ಲಕ್ಷಾಂತರ ಭಕ್ತರಿಗೆ ಪ್ರತಿ ದಿನ ಊಟ ನೀಡುವ ಈ ದೇವಸ್ಥಾನಗಳಲ್ಲಿ ಪ್ರಸಾದವು ಕೂಡ ಬಹಳ ಫೇಮಸ್. ಇಲ್ಲಿಗೆ ಹೋದವರೂ ಪ್ರಸಾದ ಮಿಸ್ ಮಾಡಲೇ ಬಾರದು. ಯಾವ್ಯಾವು ಗೊತ್ತೇ??

ಲಕ್ಷಾಂತರ ಭಕ್ತರಿಗೆ ಪ್ರತಿ ದಿನ ಊಟ ನೀಡುವ ಈ ದೇವಸ್ಥಾನಗಳಲ್ಲಿ ಪ್ರಸಾದವು ಕೂಡ ಬಹಳ ಫೇಮಸ್. ಇಲ್ಲಿಗೆ ಹೋದವರೂ ಪ್ರಸಾದ ಮಿಸ್ ಮಾಡಲೇ ಬಾರದು. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಭಕ್ತಾದಿಗಳು ಹೋಗುತ್ತಾರೆ. ಅಲ್ಲಿ ಪೂಜಾಧಿಗಳನ್ನು ಮಾಡಿಸಿ, ಭಕ್ತಿಯಿಂದ ದೇವರನ್ನು ಪ್ರಾರ್ಥಿಸುತ್ತಾರೆ. ಇನ್ನು ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಇವುಗಳನ್ನು ಬಿಟ್ಟು ಇನ್ನೊಂದು ಮಾರ್ಗವೆಂದರೆ ದೇವಾಲಯದಲ್ಲಿ ಸಿಗುವ ಪ್ರಸಾದವನ್ನು ಸ್ವೀಕರಿಸುವುದು. ದೇವಾಲಯಗಳಲ್ಲಿ ಹಲವಾರು ದೇವಾಲಯಗಳು ಭಕ್ತರಿಗೆ ರುಚಿಯಾದ ಪ್ರಸಾದವನ್ನು ವಿತರಿಸುವಲ್ಲಿ, ಪ್ರಸಾದದ ಊಟ ಒದಗಿಸುವಲ್ಲಿ ನಿರತವಾಗಿವೆ. ಅಂಥ ಕೆಲವು ದೇವಾಲಯಗಳ ಹೆಸರುಗಳು ಇಲ್ಲಿವೆ.

ಹೊರನಾಡ ಅನ್ನಪೂರ್ಣೇಶ್ವರಿ: ಈ ದೇವಾಲಯಕ್ಕೆ 400 ವರ್ಷಗಳ ಇತಿಹಾಸವಿದೆ. ಕರ್ನಾಟಕದಲ್ಲಿರುವ ಈ ದೇವಾಲಯವು ಪ್ರತಿನಿತ್ಯ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡುತ್ತದೆ. ಅನ್ನನೀಡುವ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ಇಲ್ಲಿ ಕುಳಿತಿರುವಾಗ ಭಕ್ತಾದಿಗಳು ಹಸಿದಿರಲು ಹೇಗೆ ಸಾಧ್ಯ.

ಗೋಲ್ಡನ್ ಟೆಂಪಲ್, ಅಮೃತಸರ: ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಈ ದೇವಾಲಯದಲ್ಲಿ ಪ್ರಸಾದದ ರೂಪದಲ್ಲಿ ರುಚಿಕರವಾದ ಭಕ್ಷ್ಯವನ್ನು ನೀಡುತ್ತಾರೆ. ವಿದೇಶಿಗರೂ ಕೂಡ ಈ ರುಚ್ಗೆ ಮರುಳಾಗಿದ್ದು, ಹಲವು ಯಾತ್ರಿಕರು ಇಲ್ಲಿಗೆ ಆಗಮಿಸುತ್ತಾರೆ. ದಾಲ್, ರೊಟ್ಟಿ, ಅನ್ನ, ಸಬ್ಜಿ ಹಾಗೂ ಶೀರಾವನ್ನು ಕೂಡ ಇಲ್ಲಿ ಭಕ್ತಾಧಿಗಳಿಗೆ ಉಣಬಡಿಸಲಾಗುತ್ತದೆ.

ಮುಂಬೈ ನ ಇಸ್ಕಾನ್ ದೇವಸ್ಥಾನ: ಬಹಳ ರುಚಿಕರವಾದ ಸಾತ್ವಿಕ ಆಹಾರಕ್ಕೆ ಹೆಸರುವಾಸಿ ಇಸ್ಕಾನ್. ಬೆಂಗಳೂರಿನಲ್ಲಿಯೂ ಇಸ್ಕಾನ್ ದೇವಾಲಯವಿದ್ದು, ಇಲ್ಲಿನ ಟ್ರಸ್ಟ್ ವತಿಯಿದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನೂ ಕೂಡ ನೀಡಲಾಗುತ್ತದೆ. ಈ ದೇವಾಲಯದ ಇನ್ನೊದು ವಿಶೇಷತೆ ಎಂದರೆ ಇಲ್ಲಿ ಮಧ್ಯಾಹ್ನ ಮಾತ್ರವಲ್ಲ ರಾತ್ರಿಯೂ ಕೂಡ ಭಕ್ತಾಧಿಗಳಿಗೆ ಊಟ ನೀಡಲಾಗುತ್ತದೆ.

ಶಿರಡಿ ಸಾಯಿಬಾಬಾ ಮಂದಿರ ಪ್ರಸಾದಾಲಯ, ಶಿರಡಿ ಸಾಯಿಬಾಬಾ ಮಂದಿರ: ಇಲ್ಲಿನ ಪ್ರಸಾದಾಲಯದಲ್ಲಿ ಸೌರಶಕ್ತಿಯಿಂದ ಅಡುಗೆಮನೆ ನಿರ್ವಹಿಸಲಾಗುತ್ತಿದ್ದು, ಏಷ್ಯಾದ ಅತಿದೊಡ್ಡ ಅಡುಗೆಮನೆ ಎನಿಸಿದೆ. ಇಲ್ಲಿ ಪ್ರತಿದಿನ ಸುಮಾರು 2000 ಕೆಜಿ ಬೇಳೆ ಮತ್ತು ಅಕ್ಕಿಯನ್ನು ಊಟಕ್ಕೆ ಮೀಸಲಿಡುತ್ತಾರೆ. ಬಲ್ಲಿರಾ?

ತಿರುಮಲ ತಿರುಪತಿ ದೇವಸ್ಥಾನ: ತಿರುಪತಿ ದೇವಸ್ಥಾನಕ್ಕೆ ಹೋದವರು ಅಲ್ಲಿನ ಲಡ್ಡು ಪ್ರಸಾದವನ್ನು ಮಿಸ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಇಲ್ಲಿನ ಅಡುಗೆಮನೆಯನ್ನೂ ಕೂಡ ಸುಸಜ್ಜಿತವಾಗಿ ನಿರ್ಮಿಸಲಾಗಿದು, ಶುಚಿತ್ವ ಹಾಗೂ ರುಚಿಗೆ ಮಹತ್ವ ಕೊಡಲಾಗುತ್ತದೆ. ಇಲ್ಲಿ ದಿನವೊಂದಕ್ಕೆ 1100 ಅಡುಗೆ ಭಟ್ಟರು ಕೆಲಸ ಮಾಡುತ್ತಾರೆ ಎಂದರೆ ಪ್ರಸಾದ ಸ್ವೀಕರಿಸುವವರ ಸಂಖ್ಯೆಯನ್ನು ನೀವೇ ಊಹಿಸಬಹುದು.

ಬ್ಯಾಂಕ್ ಬಿಹಾರಿ, ವೃಂದಾವನ: ಬ್ಯಾಂಕ್ ಬಿಹಾರಿ ದೇವಾಲಯದಲ್ಲಿ ಪ್ರಸಾದವಾಗಿ ದಾಲ್ ಹಾಗೂ ಆಲೂ ಮಿಶ್ರಣದ ಕಚೋರಿಯನ್ನು ಕೊಡಲಾಗುತ್ತದೆ. ಕೃಷ್ಣನನ್ನು ಪೂಜಿಸಿದ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ.

ಇನ್ನು ಪುರಿಯ ಜಗನ್ನಾಥ ದೇವಾಲಯ: ಇಲ್ಲಿ ಪ್ರತಿದಿನ 56 ಭಕ್ಷ್ಯಗಳ ತಟ್ಟೆ(ಛಪಾನ್ ಭೋಗ್)ಯನ್ನು ದೇವರಿಗೆ ನೈವೇದ್ಯವಾಗಿ ನೀಡಲಾಗುತ್ತದೆ. ಭಕ್ತಾಧಿಗಳಿಗಾಗಿ ಇಲ್ಲಿ ಮಹಾಪ್ರಸಾದವನ್ನು ಸಿದ್ಧಪಡಿಸಲಾಗುತ್ತಿದ್ದು, ಟನ್ ಗಟ್ಟಲೆ ಅಕ್ಕಿ, ಉದ್ದಿನಬೇಳೆ, ಕೆಂಪು ಕುಂಬಳಕಾಯಿ, ಬದನೆ, ಗೆಣಸು ಮೊದಲಾದ ತರಕಾರಿಗಳನ್ನು ಬಳಸಿ ಅಡುಗೆ ಮಾಡಲಾಗುತ್ತದೆ. ಇಷ್ಟೇ ಅಲ್ಲ ಸ್ನೇಹಿತರೆ, ಇನ್ನೂ ಹಲವಾರು ದೇವಾಲಯಗಳು ಅತ್ಯುತ್ತಮ ಪ್ರಸಾದವನ್ನು ನೀಡುವುದರ ಮೂಲಕ ಭಕ್ತರಿಗೆ ಸಂತೃಪ್ತಿಯನ್ನು ನೀಡುತ್ತಿವೆ.