ಐರ್ಲೆಂಡ್ ಸರಣಿಗೆ ಅಚ್ಚರಿಯ ತಂಡ ಆಯ್ಕೆ, ಹೊಸ ನಾಯಕನ ಎಂಟ್ರಿ: ಆಚರಿಯಾಗಿ ಸ್ಥಾನ ಪಡೆದವರು ಯಾರ್ಯಾರು ಗೊತ್ತೇ?

ಐರ್ಲೆಂಡ್ ಸರಣಿಗೆ ಅಚ್ಚರಿಯ ತಂಡ ಆಯ್ಕೆ, ಹೊಸ ನಾಯಕನ ಎಂಟ್ರಿ: ಆಚರಿಯಾಗಿ ಸ್ಥಾನ ಪಡೆದವರು ಯಾರ್ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ಭಾರತ ಇನ್ನು ಮುಂದೆ ಎರೆಡೆರೆಡು ತಂಡಗಳಾಗಿ ಆಡುವುದು ಖಚಿತವಾಗಿದೆ. ಕಳೆದ ವರ್ಷ ಸಹ ಭಾರತ ಎ ತಂಡ ಇಂಗ್ಲೆಂಡ್ ನಲ್ಲಿ ಟೆಸ್ಟ್ ಆಡಿದ್ದರೇ ಮತ್ತೊಂದು ತಂಡ ಶ್ರೀಲಂಕಾ ದಲ್ಲಿ ಮೂರು ಏಕದಿನ ಹಾಗೂ ಮೂರು ಟಿ 20 ಪಂದ್ಯಗಳ ಸರಣಿಯನ್ನು ಆಡಿತ್ತು. ಈ ಭಾರಿ ಭಾರತದ ಹಿರಿಯರ ತಂಡ ಇಂಗ್ಲೆಂಡ್ ನಲ್ಲಿ ಒಂದು ಟೆಸ್ಟ್ ಹಾಗೂ ಐದು ಟಿ 20 ಪಂದ್ಯಗಳ ಸರಣಿ ಆಡಲು ತೆರಳಲಿದೆ.ಹಾಗಾಗಿ ಇದೇ ವೇಳಾಪಟ್ಟಿಯಲ್ಲಿ ಐರ್ಲೆಂಡ್ ಪ್ರವಾಸ ಸಹ ಎರ್ಪಟ್ಟ ಕಾರಣ ಈಗ ಬಿಸಿಸಿಐ ಐರ್ಲೆಂಡ್ ಪ್ರವಾಸಕ್ಕೆಂದು ಭಾರತ ಬಿ ತಂಡವನ್ನು ಪ್ರಕಟಿಸಿದೆ.

ಐಪಿಎಲ್ ನಲ್ಲಿ ಗಮನಸೆಳೆದ ಕೆಲವು ಆಟಗಾರರಿಗೆ ಅವಕಾಶ ದೊರೆತಿದ್ದು, ತಮ್ಮ ಸಾಮರ್ಥ್ಯ ಏನೆಂಬುದನ್ನು ಪ್ರದರ್ಶಿಸಲು ಅವಕಾಶ ದೊರೆತಿದೆ. ಈ ತಂಡದ ನಾಯಕರಾಗಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದು, ಉಪ ನಾಯಕರಾಗಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದಾರೆ. ಗಾಯಾಳು ಸೂರ್ಯ ಕುಮಾರ್ ಯಾದವ್ ತಂಡಕ್ಕೆ ವಾಪಸ್ ಆಗಿದ್ದು, ಹೊಸ ಮುಖವಾಗಿ ಬ್ಯಾಟ್ಸಮನ್ ರಾಹುಲ್ ತ್ರಿಪಾಠಿ ಸ್ಥಾನ ಪಡೆದಿದ್ದಾರೆ.

ಐವರು ಬ್ಯಾಟ್ಸ್ಮನ್ ಗಳು, ಮೂವರು ಆಲ್ ರೌಂಡರ್ ಗಳು, ಒಬ್ಬ ವಿಕೇಟ್ ಕೀಪರ್ ಬ್ಯಾಟ್ಸಮನ್,ಏಳು ಬೌಲರ್ ಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ತಂಡದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ತಂಡ ಇಂತಿದೆ – ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ) ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್,ಸಂಜು ಸ್ಯಾಮ್ಸನ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್,ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್,ರವಿ ಬಿಷ್ಣೋಯಿ, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್,ಉಮ್ರಾನ್ ಮಲೀಕ್.