ಮೂರನೇ ಟಿ 20 ಪಂದ್ಯ ಗೆಲ್ಲಲು ಇವರೇ ಕಾರಣ ಎಂದ ನಾಯಕ ರಿಷಬ್ ಪಂತ್. ನಾಯಕ ಹಾಡಿಹೊಗಳಿದ್ದು ಯಾರನ್ನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಬಹುಕಾಲ ಗಳ ನಂತರ ಐಪಿಎಲ್ ಮುಗಿದಮೇಲೆ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧ ಟಿ20 ಪಂದ್ಯಗಳ ಸರಣಿಯನ್ನು ಆಡಲು ಪ್ರಾರಂಭಿಸಿತ್ತು. ಆದರೆ ಮೊದಲ ಅಂತರಾಷ್ಟ್ರೀಯ ಸರಣಿಯಲ್ಲಿ ಎರಡು ಪಂದ್ಯಗಳ ಹೀನಾಯ ಹಿನ್ನಡೆಯನ್ನು ಅನುಭವಿಸಿತ್ತು ಅದು ಕೂಡ ಭಾರತ ನೆಲದಲ್ಲೇ. ಇದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ನಗರ ಅಭಿಮಾನಿಗಳಿಗೆ ಸಾಕಷ್ಟು ಅಸಮಾಧಾನವನ್ನು ಮೂಡಿಸಿತ್ತು ಇದು ನ್ಯಾಯವೇ ಆಗಿತ್ತು.

ರೋಹಿತ್ ಶರ್ಮ ರವರ ಅನುಪಸ್ಥಿತಿಯಲ್ಲಿ ರಾಹುಲ್ ರವರು ನಾಯಕ ಆಗಬೇಕಿತ್ತು ಆದರೆ ಅವರ ಇಂಜುರಿಯ ಕಾರಣದಿಂದಾಗಿ ಅವರು ಸರಣಿಯಿಂದ ಅಪರ ಹೋಗಬೇಕಾಗಿ ಬಂತು. ರಿಷಬ್ ಪಂತ್ ರವರ ನಾಯಕತ್ವದಲ್ಲಿ ಯುವ ಉತ್ತಮ ಆಟಗಾರರು ಭಾರತೀಯ ಕ್ರಿಕೆಟ್ ತಂಡದಲ್ಲಿ ಇದ್ದರೂ ಕೂಡಾ ಭಾರತೀಯ ನೆಲದಲ್ಲಿಯೇ ಎರಡು ಸತತ ಸೋಲುಗಳನ್ನು ಕಂಡಿತ್ತು. ಇದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕಂಗೆಡಿಸಿತ್ತು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಕೊನೆಗೂ ರಿಷಬ್ ಪಂತ್ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಪುಟಿದೆದ್ದು ಸೌತ್ ಆಫ್ರಿಕಾ ತಂಡವನ್ನು ನಿನ್ನೆ ನಡೆದಿರುವ ಪಂದ್ಯದಲ್ಲಿ ಅದ್ದೂರಿಯಾಗಿ ಸೋಲಿಸುವ ಮೂಲಕ ಸರಣಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಪಂದ್ಯ ಗೆದ್ದ ನಂತರ ಮಾತನಾಡಿದ ರಿಷಬ್ ಪಂತ್ ಮೊದಲು ಬ್ಯಾಟಿಂಗ್ ಮಾಡಿದ ನಂತರ 15ರಂದು ಗಳು ಕಡಿಮೆ ಎನ್ನಿಸಿತು ಎಂಬುದಾಗಿ ಭಾವಿಸಿದ್ದೆವು ಆದರೆ ಬೌಲಿಂಗ್ ವಿಭಾಗ ಈ ಕೊರತೆಯನ್ನು ನೀಗಿಸಿದೆ ಎಂಬುದಾಗಿ ನಿಟ್ಟಿಸಿರು ಬಿಟ್ಟಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹರ್ಷಲ್ ಪಟೇಲ್ ಹಾಗೂ ಯಜುವೇಂದ್ರ ಚಹಾಲ್ ರವರನ್ನು ಗೆಲುವಿನ ಪ್ರಮುಖ ರೂವಾರಿಯಾಗಿ ರಿಷಬ್ ಪಂತ್ ರವರು ಹೊಗಳಿದ್ದಾರೆ. ಹರ್ಷಲ್ ಪಟೇಲ್ ನಾಲ್ಕು ವಿಕೆಟ್ಗಳನ್ನು ಹಾಗು ಚಹಾಲ್ ರವರು ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಟಿ ಟ್ವೆಂಟಿ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಮತ್ತೊಮ್ಮೆ ಭಾರತೀಯ ಕ್ರಿಕೆಟ್ ತಂಡ ಗೆಲುವಿನ ಲಯಕ್ಕೆ ಮರಳಿದ್ದು ಇದೇ ಲಯದಲ್ಲಿ ಸರಣಿಯನ್ನು ಗೆಲ್ಲಲಿ ಎಂಬುದಾಗಿ ಎಲ್ಲರೂ ಆಶಿಸುತ್ತಿದ್ದಾರೆ.