ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪ್ರತಿದಿನ ಒಂದು ಜಿಬಿ ಡೇಟಾ ಜೊತೆಗೆ ಅನಿಯಮಿತ ಕಾಲ್ ಗಳನ್ನು ಪಡೆಯಲು ಜಿಯೋ ಪರಿಚಯ ಮಾಡಿರುವ ಅತಿ ಕಡಿಮೆ ಪ್ಲಾನ್ ಗಳು ಯಾವ್ಯಾವು ಗೊತ್ತೇ?

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರಗಳಲ್ಲಿ ಸರಕಾರಿ ಟೆಲಿಕಾಂ ಕಂಪನಿ ಗಿಂತ ಹೆಚ್ಚಾಗಿ ಖಾಸಗಿ ಕಂಪನಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ ಸಂಸ್ಥೆಗಳನ್ನು ಹಿಂದಿಕ್ಕಿ ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ಕಂಪನಿಯಾಗಿ ಮಾರ್ಪಟ್ಟಿದೆ. ಹಲವಾರು ಜನಪ್ರಿಯ ಯೋಜನೆಗಳನ್ನು ತನ್ನ ಗ್ರಾಹಕರಿಗೆ ಪರಿಚಯ ಮಾಡಿಸುವ ಮೂಲಕ ಅವರ ರುಚಿಗೆ ತಕ್ಕಂತೆ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದ ನಂಬರ್1 ಸಂಸ್ಥೆಯಾಗಿ ಕಾಣಿಸಿಕೊಳ್ಳುತ್ತಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ಹೆಚ್ಚು ಪ್ರಯೋಜನಗಳನ್ನು ಗ್ರಾಹಕರಿಗೆ ನೀಡುವ ಜಿಯೋ ಸಂಸ್ಥೆಯ ಪ್ಲಾನಿಂಗ್ ಅನ್ನು ಹಲವಾರು ಸಂಸ್ಥೆಗಳು ಕಾಪಿ ಮಾಡಲು ಪ್ರಯತ್ನಿಸಿದರೂ ಕೂಡ ಜಿಯೋ ಸಂಸ್ಥೆ ಪಡೆದಷ್ಟು ಯಶಸ್ಸನ್ನು ಬೇರೆ ಸಂಸ್ಥೆಗಳು ಇರುವರಿಗೂ ಕೂಡ ಪಡೆಯಲು ಸಾಧ್ಯವಾಗಲಿಲ್ಲ. ಇಲ್ಲಿ ಮೂರು ಪ್ಲಾನ್ಗಳು ಜಿಯೋ ಸಂಸ್ಥೆಯಿಂದ ಹೊಸದಾಗಿ ಗ್ರಾಹಕರಿಗೆ ಪರಿಚಿತವಾಗಿದೆ. ಮೊದಲನೇದಾಗಿ 149 ರೂಪಾಯಿಗಳ ರಿಚಾರ್ಜ್. ಇದರಲ್ಲಿ 20 ದಿನಗಳಿಗೆ 20gb ಇಂಟರ್ನೆಟ್ ಡೇಟಾ ವ್ಯಾಲಿಡಿಟಿ ಜೊತೆಗೆ 100 ಎಸ್ಎಂಎಸ್ ಹಾಗೂ ಉಚಿತ ಕರೆಗಳು ಮತ್ತು ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆ ದೊರಕಲಿದೆ.

ಎರಡನೇದಾಗಿ 152 ರೂಪಾಯಿಗಳ ರೀಚಾರ್ಜ್ ಪ್ಲಾನ್. ಇದು 28 ದಿನಗಳ ವ್ಯಾಲಿಡಿಟಿ ಯೊಂದಿಗೆ ಸಿಗುತ್ತದೆ ಹಾಗೂ ಇದರಲ್ಲಿ ದಿನಕ್ಕೆ 0.5 ಜಿಬಿ ಇಂಟರ್ನೆಟ್ ಡೇಟ್ ಅಂದರೆ ವ್ಯಾಲಿಡಿಟಿಯ ಪೂರ್ಣ ಸಂದರ್ಭದಲ್ಲಿ 14gb ಡೇಟಾ ಹಾಗೂ ದಿನಕ್ಕೆ 300 ಉಚಿತ ಎಸ್ಎಂಎಸ್ ಹಾಗೂ ಅನಿಮಿಯತ ಕರೆಗಳು ಜಿಯೋ ಅಪ್ಲಿಕೇಶನ್ಗಳ ಮೇಲೆ ಉಚಿತ ಚಂದಾದಾರಿಕೆ ಸಿಗಲಿದೆ. ಮೂರನೇದಾಗಿ 179 ರೂಪಾಯಿಗಳ ರಿಚಾರ್ಜ್. 24 ದಿನಗಳ ವ್ಯಾಲಿಡಿಟಿ ಜೊತೆಗೆ ದಿನಕ್ಕೆ 1gb ಅಂತೆ ಒಟ್ಟು 24gb ಇಂಟರ್ನೆಟ್ ಡೇಟಾ ಸಿಗುತ್ತದೆ. ಇದರ ಜೊತೆಗೆ ಅನಿಮಿಯತ ಕಾರ್ಯಗಳು ಹಾಗೂ ದಿನಕ್ಕೆ 100 ಎಸ್ಎಂಎಸ್ ಗಳು ಕೂಡ ಉಚಿತವಾಗಿ ಸಿಗುತ್ತವೆ ಮತ್ತು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜಿಯೋ ಅಪ್ಲಿಕೇಶನ್ ಮೇಲೆ ಕೊಡು ಉಚಿತ ಚಂದಾದಾರಿಕೆ ಸಿಗುತ್ತದೆ.

Get real time updates directly on you device, subscribe now.