ಕುವೈತ್‌ ದೇಶಕ್ಕೆ ರಫ್ತಾಗುತ್ತಿದೆ ಭಾರತದ ದೇಶದ ಹಸುಗಳ ಸಗಣಿ, ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ.

ಕುವೈತ್‌ ದೇಶಕ್ಕೆ ರಫ್ತಾಗುತ್ತಿದೆ ಭಾರತದ ದೇಶದ ಹಸುಗಳ ಸಗಣಿ, ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ.

ನಮಸ್ಕಾರ ಸ್ನೇಹಿತರೆ ಭಾರತ ಈಗ ಕೇವಲ ಬೆಳವಣಿಗೆ ಹೊಂದುತ್ತಿರುವ ದೇಶವಲ್ಲ ಬದಲಾಗಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶವಾಗಿದೆ. ಹೀಗಾಗಿ ಕೇವಲ ಆಮದಿನಲ್ಲಿ ಮಾತ್ರವಲ್ಲದೆ ರಫ್ತು ಕಾರ್ಯದಲ್ಲಿ ಕೂಡ ಜಾಗತಿಕವಾಗಿ ಸಾಕಷ್ಟು ಹೆಚ್ಚಿನ ಸಂಖ್ಯೆಯನ್ನು ಹೊಂದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೂಡ ಅರಬ್ ದೇಶವಾಗಿರುವ ಕುವೈತಿಗೆ ಭಾರತದ ಸಗಣಿ ರಫ್ತು ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಹಸು ಎನ್ನುವುದು ಭಾರತೀಯ ಜನರ ಎಮೋಷನ್ ನಲ್ಲಿ ಪವಿತ್ರವಾದ ಜಾಗವನ್ನು ಹೊಂದಿದೆ ಇದನ್ನು ಗೋಮಾತೆ ಎಂಬುದಾಗಿ ಕೂಡ ಕರೆಯುತ್ತಾರೆ.

ಆದರೆ ಸಂಪೂರ್ಣ ಮುಸ್ಲಿಂ ದೇಶವಾಗಿರುವ ಕುವೈತಿಗೆ ಸಗಣಿಯ ಪೂರೈಕೆ ಇಷ್ಟೊಂದು ಹೆಚ್ಚಾಗಿರುವ ಕಾರಣ ಏನು ಎಂಬುದಾಗಿ ನೀವು ಕೇಳಬಹುದಾಗಿದೆ. ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಕುವೈತಿಗೆ ಭಾರತದ ಸಗಣಿಯ ರಫ್ತು ಗಣನೀಯವಾಗಿ ಹೆಚ್ಚಾಗಿರುವ ಕಾರಣ ಹಸುಗಳ ಸಗಣಿಯ ಕಾರಣದಿಂದಾಗಿ ಅರಬ್ ದೇಶಗಳಲ್ಲಿ ಖರ್ಜೂರದ ಮರಗಳ ಬೆಳವಣಿಗೆಯಲ್ಲಿ ಪೋಷಕಾಂಶಗಳು ಹೆಚ್ಚಿಗೆ ಹಾಗೂ ಖರ್ಜೂರದ ಹಣ್ಣುಗಳ ಗಾತ್ರ ಕೂಡ ದೊಡ್ಡದಾಗಿ ಬೆಳೆದಿದೆ ಎಂಬ ಕಾರಣವಿದೆ. ಈಗಾಗಲೇ ಕುವೈತ್ ಮೂಲದ ಕಂಪನಿ ಆಗಿರುವ ಲಾಮೋರ್ ಬರೋಬ್ಬರಿ 192 ಮೆಟ್ರಿಕ್ ಟನ್ ಗಳಷ್ಟು ಹಸುಗಳ ಸಗಣಿಯ ಗೊಬ್ಬರವನ್ನು ಜೈಪುರದ ಸಂಸ್ಥೆಯಿಂದ ಆಮದು ಮಾಡಿಕೊಳ್ಳಲು ಆರ್ಡರನ್ನು ನೀಡಿದೆ.

ಇಷ್ಟೊಂದು ದಿನ ಕೇವಲ ಮಾಂಸ ಹಾಲು ಪ್ರಾಣಿಗಳ ಚರ್ಮ ಹೀಗೆ ಹಲವಾರು ಬೇರೆ ತರಹದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶ ಈಗ ಭಾರತದಿಂದ ಹಸುವಿನ ಸಗಣಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತದ ಜಾನುವಾರುಗಳು ಪ್ರತಿದಿನ 3 ಮಿಲಿಯನ್ ಟನ್ ಗಳಷ್ಟು ಸಗಣಿಯನ್ನು ನೀಡುತ್ತವೆ. ಮುಂದಿನ ದಿನಗಳಲ್ಲಿ ಅರಬ್ ದೇಶಗಳಿಂದ ಇನ್ನಷ್ಟು ಹೆಚ್ಚಿನ ಆರ್ಡರುಗಳು ಬಂದರೆ ಖಂಡಿತವಾಗಿ ಯಾವುದೇ ಆಶ್ಚರ್ಯ ಪಡಬೇಕಾದ ಪ್ರಮೇಯವೇ ಇಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಲು ಮಾತ್ರ ಮರೆಯಬೇಡಿ.