ದಿನೇಶ್ ಕಾರ್ತಿಕ್ ರವರ ಮೇಲೆ ಕೆಲವರು ಟೀಕೆ ಮಾಡಿದ ತಕ್ಷಣ ಪ್ರತಿಕ್ರಿಯೆ ನೀಡಿದ ಕಪಿಲ್ ದೇವ್ ಹೇಳಿದ್ದೇನು ಗೊತ್ತೇ??

ದಿನೇಶ್ ಕಾರ್ತಿಕ್ ರವರ ಮೇಲೆ ಕೆಲವರು ಟೀಕೆ ಮಾಡಿದ ತಕ್ಷಣ ಪ್ರತಿಕ್ರಿಯೆ ನೀಡಿದ ಕಪಿಲ್ ದೇವ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದಿನೇಶ್ ಕಾರ್ತಿಕ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಆಡುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ರವರು ನಿರ್ವಹಿಸುತ್ತಿದ್ದ ಫಿನಿಶರ್ ಜವಾಬ್ದಾರಿಯನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿ ಹಲವಾರು ಸಮಯಗಳಿಂದ ಸರಿಯಾಗಿ ನಿರ್ವಹಿಸುವ ಆಟಗಾರ ಇರಲಿಲ್ಲ.

ದಿನೇಶ್ ಕಾರ್ತಿಕ್ ರವರು ಈಗ ಅದೇ ಜವಾಬ್ದಾರಿಯನ್ನು ನಿರ್ವಹಿಸಲು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಮೊದಲ ಎರಡು ಪಂದ್ಯಗಳನ್ನು ಸೌತ್ ಆಫ್ರಿಕಾ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ನಿಮಗೆ ಸೋತಿರುವುದು ನಿಮಗೆ ತಿಳಿದಿದೆ. ಕೊನೆಗೂ ಅಂತೂಇಂತೂ ಮೂರನೇ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡ ನಿನ್ನೆಯಷ್ಟೇ ಗೆದ್ದಿದೆ. ಆದರೆ ಕೆಲವು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಮಾತ್ರ ದಿನೇಶ್ ಕಾರ್ತಿಕ್ ರವರು ಗರಿಷ್ಠ ಎಸೆತಗಳಲ್ಲಿ ರನ್ ಬಾರಿಸುತ್ತಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ ಅಲ್ಲ ಎನ್ನುವುದಾಗಿ ದಿನೇಶ್ ಕಾರ್ತಿಕ್ ರವರನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಕಿಸುತ್ತಿದ್ದಾರೆ. ಈ ಟೀಕೆಗಳಿಗೆ ಮಾಜಿ ಕ್ರಿಕೆಟಿಗ ಹಾಗೂ 83ರ ವಿಶ್ವಕಪ್ ವಿಜೇತ ತಂಡದ ನಾಯಕನಾಗಿರುವ ಕಪಿಲ್ ದೇವ್ ರವರು ಟೀಕೆಗಳಿಗೆ ಜವಾಬು ನೀಡಿದ್ದಾರೆ.

ಕನ್ಸಿಸ್ಟೆಂಟ್ ವಿಚಾರಕ್ಕೆ ಬರುವುದಾದರೆ ದಿನೇಶ್ ಕಾರ್ತಿಕ್ ರವರು ಸದಾಕಾಲ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಅವರು ಎಷ್ಟು ಹೆಸರುಗಳನ್ನು ತೆಗೆದುಕೊಂಡಿದ್ದಾರೆ ಎನ್ನುವುದು ಮುಖ್ಯವಲ್ಲ ಅವರು ಯಾವತ್ತೂ ಕೂಡ ತಂಡಕ್ಕೆ ಗೆಲುವಿನ ಪ್ರದರ್ಶನವನ್ನು ನೀಡುತ್ತದೆ ಎನ್ನುವುದು ಮುಖ್ಯ ಎಂದು ಹೇಳಿದ್ದಾರೆ. ಇದನ್ನು ನಾವು ಈಗಾಗಲೇ ಐಪಿಎಲ್ನಲ್ಲಿ ನೋಡಿದ್ದೇವೆ ಎಂಬುದಾಗಿ ಕೂಡಾ ಕಪಿಲ್ ದೇವ್ ರವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ರವರ ಸ್ಥಾನಕ್ಕೆ ಒಬ್ಬ ಸೂಕ್ತ ಆಟಗಾರ ಆಗುವ ಎಲ್ಲ ಲಕ್ಷಣಗಳನ್ನು ದಿನೇಶ್ ಕಾರ್ತಿಕ್ ಹೊಂದಿದ್ದಾರೆ ಎಂಬುದಾಗಿ ಕೂಡ ಹೇಳಿದ್ದಾರೆ.