ಪರಭಾಷೆಯಲ್ಲಿ ಮಿಂಚುತ್ತಿರುವ ಕನ್ನಡತಿ ಪೂಜಾ ಹೆಗ್ಡೆ ರವರ ಜೊತೆ ಸಿನೆಮಾ ಮಾಡಲು ಮುಂದಾದರೆ ಯಶ್?? ಕೇಳಿಬರುತ್ತಿರುವ ಮಾಹಿತಿ ಏನು ಗೊತ್ತೇ??

ಪರಭಾಷೆಯಲ್ಲಿ ಮಿಂಚುತ್ತಿರುವ ಕನ್ನಡತಿ ಪೂಜಾ ಹೆಗ್ಡೆ ರವರ ಜೊತೆ ಸಿನೆಮಾ ಮಾಡಲು ಮುಂದಾದರೆ ಯಶ್?? ಕೇಳಿಬರುತ್ತಿರುವ ಮಾಹಿತಿ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಜಿಎಫ್ ಚಾಪ್ಟರ್ 2 ಚಿತ್ರ ಎನ್ನುವುದು ಭಾರತೀಯ ಚಿತ್ರರಂಗದಲ್ಲೇ ರಾಕಿಂಗ್ ಸ್ಟಾರ್ ಯಶ್ ರವರನ್ನು ಬೇರೆಲ್ಲಾ ನಟರಿಗಿಂತ ಬಹುಬೇಡಿಕೆಯ ನಾಯಕ ನಟನನ್ನಾಗಿ ನಿರೂಪಿಸಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ ರಾಕಿಂಗ್ ಸ್ಟಾರ್ ಯಶ್ ರವರು ಇನ್ನು ಮುಂದೆ ಕೇವಲ ಕನ್ನಡ ಚಿತ್ರರಂಗದ ಸ್ಟಾರ್ ನಟನಾಗಿ ಮಾತ್ರವಲ್ಲದೆ ಪಂಚಭಾಷಾ ತಾರೆಯಾಗಿ ಮಿಂಚಲಿದ್ದಾರೆ ಎನ್ನುವುದು ಈಗಾಗಲೇ ಸಾಬೀತಾಗಿರುವ ಅಂಶ.

ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ರವರು ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವುದರ ಕುರಿತಂತೆ ಯಾವುದೇ ಅಧಿಕೃತವಾಗಿ ಘೋಷಣೆಗಳು ಹೊರಬಿದ್ದಿಲ್ಲ ವಾದರೂ ಕೂಡ ಈಗಾಗಲೇ ಹಲವಾರು ಮೂಲಗಳಿಂದ ಕೆಲವೊಂದು ಸುದ್ದಿಗಳು ಕೂಡ ಕೇಳಿಬರುತ್ತಿವೆ. ಇನ್ನು ಅವರ ಮುಂದಿನ ಸಿನಿಮಾದಲ್ಲಿ ಕನ್ನಡ ಮೂಲದ ತೆಲುಗು ಚಿತ್ರರಂಗದ ಖ್ಯಾತ ನಟಿ ಆಗಿರುವ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎಂಬ ಸುದ್ದಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮುಂದೆ ಯಾವ ಸಿನಿಮಾ ಮೂಡಿಬರಬಹುದು ಎಂಬುದಾಗಿ ನಿಮಗೆ ವಿವರವಾಗಿ ತಿಳಿಸುತ್ತೇವೆ ಬನ್ನಿ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ನಲ್ಲಿ ಮಫ್ತಿ ಖ್ಯಾತಿಯ ನರ್ತನ್ ನಿರ್ದೇಶನದಲ್ಲಿ ಹಾಗೂ ಕೆವಿಎಂ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬರಲಿದೆ ಎಂಬುದಾಗಿ ಕೇಳಿಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ಮುಂದಿನ ದಿನಗಳಲ್ಲಿ ನಾವು ಕಾದುನೋಡಬೇಕಾಗಿದೆ. ಆದರೆ ನರ್ತನ್ ರವರ ಜೊತೆಗೆ ರಾಕಿಬಾಯ್ ಸಿನಿಮಾ ಮಾಡುತ್ತಾರೆ ಎಂಬುದು ಮೊದಲಿನಿಂದಲೂ ಕೂಡ ಕೇಳಿಬಂದಿರುವ ವಿಚಾರವಾಗಿದೆ. ಈ ಕಾಂಬಿನೇಷನ್ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.