ಯಾವುದೇ ಕಾರಣಕ್ಕೂ ಉಮ್ರಾನ್ ಮಲಿಕ್ ರವರನ್ನು ವಿಶ್ವಕಪ್ ಗೆ ಆಯ್ಕೆ ಮಾಡಬೇಡಿ ಎಂದ ರವಿ ಶಾಸ್ತ್ರೀ, ಕಾರಣಗಳ ಸಮೇತ ಹೇಳಿದ್ದೇನು ಗೊತ್ತೇ?

ಯಾವುದೇ ಕಾರಣಕ್ಕೂ ಉಮ್ರಾನ್ ಮಲಿಕ್ ರವರನ್ನು ವಿಶ್ವಕಪ್ ಗೆ ಆಯ್ಕೆ ಮಾಡಬೇಡಿ ಎಂದ ರವಿ ಶಾಸ್ತ್ರೀ, ಕಾರಣಗಳ ಸಮೇತ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈ ಬಾರಿ ಐಪಿಎಲ್ ಎನ್ನುವುದು ಸಾಕಷ್ಟು ಯುವ ಪ್ರತಿಭೆಗಳಿಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಲು ಅವಕಾಶವನ್ನು ನೀಡಿದೆ. ಅದರಲ್ಲೂ ಈ ಬಾರಿ ಐಪಿಎಲ್ ನಲ್ಲಿ ಒಬ್ಬ ಆಟಗಾರನಂತೂ ತನ್ನ ಸಂಪೂರ್ಣ ಪ್ರತಿಭೆಯನ್ನು ಕ್ರಿಕೆಟ್ ಜಗತ್ತಿಗೆ ಪ್ರದರ್ಶಿಸಿದ್ದಾರೆ. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ಐಪಿಎಲ್ನಲ್ಲಿ ಅತ್ಯಂತ ವೇಗದ ಬೌಲಿಂಗ್ ಪ್ರದರ್ಶನವನ್ನು ನೀಡಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಕಾಶ್ಮೀರ ಮೂಲದ ಯುವ ವೇಗಿಯಾಗಿರುವ ಉಮ್ರಾನ್ ಮಲ್ಲಿಕ್ ರವರ ಕುರಿತಂತೆ.

ಹೌದು ಗೆಳೆಯರು ತಮ್ಮ ವಿಶೇಷವಾದ ಪ್ರತಿಭೆಯಿಂದ ಈಗ ಇವರು ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಆಯ್ಕೆಯಾಗಿದ್ದಾರೆ. ಐಪಿಎಲ್ ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡಿರುವ ಉಮ್ರಾನ್ ಮಲಿಕ್ ಈಗ ಭಾರತದ ಕ್ರಿಕೆಟ್ ತಂಡದಲ್ಲಿ ಕೂಡ ಈ ಬಾರಿಯ ಸೌತ್ ಆಫ್ರಿಕಾ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಆಯ್ಕೆಯಾಗಿದ್ದಾರೆ. ನೆಟ್ ಪ್ರಾಕ್ಟೀಸ್ ನಲ್ಲಿ ಉಮ್ರಾನ್ ಮಲ್ಲಿಕ್ ರವರು 163 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಪ್ಲೇಯಿಂಗ್ 11ರಲ್ಲಿ ಮಾಡುವುದಂತೂ ಖಚಿತ ಎಂಬುದಾಗಿ ಎಲ್ಲರೂ ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿ ಮಾತ್ರ ಅವರನ್ನು ಮುಂಬರುವ ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳುವುದು ಬೇಡ ಎಂಬುದಾಗಿ ಕಾರಣಗಳೊಂದಿಗೆ ಹೇಳಿದ್ದಾರೆ.

ಹೌದು ಗೆಳೆಯರೇ ಅವರಿಗಿನ್ನೂ ಅಂತರಾಷ್ಟ್ರೀಯ ಕ್ರಿಕೆಟಿನ ಅನುಭವ ಕಡಿಮೆ ಇದ್ದು ಅವರನ್ನು ಮೊದಲು ವೈಟ್ ಬಾಲ್ ಹಾಗೂ ನಂತರ ರೆಡ್ ಬಾಲ್ ಎರಡರಲ್ಲೂ ಕೂಡ ಆಡುವಂತೆ ಮಾಡಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಆಡಿಸಿ ನಂತರ ಪ್ರಮುಖ ಸೀರೀಸ್ ಗಳಲ್ಲಿ ಅವರನ್ನು ಆಡಿಸುವುದು ಉತ್ತಮ ಎಂಬುದಾಗಿ ರವಿಶಾಸ್ತ್ರಿ ಅವರು ಅಭಿಪ್ರಾಯಪಟ್ಟಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ರವಿಶಾಸ್ತ್ರಿ ರವರ ಅಭಿಪ್ರಾಯ ಕೂಡ ಮೌಲ್ಯ ಉಳ್ಳದ್ದಾಗಿದೆ ಎಂದು ಹೇಳಬಹುದಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ಹಂಚಿಕೊಳ್ಳಿ.