಗೂ ಹೆಚ್ಚು ಜನ ಬಳಸುವ ಪ್ಲಾನ್ ಯಾವುದು ಗೊತ್ತೇ??

ಅತ್ಯಂತ ಡಿಮ್ಯಾಂಡ್ ಹೊಂದಿರುವ ಜಿಯೋ ಪ್ಲಾನ್ ಯಾವುದು ಗೊತ್ತೇ?? ಕೋಟಿಗೂ ಹೆಚ್ಚು ಜನ ಬಳಸುವ ಪ್ಲಾನ್ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜಿಯೋ ಸಂಸ್ಥೆ ಈಗ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಲೀಡಿಂಗ್ ಟೆಲಿಕಾಂ ಸಂಸ್ಥೆಯಾಗಿದ್ದು ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಸಂಸ್ಥೆ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಇನ್ನು ಇತ್ತೀಚಿಗಷ್ಟೇ ಜಿಯೋ ಸಂಸ್ಥೆಯ ಪರಿಚಯಿಸಿರುವ ಅತ್ಯಂತ ಜನಪ್ರಿಯ ಯೋಜನೆಗಳ ಕುರಿತಂತೆ ಹೇಳುತ್ತೇವೆ ಬನ್ನಿ. ಮೊದಲನೇದಾಗಿ ಜಿಯೋ ನ 151 ರೂಪಾಯಿಗಳ ಯೋಜನೆ. ಇದರಲ್ಲಿ ಕೇವಲ 8 ಜಿಬಿ ಇಂಟರ್ನೆಟ್ ಡೇಟಾ ಸಿಗುತ್ತದೆ ಹಾಗೂ ಇದನ್ನು ನೀವು ಆನಂದಿಸಲು ಬೇಸಿಕ್ ರೀಚಾರ್ಜ್ ಪ್ಲಾನ್ ಇರಲೇಬೇಕಾಗುತ್ತದೆ. ನಿಮ್ಮ ಮೊಬೈಲ್ ಡಿವೈಸ್ ಗಾಗಿ ಮೂರು ತಿಂಗಳ ಉಚಿತ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

ಜಿಯೋ ಸಂಸ್ಥೆ ಮತ್ತೊಂದು ಯೋಜನೆ ಆಗಿರುವ 333 ರೂಪಾಯಿಗಳ ಪ್ರಿಪೇಯ್ಡ್ ಯೋಜನೆ ಕೂಡ ಪರಿಚಿತವಾಗಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ದೈನಂದಿನ 1.5 ಜಿಬಿ ಇಂಟರ್ನೆಟ್ ಡೇಟು ಹಾಗೂ 100 ಉಚಿತ ಎಸ್ಎಂಎಸ್ ಗಳು ಮತ್ತು ಅನಿಮಿಯತ ಕರೆಗಳು ಸಿಗುತ್ತದೆ. ಜಿಯೋ ಅಪ್ಲಿಕೇಶನ್ಗಳ ಜೊತೆಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ನ ಮೊಬೈಲ್ ಡಿವೈಸ್ ನ ಮೂರು ತಿಂಗಳ ಉಚಿತ ಚಂದಾದಾರಿಕೆ ಸಿಗಲಿದೆ. ಇನ್ನು 583 ಹಾಗೂ 783 ರೂಪಾಯಿಗಳ ರೀಚಾರ್ಜ್ ಪ್ಲಾನ್ ಕೂಡ 333 ರೂಪಾಯಿಗಳ ರೀಚಾರ್ಜ್ ಪ್ಲಾನ್ ನಂತೆ ಎಲ್ಲವೂ ಸೇಮ್ ಆಗಿರುತ್ತದೆ ಆದರೆ ವ್ಯಾಲಿಡಿಟಿ ಮಾತ್ರ ಹೆಚ್ಚಿನ ದಿನಗಳನ್ನು ಹೊಂದಿರುತ್ತದೆ.

583 ರೂಪಾಯಿಗಳ ರೀಚಾರ್ಜ್ ಪ್ಲಾನ್ 56 ದಿನಗಳ ವ್ಯಾಲಿಡಿಟಿ ಪ್ಲಾನ್ ಅನ್ನು ಹೊಂದಿದ್ದರೆ 783 ರೂಪಾಯಿಗಳ ರೀಚಾರ್ಜ್ ಪ್ಲಾನ್ ಬರೋಬ್ಬರಿ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇನ್ನು ಇದರ ಜೊತೆಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ಕೂಡ ದೊರೆಯುತ್ತದೆ ಇದಕ್ಕಾಗಿ ನೀವು ನೂರು ರೂಪಾಯಿ ಶುಲ್ಕವನ್ನು ಕಟ್ಟಬೇಕು ಎನ್ನುವುದು ವಿಶೇಷವಾಗಿದೆ. ನೀವು ಕೂಡ ಜಿಯೋ ಚಂದಾದಾರರಾಗಿ ಇದ್ದರೆ ರಿಚಾರ್ಜ್ ಪ್ಲಾನ್ ಗಳನ್ನು ತಪ್ಪದೆ ಪ್ರಯತ್ನಿಸಿ.