ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತನ್ನ ನೆಚ್ಚಿನ ಆಟಗಾರನ್ನು ಹೆಸರಿಸಿದ ಭಾರತದ ಭವಿಷ್ಯದ ಆಟಗಾರ, ಯಾರಂತೆ ಗೊತ್ತೇ ರಾಹುಲ್ ರವರ ನೆಚ್ಚಿನ ಆಟಗಾರ. ಯಾರು ಗೊತ್ತೇ?

1,602

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ರೋಹಿತ್ ಶರ್ಮಾ ರವರು ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿ ಕೊಳ್ಳುವಂತಹ ಜವಾಬ್ದಾರಿ ಕೆಎಲ್ ರಾಹುಲ್ ರವರ ಮೇಲಿದೆ. ಆದರೆ ಈ ಬಾರಿ ಸೌತ್ ಆಫ್ರಿಕಾ ವಿರುದ್ಧದ ಐದು ಟಿ-ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ಅವರನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು ಆದರೆ ಅವರ ಇಂಜುರಿಯ ಕಾರಣದಿಂದಾಗಿ ಅವರು ತಂಡದಿಂದ ಹೊರ ಬರುವಂತಾಯಿತು.

ಸದ್ಯಕ್ಕೆ ಕೆ ಎಲ್ ರಾಹುಲ್ ಅವರು ವಿಶ್ರಾಂತಿಯಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಮುಂದಿನ ಸರಣಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಉಪನಾಯಕನಾಗಿ ಕಾಣಿಸಿಕೊಳ್ಳಬಹುದಾಗಿದೆ. ರೋಹಿತ್ ಶರ್ಮ ರವರ ನಂತರ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗುತ್ತಾರೆ ಎಂಬುದಾಗಿ ಕೆಎಲ್ ರಾಹುಲ್ ರವರ ಕುರಿತು ಸಾಕಷ್ಟು ಸುದ್ದಿಗಳು ಓಡಾಡುತ್ತಿವೆ. ಇನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೆಎಲ್ ರಾಹುಲ್ ಅವರು ತಮ್ಮ ನೆಚ್ಚಿನ ಆಟಗಾರ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹೌದು ಗೆಳೆಯರೇ ಐಪಿಎಲ್ ನಲ್ಲಿ ಸತತವಾಗಿ ಕನ್ಸಿಸ್ಟೆಂಟ್ ಆಗಿ ಹಾಗೂ ನ್ಯಾಷನಲ್ ತಂಡದಲ್ಲಿ ಕೂಡ ಸಂತುಲಿತ ವಾಗಿ ಆಟವಾಡುತ್ತಿರುವ ಕೆಎಲ್ ರಾಹುಲ್ ರವರ ನೆಚ್ಚಿನ ಆಟಗಾರ ಯಾರು ಎಂದು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಕೆಎಲ್ ರಾಹುಲ್ ರವರ ನೆಚ್ಚಿನ ಆಟಗಾರ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಹಾಗೂ ರನ್ ಮಷೀನ್ ಕಿಂಗ್ ವಿರಾಟ್ ಕೊಹ್ಲಿ. ಯಾವುದೇ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡ ರಾಹುಲ್ ಅವರ ನೆರವಿಗೆ ಬರುತ್ತಿದ್ದದ್ದು ವಿರಾಟ್ ಕೊಹ್ಲಿ. ರಾಹುಲ್ ರವರು ಸಿಕ್ಸ್ ಹಾಗೂ ಬೌಂಡರಿ ಬಾರಿಸಿದಾಗ ಇನ್ನಷ್ಟು ಬಾರಿಸು ಎಂಬುದಾಗಿ ಪ್ರೋತ್ಸಾಹ ನೀಡುತ್ತಿದ್ದುದ್ದು ಕೂಡ ಅವರೇ. ರಾಹುಲ್ ರವರು ಕೂಡ ಪ್ರತಿ ಬಾರಿ ನಿಮ್ಮಂತೆ ಬ್ಯಾಟಿಂಗ್ ಮಾಡುವುದು ಹೇಗೆ ಎಂಬುದನ್ನು ಪದೇ ಪದೇ ಕೊಹ್ಲಿ ರವರ ಬಳಿ ಸಲಹೆಯನ್ನು ಕೂಡ ಕೇಳುತ್ತಿದ್ದರು. ಹೀಗಾಗಿ ಕೆಎಲ್ ರಾಹುಲ್ ರವರ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಎಂದು ಹೇಳಬಹುದಾಗಿದೆ.