ಬದಲಾದ ಪ್ರಸಾರ ಹಕ್ಕುಗಳು, ಇನ್ನು ಐಪಿಎಲ್ ವೀಕ್ಷಿಸಬೇಕು ಎಂದು ಏನು ಮಾಡಬೇಕು ಗೊತ್ತೇ?? 48,390 ಕೋಟಿ ಖರ್ಚು ಮಾಡಿದವರು, ಪ್ರೇಕ್ಷಕರಿಂದ ವಸೂಲಿ ಮಾಡಲು ಸಾಧ್ಯವೇ??

ಬದಲಾದ ಪ್ರಸಾರ ಹಕ್ಕುಗಳು, ಇನ್ನು ಐಪಿಎಲ್ ವೀಕ್ಷಿಸಬೇಕು ಎಂದು ಏನು ಮಾಡಬೇಕು ಗೊತ್ತೇ?? 48,390 ಕೋಟಿ ಖರ್ಚು ಮಾಡಿದವರು, ಪ್ರೇಕ್ಷಕರಿಂದ ವಸೂಲಿ ಮಾಡಲು ಸಾಧ್ಯವೇ??

ನಮಸ್ಕಾರ ಸ್ನೇಹಿತರೆ ಇಡೀ ವಿಶ್ವದಲ್ಲೇ ಭಾರತೀಯ ಕ್ರಿಕೆಟ್ ಸಂಸ್ಥೆಯನ್ನು ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಆಗೋದಕ್ಕೆ ಪ್ರಮುಖ ಕಾರಣವೆಂದರೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಕಾರಣ ಎಂದರೆ ತಪ್ಪಾಗಲಾರದು. ಐಪಿಎಲ್ ನಿಂದಾಗಿ ಭಾರತೀಯ ಕ್ರಿಕೆಟ್ ಸಂಸ್ಥೆ ಶ್ರೀಮಂತವಾಗಿದೆ ಎಂದು ಹೇಳಬಹುದಾಗಿದೆ. ಐಪಿಎಲ್ ಅತ್ಯಂತ ಹೆಚ್ಚು ಹಣ ಗಳಿಸುವುದಕ್ಕೆ ಕಾರಣ ಕೇವಲ ಸ್ಟೇಡಿಯಂನಲ್ಲಿ ಬಂದು ನೋಡುವ ಪ್ರೇಕ್ಷಕರು ಮಾತ್ರ ಕಾರಣವಲ್ಲ ಅದಕ್ಕಿಂತ ಅದೆಷ್ಟೋ ಹೆಚ್ಚುಪಟ್ಟು ಐಪಿಎಲ್ ತನ್ನ ಮೀಡಿಯಾ ಹಾಗೂ ಸ್ಟ್ರೀಮಿಂಗ್ ರೈಟ್ಸ್ ಅನ್ನು ವಾಹಿನಿಗಳಿಗೆ ಮಾರುವ ಮೂಲಕ ಸಾವಿರಾರು ಕೋಟಿ ರೂಪಾಯಿ ಹಣವನ್ನು ಸಂಪಾದಿಸುತ್ತದೆ.

ಒಂದು ಲೆಕ್ಕ ದಲ್ಲಿ ಹೇಳುವುದಾದರೆ ಐಪಿಎಲ್ನ ಅತ್ಯಂತ ಹೆಚ್ಚು ಆದಾಯದ ಮೂಲದಲ್ಲಿ ಸಿಂಹಪಾಲನ್ನು ಮೀಡಿಯಾ ರೈಟ್ಸ್ ಹೊಂದಿರುತ್ತದೆ ಎಂಬುದಾಗಿ ಹೇಳಬಹುದಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಐಪಿಎಲ್ ಎನ್ನುವುದು ಸಾಕಷ್ಟು ವೀಕ್ಷಕರನ್ನು ಹೊಂದಿರುವ ಜನಪ್ರಿಯ ಲೀಗ್ ಆಗಿದೆ. ಇನ್ನು ಈಗ ಕೇಳಿ ತಿಳಿದು ಬಂದಿರುವ ಸುದ್ದಿಯ ಪ್ರಕಾರ ಮುಂದಿನ ಐದು ವರ್ಷಗಳ ಐಪಿಎಲ್ ಮೀಡಿಯಾ ರೈಟ್ಸ್ ಬರೋಬ್ಬರಿ 48390 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಐಪಿಎಲ್ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ದಾಖಲೆ ಮಟ್ಟದ ಮಾರಾಟವಾಗಿದೆ ಎಂದರೆ ತಪ್ಪಾಗಲಾರದು. ಜಾಗತಿಕವಾಗಿ ಕೂಡ ಇದು ಹಲವಾರು ದಾಖಲೆಗಳನ್ನು ಮುರಿದಿದೆ. ಇದರಲ್ಲಿ 23575 ಕೋಟಿ ರೂಪಾಯಿಗಳಿಗೆ ಟಿವಿ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್ ಕಂಪನಿ ಪಡೆದುಕೊಂಡಿದೆ. ಇನ್ನೊಂದು ಕಡೆ 20500 ಕೋಟಿ ರೂಪಾಯಿಗಳಿಗೆ ಡಿಜಿಟಲ್ ಹಕ್ಕುಗಳನ್ನು viacom18 ಕಂಪನಿ ಪಡೆದುಕೊಂಡಿದೆ.

ಈ ಮೂಲಕ ಇನ್ನು ಮುಂದೆ ನೀವು ಡಿಜಿಟಲ್ ಪ್ಲಾಟ್ಫಾರ್ಮ್ ಗಳಲ್ಲಿ ಕ್ರಿಕೆಟನ್ನು ನೋಡಲು ಬಯಸುವುದಾದರೆ ವೂಟ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಲೇಬೇಕಾಗಿದೆ. ಪ್ಯಾಕೇಜ್ ಸಿ ಅನ್ನು ವಯಾಕಾಂ 18 ಪಡೆದುಕೊಂಡಿದ್ದು ಇದು ಪ್ಲೇಆಫ್ ಹಂತದ ಪಂದ್ಯಗಳನ್ನು ಪ್ರಸಾರ ಮಾಡುವಂತಹ ಹಕ್ಕುಗಳನ್ನು ಹೊಂದಿದ್ದು 3258 ಕೋಟಿ ರೂಪಾಯಿಗೆ ಖರೀದಿಸಿದೆ. ಭಾರತದ ಹೊರಗೆ ಪ್ರಸಾರಮಾಡುವ ಪ್ಯಾಕೇಜ್ ಡಿ ಹಕ್ಕನ್ನು ವಯಾಕಾಂ 18 ಹಾಗೂ ಟೈಮ್ಸ್ ಜಂಟಿಯಾಗಿ ಸೇರಿ ಖರೀದಿಸಿದೆ. ಈ ಮೂಲಕ ವಿಶ್ವದ ಎರಡನೇ ಅತ್ಯಂತ ದುಬಾರಿ ಲೀಗ್ ಎನ್ನುವ ಖ್ಯಾತಿಗೆ ಐಪಿಎಲ್ ಮೊದಲಬಾರಿಗೆ ಇತಿಹಾಸದಲ್ಲಿ ಈ ದಾಖಲೆಗೆ ಪಾತ್ರವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.