ಅಂದು ಶಮಿ, ಈಗ ದಿನೇಶ್ ಕಾರ್ತಿಕ್ ಗೆ ಅವಮಾನ; ಪಾಂಡ್ಯಗೆ ನಿಜಕ್ಕೂ ಯಶಸ್ಸು ನೆತ್ತಿಗೇರಿದೆಯೇ?? ದಿನೇಶ್ ಕಾರ್ತಿಕ್ ರವರಿಗೆ ಹೀಗೆ ಮಾಡಿದ್ದು ಸರಿಯೇ??

ಅಂದು ಶಮಿ, ಈಗ ದಿನೇಶ್ ಕಾರ್ತಿಕ್ ಗೆ ಅವಮಾನ; ಪಾಂಡ್ಯಗೆ ನಿಜಕ್ಕೂ ಯಶಸ್ಸು ನೆತ್ತಿಗೇರಿದೆಯೇ?? ದಿನೇಶ್ ಕಾರ್ತಿಕ್ ರವರಿಗೆ ಹೀಗೆ ಮಾಡಿದ್ದು ಸರಿಯೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ 5 ಟಿ-ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಸೌತ್ ಆಫ್ರಿಕದ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಕೊನೆಯ ಐದು ಎಸೆತಗಳು ಬಾಕಿ ಉಳಿದಿರುವಂತೆ ಸೋತಿದೆ. ಹೌದು ಗೆಳೆಯರೇ ರಿಷಬ್ ಪಂತ್ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಉತ್ತಮ ಬ್ಯಾಟಿಂಗ್ ಮಾಡಿದ ನಂತರವೂ ಕೂಡ ಸೋತಿದ್ದು ನಿಜಕ್ಕೂ ಕೂಡ ಎಲ್ಲರ ಬೇಸರಕ್ಕೆ ಕಾರಣವಾಗಿದೆ.

ಅದರಲ್ಲೂ ಪ್ರಮುಖವಾಗಿ ಭಾರತೀಯ ಬ್ಯಾಟ್ಸ್ ಮನ್ ಗಳು ಅಷ್ಟೊಂದು ದೊಡ್ಡ ಮೊತ್ತವನ್ನು ಪೇರಿಸಿದ ನಂತರವೂ ಕೂಡ ಅದನ್ನು ಉಳಿಸಿಕೊಳ್ಳಲು ಭಾರತೀಯ ಬೌಲರುಗಳು ವಿಫಲರಾದರೂ ಎಂಬುದಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ದೂಷಿಸುತ್ತಿದ್ದಾರೆ. ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ದಿನೇಶ್ ಕಾರ್ತಿಕ್ ರವರು ಐಪಿಎಲ್ ನಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡುವ ಮೂಲಕ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಮರು ವಾಪಸಾತಿಯನ್ನು ಮಾಡಿದ್ದರು. ಮರು ವಾಪಸಾತಿ ಮಾಡಿದ ಮೊದಲ ಪಂದ್ಯದಲ್ಲೇ ದಿನೇಶ್ ಕಾರ್ತಿಕ್ ರವರಿಗೆ ಅವಮಾನ ಆಗಿದೆ ಎಂಬುದಾಗಿ ಎಲ್ಲಾ ಕಡೆ ಸುದ್ದಿಯಾಗುತ್ತಿದೆ.

ಹಾಗೆ ಸುಮ್ಮನೆ ಗಮನಿಸಿದರೆ ನಿಮಗೆ ತಿಳಿಯುತ್ತದೆ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಇಬ್ಬರೂ ಕೂಡ ಹಲವಾರು ಸಮಯಗಳ ನಂತರ ಐಪಿಎಲ್ನಲ್ಲಿ ನೀಡಿರುವ ಪ್ರದರ್ಶನದ ಆಧಾರದ ಮೇಲೆ ಭಾರತೀಯ ಕ್ರಿಕೆಟ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ದಿನೇಶ್ ಕಾರ್ತಿಕ್ ರವರು ಮೂರು ವರ್ಷಗಳ ಹಿಂದೆ ಭಾರತೀಯ ತಂಡದ ಪರವಾಗಿ ಕೊನೆಯಬಾರಿ ಆಡಿದ್ದರೆ ಇನ್ನು ಈ ಕಡೆ ಹಾರ್ದಿಕ್ ಪಾಂಡ್ಯ ರವರು ಕಳೆದ ವಿಶ್ವಕಪ್ನಲ್ಲಿ ಕೊನೆಯ ಬಾರಿಗೆ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡಿದ್ದರು.

ಸೌತ್ ಆಫ್ರಿಕಾ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯವನ್ನು ಗಮನಿಸುವುದಾದರೆ ಹಾರ್ದಿಕ್ ಪಾಂಡ್ಯ ರವರು 12 ಎಸೆತಗಳಲ್ಲಿ ಬರೋಬರಿ 31ರನ್ನು ಗಳನ್ನು ಬಾರಿಸಿದ್ದರು. ಇನ್ನು ದಿನೇಶ್ ಕಾರ್ತಿಕ್ ರವರು ಕೂಡ ಕೊನೆಯ ಓವರ್ನಲ್ಲಿ ಕ್ರೀಸಿಗೆ ಇಳಿದಿದ್ದರು. ಈ ಓವರ್ ಅವರಿಗೆ ಹೇಳಿಮಾಡಿಸಿದ ಹಾಗಿತ್ತು ಆದರೆ ದಿನೇಶ್ ಕಾರ್ತಿಕ್ ರವರ ವಿಚಾರದಲ್ಲಿ ಹಾರ್ದಿಕ್ ಪಾಂಡ್ಯ ರವರು ನಡೆದುಕೊಂಡ ರೀತಿ ಈಗ ಚರ್ಚೆಗೆ ಗ್ರಾಸವಾಗಿದೆ.

ಕೊನೆಯ ಓವರನ್ನು ಸೌತ್ಆಫ್ರಿಕ ಪರವಾಗಿ ಆನ್ರಿಚ್ ನಾರ್ಟ್ಜೆ ರವರು ಎಸೆಯುತ್ತಿದ್ದರು. ಮೂರನೇ ಎಸೆತಕ್ಕೆ ಕ್ರೀಸಿಗೆ ಬಂದ ದಿನೇಶ್ ಕಾರ್ತಿಕ್ ರವರು ಸಿಂಗಲ್ ಮಾಡಿ ಹಾರ್ದಿಕ್ ಪಾಂಡ್ಯ ರವರಿಗೆ ಬ್ಯಾಟಿಂಗ್ ನೀಡುತ್ತಾರೆ. ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಹಾರ್ದಿಕ್ ಪಾಂಡ್ಯ ಐದನೇ ಎಸೆತದಲ್ಲಿ ಸಿಂಗಲ್ ಮಾಡುವ ಅವಕಾಶವಿದ್ದರೂ ಕೂಡ ದಿನೇಶ್ ಕಾರ್ತಿಕ್ ರವರನ್ನು ಬೇಡ ಎಂಬುದಾಗಿ ತಡೆಯುತ್ತಾರೆ. ಕೊನೆಯ ಎಸೆತಗಳಲ್ಲಿ ಉತ್ತಮ ಹೊಡೆತ ಹೊಡೆಯುವ ಪರಿಣತಿಯನ್ನು ಹೊಂದಿರುವ ದಿನೇಶ್ ಕಾರ್ತಿಕ್ ರವರಿಗೆ ಬ್ಯಾಟಿಂಗ್ ಅವಕಾಶ ನೀಡದೆ ಇರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನು ಇದಕ್ಕೆ ಪ್ರತ್ಯುತ್ತರ ಎನ್ನುವಂತೆ ಮಾಜಿ ಕ್ರಿಕೆಟ್ ಆಟಗಾರ ಆಶಿಶ್ ನೆಹ್ರಾ ಅವರು ಕೂಡ ಹಾರ್ದಿಕ್ ಪಾಂಡ್ಯ ರವರ ಈ ನಡೆಯನ್ನು ಖಂಡಿಸಿ ವ್ಯಂಗ್ಯವಾಗಿ ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಇದ್ದಿದ್ದು ನಾನಲ್ಲ ದಿನೇಶ್ ಕಾರ್ತಿಕ್ ಎಂಬುದಾಗಿ ಉತ್ತರ ನೀಡುವ ಮೂಲಕ ದಿನೇಶ್ ಕಾರ್ತಿಕ್ ರವರಿಗೆ ಅವಕಾಶ ನೀಡಿದ್ದರೆ ಕೊನೆಯ ಎಸೆತದಲ್ಲಿ ನಿಮಗಿಂತ ಚೆನ್ನಾಗಿ ರನ್ ಬಾರಿಸುತ್ತಿದ್ದರು ಎಂಬುದಾಗಿ ಹೇಳಿದರು. ಈ ಹಿಂದೆ ಶಮಿ ವಿಚಾರದಲ್ಲಿ ಕೂಡ ಹಿತಕರವಾಗಿ ಹಾರ್ದಿಕ್ ಪಾಂಡ್ಯ ರವರು ನಡೆದುಕೊಂಡದ್ದು ಇಲ್ಲಿ ನಾವು ನೆನಪಿಸಿಕೊಳ್ಳ ಬಹುದಾಗಿದೆ.

ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಸತತವಾಗಿ ಕಳೆದ 12 ಟಿ20 ಪಂದ್ಯಗಳನ್ನು ಗೆದ್ದಿತ್ತು. ಈ ಪಂದ್ಯವನ್ನು ಗೆದ್ದಿದ್ದರೆ 13 ಪಂದ್ಯಗಳನ್ನು ಯಾವುದೇ ಸೋಲಿಲ್ಲದ ಸತತವಾಗಿ ಗೆದ್ದಂತಹ ತಂಡ ಎಂಬ ಖ್ಯಾತಿಗೆ ಪಾತ್ರವಾಗುತ್ತಿತ್ತು. ಈ ಪಂದ್ಯದಲ್ಲಿ ಸೋಲಿನ ಪ್ರಮುಖ ಕಾರಣವಾಗಿದ್ದು ಭಾರತೀಯ ಬೌಲರ್ ಗಳ ಕಳಪೆ ಬೌಲಿಂಗ್ ಎಂದರೆ ತಪ್ಪಾಗಲಾರದು. ಮುಂದಿನ ಪಂದ್ಯ ಇದೇ ಜೂನ್ 12ರಂದು ನಡೆಯಲಿದ್ದು ಭಾರತ ಕಂಬ್ಯಾಕ್ ಮಾಡುವ ನಿರೀಕ್ಷೆ ಇದೆ.