ಕಾರ್ತಿಕ್ ಬಾಸ್ ಗೆ ಅವಮಾನಗಳ ಮೇಲೆ ಅವಮಾನ. ಕಾರ್ತಿಕ್ ಪರ ನಿಂತ ದಿಗ್ಗಜರು. ಯುವ ಆಟಗಾರರು ಡಿಕೆ ರವರನ್ನು ನಡೆಸಿಕೊಳ್ಳುತ್ತಿರುವುದು ಹೇಗೆ ಗೊತ್ತೇ?

ಕಾರ್ತಿಕ್ ಬಾಸ್ ಗೆ ಅವಮಾನಗಳ ಮೇಲೆ ಅವಮಾನ. ಕಾರ್ತಿಕ್ ಪರ ನಿಂತ ದಿಗ್ಗಜರು. ಯುವ ಆಟಗಾರರು ಡಿಕೆ ರವರನ್ನು ನಡೆಸಿಕೊಳ್ಳುತ್ತಿರುವುದು ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಪರಮನೆಂಟ್ ಕಾಮೆಂಟೇಟರ್ ಹಾಗೂ ಪಾರ್ಟ್ ಟೈಮ್ ಕ್ರಿಕೆಟರ್ ಎಂಬ ಅಪ ಖ್ಯಾತಿಗೆ ಒಳಗಾಗಿದ್ದ ದಿನೇಶ್ ಕಾರ್ತಿಕ್ ರವರು ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡುವ ಮೂಲಕ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಸಾಧನೆಯನ್ನು ಮಾಡಿದರು. ಈ ವಯಸ್ಸಿನಲ್ಲಿಯೂ ಕೂಡ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಯುವ ಆಟಗಾರರಿಗೆ ಟಕ್ಕರ್ ಕಾಂಪಿಟೇಷನ್ ನೀಡುತ್ತಿದ್ದರು ದಿನೇಶ್ ಕಾರ್ತಿಕ್ ರವರು.

ಆದರೆ ಇತ್ತೀಚಿನ ದಿನಗಳಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ದಿನೇಶ್ ಕಾರ್ತಿಕ್ ರವರಿಗೆ ಅವರು ಅರ್ಹರಾಗಿರುವ ಮಾನ್ಯತೆ ಹಾಗೂ ಗೌರವಗಳು ಬೇರೆ ಯುವ ಆಟಗಾರರಿಂದ ಸಿಗುತ್ತಿಲ್ಲ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡದಲ್ಲಿ ನೋಡುವುದಾದರೆ ಎಲ್ಲರಿಗಿಂತ ಅತ್ಯಂತ ಹೆಚ್ಚು ಅನುಭವವನ್ನು ಹೊಂದಿರುವ ಆಟಗಾರ ಹಿರಿಯಣ್ಣ ದಿನೇಶ್ ಕಾರ್ತಿಕ್ ಎಂದು ಹೇಳಬಹುದಾಗಿದೆ. ಹಾಗಿದ್ದರೆ ದಿನೇಶ್ ಕಾರ್ತಿಕ್ ರವರಿಗೆ ಭಾರತೀಯ ಕ್ರಿಕೆಟ್ ತಂಡದ ಬೇರೆ ಆಟಗಾರರಿಂದ ಆಗಿರುವ ಅವಮಾನಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಮೊದಲಿಗೆ ಗಮನಿಸುವುದಾದರೆ ದೆಹಲಿಯಲ್ಲಿ ನಡೆದಿರುವ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ 19.4 ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ರವರಿಗೆ ಸಿಂಗಲ್ ತೆಗೆದುಕೊಳ್ಳುವ ಅವಕಾಶವಿದ್ದರೂ ಕೂಡ ನಾನ್ ಸ್ಟ್ರೈಕ್ ನಲ್ಲಿ ಇರುವ ದಿನೇಶ್ ಕಾರ್ತಿಕ್ ರವರಿಗೆ ಅಲ್ಲೇ ಇರುವಂತೆ ಸೂಚನೆ ನೀಡಿದ್ದರು. ಐಪಿಎಲ್ ನಲ್ಲಿ ಅತ್ಯಂತ ಭರ್ಜರಿ ಸ್ಟ್ರೈಕ್ ರೇಟನ್ನು ಕೊನೆಯ ಓವರ್ ಗಳಲ್ಲಿ ಹೊಂದುವ ಮೂಲಕ ಫಿನಿಶರ್ ಜವಾಬ್ದಾರಿಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದ ದಿನೇಶ್ ಕಾರ್ತಿಕ್ ರವರನ್ನು ಕೊನೆಯಲ್ಲಿ ಬ್ಯಾಟಿಂಗ್ ಮಾಡಲು ನೀಡದೆ ಹಾರ್ದಿಕ್ ಪಾಂಡ್ಯ ರವರು ಅವಮಾನ ಮಾಡಿದ್ದರು. ಇದರ ವಿರುದ್ಧವಾಗಿ ಗುಜರಾತ್ ಟೈಟನ್ಸ್ ತಂಡದ ಕೋಚ್ ಆಗಿರುವ ಆಶಿಶ್ ನೆಹ್ರಾರವರು ಕೂಡ ನಾನ್ ಸ್ಟ್ರೈಕ್ ನಲ್ಲಿ ಇರುವುದು ನಾನಲ್ಲ ಬದಲಾಗಿ ದಿನೇಶ್ ಕಾರ್ತಿಕ್ ಎಂಬುದಾಗಿ ಪಾಂಡ್ಯ ರವರಿಗೆ ಟೀಕಿಸಿದ್ದರು.

ಇನ್ನು ಡಿಕೆಗೆ ಅವಮಾನಕರವಾಗಿ ಪರಿಣಮಿಸಿರುವ ಎರಡನೇ ಘಟನೆಯೆಂದರೆ ಕಟಕ್ನಲ್ಲಿ ನಡೆದಿರುವ 2ನೇ ಟಿ20 ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಕೇವಲ 148 ರನ್ನುಗಳನ್ನು ಗಳಿಸಲು ಮಾತ್ರ ಶಕ್ತವಾಗಿತ್ತು. ಈ ಸಂದರ್ಭದಲ್ಲಿ ಅಕ್ಷರ ಪಟೇಲ್ ರವರ ನಂತರ ದಿನೇಶ್ ಕಾರ್ತಿಕ್ ರವರನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಲಾಗಿತ್ತು. ಇದನ್ನು ಮಾಜಿ ಕ್ರಿಕೆಟಿಗ ರಾಗಿರುವ ಸುನೀಲ್ ಗಾವಸ್ಕರ್ ಹಾಗೂ ಮಾಜಿ ಸೌತ್ ಆಫ್ರಿಕಾ ತಂಡದ ಆಟಗಾರರಾಗಿರುವ ಗ್ರೇಮ್ ಸ್ಮಿತ್ ರವರು ಟೀಕಿಸಿ ಇಂತಹ ಅದ್ಭುತ ಆಟಗಾರನನ್ನು ಅಕ್ಷರ ಪಟೇಲ್ರವರ ನಂತರ ಅದು ಕೂಡ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಸಿರುವುದು ನಿಜಕ್ಕೂ ಕೂಡ ಅರ್ಥವಾಗುತ್ತಿಲ್ಲ ಎಂಬುದಾಗಿ ಹೇಳಿದ್ದರು.

ದಿನೇಶ್ ಕಾರ್ತಿಕ್ ರವರು ವಯಸ್ಸಿನಲ್ಲಿ 37 ವರ್ಷದವರಾಗಿರಬಹುದು ನಿಜ ಆದರೆ ಈಗ ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಇರುವ ಅದೆಷ್ಟೋ ಯುವ ಆಟಗಾರರಿಗಿಂತ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಬಲ್ಲರು ಎಂಬುದನ್ನು ಯಾವುದೇ ಅನುಮಾನಗಳಿಲ್ಲ ಹೇಳಬಹುದಾಗಿದೆ. ಇಲ್ಲಿ ನಾಯಕರ ತಪ್ಪೋ ಅಥವಾ ಟೀಮ್ ಮ್ಯಾನೇಜ್ಮೆಂಟ್ ತಪ್ಪೋ ಎಂಬುದನ್ನು ಹೇಳುವುದು ಕಷ್ಟವಾಗಿದೆ. ಆದರೆ ದಿನೇಶ್ ಕಾರ್ತಿಕ್ ರವರ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ಅವರು ತೋರಿಸುತ್ತಿರುವ ಅನುಮಾನ ನಿಜಕ್ಕೂ ಕೂಡ ಅವಮಾನಕರ ವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಮುಂದಿನ ದಿನಗಳಲ್ಲಾದರೂ ಕೂಡ ದಿನೇಶ್ ಕಾರ್ತಿಕ್ ರವರಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರನ್ನು ಯಾವ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೋ ಆ ಸ್ಥಾನದಲ್ಲಿ ಅವರಿಗೆ ನಿರಾಳವಾಗಿ ಬ್ಯಾಟಿಂಗ್ ಮಾಡಲು ಅವಕಾಶ ಭಾರತೀಯ ಕ್ರಿಕೆಟ್ ತಂಡದ ಟೀಮ್ ಮ್ಯಾನೇಜ್ಮೆಂಟ್ ಮಾಡಿಕೊಡಲಿ ಎಂಬುದಾಗಿ ಎಲ್ಲರೂ ಹಾರೈಸೋಣ. ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ ಐದು ಟಿ-ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡ 2-1 ರ ಹಿನ್ನಡೆಯಲ್ಲಿದೆ.