ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಗಂಗೂಲಿ ನನ್ನನ್ನು ಅಲ್ಲ, ನಾನು ಗಂಗೂಲಿಯನ್ನು ಉಳಿಸಿದ್ದೆ. ಉಲ್ಟಾ ಹೊಡೆದ ಹರ್ಭಜನ್, ಭಾರತ ಕಂಡ ಶ್ರೇಷ್ಠ ನಾಯಕ ಗಂಗೂಲಿ ಕುರಿತು ಹೇಳಿದ್ದೇನು ಗೊತ್ತೇ??

234

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಕಾಲದಲ್ಲಿ ನಮ್ಮ ಭಾರತೀಯ ಕ್ರಿಕೆಟ್ ತಂಡ ಹಂಚಿ ಹರಿದು ಹೋಗಿತ್ತು. ಆದರೆ ಆ ಭಾರತೀಯ ಕ್ರಿಕೆಟ್ ತಂಡವನ್ನು ಸದೃಢವಾಗಿ ಕಟ್ಟಿ ಬೆಳೆಸಿದ್ದು ನಾಯಕನಾಗಿ ಸೌರವ್ ಗಂಗೂಲಿ ಎಂದರೆ ತಪ್ಪಲ್ಲ.
ಭಾರತೀಯ ಕ್ರಿಕೆಟ್ ತಂಡ ಕಂಡಂತಹ ಸರ್ವಶ್ರೇಷ್ಠ ನಾಯಕರಲ್ಲಿ ಸೌರವ್ ಗಂಗೂಲಿ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸೌರವ್ ಗಂಗೂಲಿ ಅವರ ನಾಯಕತ್ವದ ಅಡಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಹಲವಾರು ಪ್ರತಿಭೆಗಳನ್ನು ಮುನ್ನಲೆಗೆ ತರುವಂತೆ ಮಾಡಿದೆ. ಮಹೇಂದ್ರ ಸಿಂಗ್ ಧೋನಿಯ ರವರಿಂದ ಹಿಡಿದು ಹಲವಾರು ಪ್ರಮುಖ ಹಾಗೂ ಪ್ರತಿಭಾನ್ವಿತ ಆಟಗಾರರು ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿಯೇ ದೊಡ್ಡ ಮೈಲಿಗಳನ್ನು ತಮ್ಮ ಜೀವನದಲ್ಲಿ ಸಾಧಿಸಿದ್ದಾರೆ ಎಂದರೆ ತಪ್ಪಾಗಲಾರದು.

ನಾಯಕನಾಗಿ ಬಹುತೇಕ ಎಲ್ಲಾ ಆಟಗಾರರಿಗೂ ಕೂಡ ಸೌರವ್ ಗಂಗೂಲಿ ಅವರು ಅವರು ಏನು ಮಾಡಬೇಕೆಂದಿದ್ದರು ಕೂಡ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತಿದ್ದರು. ಒಂದು ಬಲಿಷ್ಠ ಭಾರತೀಯ ಕ್ರಿಕೆಟ್ ತಂಡದ ಬುನಾದಿ ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ಟೀಮ್ನಲ್ಲಿ ಪ್ರಾರಂಭವಾಗಿತ್ತು. ಇನ್ನು ಇತ್ತೀಚೆಗಷ್ಟೆ ಹರ್ಭಜನ್ ಸಿಂಗ್ ರವರು ನಾನು ಸೌರವ್ ಗಂಗೂಲಿ ಅವರನ್ನು 2001 ರಲ್ಲಿ ಉಳಿಸಿದ್ದೆ ಎಂಬುದಾಗಿ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ಹೌದು ಗೆಳೆಯರೇ 2001 ರಲ್ಲಿ ನಡೆದಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಸೋತಿದ್ದರೆ ಖಂಡಿತವಾಗಿ ಸೌರವ್ ಗಂಗೂಲಿ ಅವರು ನಾಯಕತ್ವದಿಂದ ಹೊರಬೀಳ ಬೇಕಾದಂತಹ ಪರಿಸ್ಥಿತಿ ಎದುರಾಗಿತ್ತು.

ಇದೇ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ರವರು ಕೂಡ ಉತ್ತಮ ಪ್ರದರ್ಶನವನ್ನು ನೀಡಿರದಿದ್ದರೆ ಅವರು ಕೂಡ ತಂಡದಿಂದ ಹೊರ ಬೀಳಬೇಕಾಗಿತ್ತು. ಆದರೆ ಆ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಅವರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿದ ಸೌರವ್ ಗಂಗುಲಿ ಹರ್ಭಜನ್ ಸಿಂಗ್ ರವರು ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್ ಪಡೆಯಲು ಹಾಗೂ ಸರಣಿ ಗೆಲ್ಲಲು ಪ್ರಮುಖ ಕಾರಣವಾಗಿದ್ದು. ಹೀಗಾಗಿ ಇಬ್ಬರೂ ಕೂಡ ಪರಸ್ಪರ ತಂಡದಿಂದ ಹೊರಹೋಗುವ ಶಿಕ್ಷೆಯಿಂದ ಪಾರಾಗುವಂತೆ ಮಾಡಿಕೊಂಡರು ಎಂಬುದಾಗಿ ಈ ಸಂದರ್ಭದಲ್ಲಿ ಭಜ್ಜಿ ಹೇಳಿದ್ದಾರೆ. ಅಂದರೆ ಬೌಲಿಂಗ್ ಅವಕಾಶ ನೀಡುವ ಮೂಲಕ ಹರ್ಭಜನ್ ಸಿಂಗ್ ರವರು ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಉಳಿದುಕೊಳ್ಳುವಂತೆ ಆಯಿತು. ಹರ್ಭಜನ್ ಸಿಂಗ್ ಅವರ ಉತ್ತಮ ಪ್ರದರ್ಶನದಿಂದ ಸರಣಿ ಗೆದ್ದ ಭಾರತ ತಂಡ ಸೌರವ್ ಗಂಗೂಲಿ ರವರ ನಾಯಕತ್ವವು ಕೂಡ ಉಳಿಯಿತು.

Get real time updates directly on you device, subscribe now.