ನಿಮಗೆ ನೆಟ್ವರ್ಕ್ ಸರಿಯಾಗಿ ಸಿಗುತ್ತಿಲ್ಲವೇ?? ಹಾಗಿದ್ದರೆ ಉಚಿತ ಸೇವೆ ಬಳಸಿ ಕರೆ ಮಾಡುವುದು ಹೇಗೆ ಗೊತ್ತೇ??

ನಿಮಗೆ ನೆಟ್ವರ್ಕ್ ಸರಿಯಾಗಿ ಸಿಗುತ್ತಿಲ್ಲವೇ?? ಹಾಗಿದ್ದರೆ ಉಚಿತ ಸೇವೆ ಬಳಸಿ ಕರೆ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಜಗತ್ತು ಸಂಪೂರ್ಣವಾಗಿ ಆಧುನಿಕತೆಗೆ ತೆಗೆದುಕೊಂಡಿದ್ದು ಪ್ರತಿಯೊಬ್ಬರನ್ನು ಸಂಪರ್ಕಿಸಲು ಮೊಬೈಲ್ ಎನ್ನುವುದು ಅತ್ಯಗತ್ಯವಾಗಿದೆ. ಹೀಗಾಗಿ ಮೊಬೈಲ್ ಕಂಪನಿಗಳು ಹಲವಾರು ವಿಶೇಷವಾದ ಫೀಚರ್ ಗಳನ್ನು ಕೂಡ ಗ್ರಾಹಕರಿಗೆ ನೀಡುತ್ತಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ನೆಟ್ವರ್ಕ್ ಸರಿಯಾಗಿ ಇಲ್ಲದಿದ್ದಾಗ ವೈ-ಫೈ ಉಪಯೋಗಿಸಿಕೊಂಡು ಕರೆಮಾಡುವ ವಿಧಾನಕ್ಕೆ ವೈಫೈ ಕಾಲಿಂಗ್ ಎನ್ನುವುದಾಗಿ ಕರೆಯುತ್ತಾರೆ. ಇದು ಟೆಲಿಕಾಂ ಸಂಸ್ಥೆಗಳು ಪೂರೈಸುವ ವಿಶಿಷ್ಟ ವಿಧಾನವಾಗಿದೆ. ಭಾರತೀಯ ಬಹುತೇಕ ಎಲ್ಲಾ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳು ಈ ವೈಫೈ ಕಾಲಿಂಗ್ ವಿಧಾನವನ್ನು ತಮ್ಮ ಗ್ರಾಹಕರಿಗೆ ನೀಡಿರುತ್ತಾರೆ.

ಇದನ್ನು ಪ್ರಮುಖವಾಗಿ ಆಫೀಸ್ ಹಾಗೂ ಮನೆಯ ವೈಫೈ ಬಳಸುವವರು ಉಪಯೋಗಿಸಬಹುದಾಗಿದೆ. ಮೊಬೈಲ್ ಡೇಟಾದ ಬದಲಿಗೆ wi-fi ಮೂಲಕ ಕರೆಮಾಡಲು ಟೆಲಿಕಾಂ ಪೂರೈಕೆದಾರರು ವ್ಯವಸ್ಥೆಯನ್ನು ಮಾಡಿರುತ್ತಾರೆ. ಮೊಬೈಲ್ ನೆಟ್ವರ್ಕ್ ಬದಲಿಗೆ wi-fi ನೆಟ್ವರ್ಕ್ ಅನ್ನು ಬಳಸುತ್ತಾರೆ. ಈ ಕರೆಯನ್ನು ನೆಟ್ವರ್ಕ್ ಪೂರೈಕೆದಾರರು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸುತ್ತಾರೆ. ಈ ಕರೆಯಲ್ಲಿ ಕೇವಲ ವೈಫೈ ಅನ್ನು ಮಾತ್ರ ಬಳಸುತ್ತದೆ. ಏರ್ಟೆಲ್ ವರದಿಯ ಪ್ರಕಾರ ಐದು ನಿಮಿಷದ ಕರೆಗೆ ಕೇವಲ 5mb ಇಂಟರ್ನೆಟ್ ಡೇಟಾವನ್ನು ಮಾತ್ರ ಉಪಯೋಗಿಸಲಾಗುತ್ತದೆ. ಇನ್ನು ವೈಫೈ ಕಡೆ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುವ ಕರೆ ಆಗಿದ್ದು ಇದು ಸಂಪೂರ್ಣ ಉಚಿತವಾಗಿದೆ.

ವೈಫೈ ಕರೆ ನಿಮ್ಮ ಫೋನಿನಲ್ಲಿ ಇದೆಯೇ ಎನ್ನುವುದನ್ನು ಪರಿಶೀಲಿಸಲು ಆಂಡ್ರಾಯ್ಡ್ ಬಳಕೆದಾರರು ಸೆಟ್ಟಿಂಗ್ ಗೆ ಹೋಗಿ ಫೋನ್ ನೆಟ್ವರ್ಕ್ ವೈಫೈ ನಲ್ಲಿ ಹೋಗಿ ವೈಫೈ ಕಾಲಿಂಗ್ ಆಪ್ಷನ್ ಇದೆಯೇ ಎನ್ನುವುದನ್ನು ಪರಿಶೀಲಿಸಬೇಕು. ಐಫೋನ್ ಬಳಕೆದಾರರು ಸೆಟ್ಟಿಂಗ್ ಫೋನ್ ಮೊಬೈಲ್ ಡೇಟಾ ನಂತರ ಬಬೈಕರೆ ಆಪ್ಷನ್ ಅನ್ನು ನೀವು ಹುಡುಕಬೇಕಾಗುತ್ತದೆ. ನಿಮ್ಮ ಫೋನಿನಲ್ಲಿ ಆ ಆಯ್ಕೆ ಇದ್ದರೆ ಖಂಡಿತವಾಗಿ ಗೋಚರಿಸುತ್ತದೆ. ವೈಫೈ ಕಾರ್ಯಗಳಲ್ಲಿ ಗುಣಮಟ್ಟ ಉತ್ತಮವಾಗಿದೆ ಕೆಲವೊಮ್ಮೆ ರಿಸೀವರ್ ಗಳಲ್ಲಿ ಪ್ರಾಬ್ಲಮ್ ಇರುತ್ತದೆ. ಇದರಲ್ಲಿ ಕಂಡುಬರುವ ಇನ್ನೊಂದು ಸಮಸ್ಯೆಯೆಂದರೆ ಕೆಲವೊಮ್ಮೆ ಕರೆ ಮಾಡುವಾಗ ಮೊಬೈಲ್ ವೈಫೈ ಆಫ್ ಮಾಡಬೇಕಾಗುತ್ತದೆ. ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳು ವೈಫೈ ಕರೆಯನ್ನು ಸ್ವಯಂ ಚಾಲಿತವಾಗಿ ಸಕ್ರಿಯಗೊಳಿಸುವುದು ರಿಂದ ಇದಕ್ಕಾಗಿ ಹೆಚ್ಚಿನ ಕೆಲಸವನ್ನು ಮಾಡಬೇಕಾದ ಅಗತ್ಯವಿಲ್ಲ.