ಪಂದ್ಯ ಹೆಚ್ಚು ಮಾಡಿ, ಮತ್ತಷ್ಟು ಮಹತ್ವದ ಬದಲಾವಣೆ ಮಾಡಲು ಮುಂದಾದ ಬಿಸಿಸಿಐ, 2023 ರಿಂದ 2027 ರವರೆಗೆ ಐಪಿಎಲ್ ನಲ್ಲಿ ಏನೆಲ್ಲಾ ನಿಯಮಗಳೇನು ಗೊತ್ತೇ?

ಪಂದ್ಯ ಹೆಚ್ಚು ಮಾಡಿ, ಮತ್ತಷ್ಟು ಮಹತ್ವದ ಬದಲಾವಣೆ ಮಾಡಲು ಮುಂದಾದ ಬಿಸಿಸಿಐ, 2023 ರಿಂದ 2027 ರವರೆಗೆ ಐಪಿಎಲ್ ನಲ್ಲಿ ಏನೆಲ್ಲಾ ನಿಯಮಗಳೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈಗಾಗಲೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ನ 15ನೇ ಆವೃತ್ತಿ ಮುಗಿದಿದ್ದು ಮುಂದಿನ ಐಪಿಎಲ್ ನಿಂದ ಸಾಕಷ್ಟು ಮಹತ್ತರವಾದ ಬದಲಾವಣೆಗಳನ್ನು ತರಲು ಬಿಸಿಸಿಐ ನಿರ್ಧರಿಸಿದೆ. ಯಾಕೆಂದರೆ ಮುಂದಿನ ಸೀಸನ್ ಗೂ ಮುನ್ನ ಈಗ ಬಿಸಿಸಿಐ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆಯನ್ನು ನಡೆಸಲು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಹೀಗಾಗಿ ಮುಂದಿನ ಐಪಿಎಲ್ ನಿಂದ ಇನ್ನೂ ಹೆಚ್ಚು ಪಂದ್ಯಗಳನ್ನು ಮಾಡುವುದರ ಮುಖಾಂತರ ಪ್ರಸಾರಮಾಡುವ ಹಕ್ಕುಗಳನ್ನು ಪಡೆಯುವ ಸಂಸ್ಥೆಗಳಿಗೂ ಕೂಡ ಲಾಭ ಆಗಲಿ ಎನ್ನುವ ಇರಾದೆಯನ್ನು ಬಿಸಿಸಿಐ ಹೊಂದಿದೆ. ಈ ಬಾರಿಯ ಐಪಿಎಲ್ ನಲ್ಲಿ ಎರಡು ತಂಡಗಳು ಹೆಚ್ಚಿದ ಕಾರಣ ರೌಂಡ್ ರಾಬಿನ್ ಪಂದ್ಯಗಳನ್ನು ನಡೆಸುವ ಮೂಲಕ 60ರ ಬದಲು 74 ಪಂದ್ಯಗಳನ್ನು ನಡೆಸಲಾಗಿತ್ತು.

ಹೀಗಾಗಿ ಬಿಸಿಸಿಐ ಯೋಚಿಸಿರುವ ಯೋಜನೆಯ ಪ್ರಕಾರ ಮುಂದಿನ ಐದು ವರ್ಷಗಳ ಐಪಿಎಲ್ನಲ್ಲಿ ಸಾಕಷ್ಟು ಮಹತ್ತರವಾದ ಬದಲಾವಣೆಗಳನ್ನು ತರಲು ಯೋಚಿಸಿದೆ. ಅದೇನೆಂದರೆ ಇದೇ ರೀತಿಯ ಫಾರ್ಮೆಟ್ ಮೂಲಕ 2023 ಹಾಗೂ 24 ರಲ್ಲಿ ಇದೇ 74 ಪಂದ್ಯಗಳು ನಡೆಯಲಿದೆ. ಆದರೆ 2025 ಹಾಗೂ 26 ರಲ್ಲಿ 84 ಪಂದ್ಯಗಳನ್ನು ನಡೆಸಲಾಗುವುದು ಅಂದರೆ ಹತ್ತು ಹೆಚ್ಚಿನ ಪಂದ್ಯಗಳನ್ನು ನಡೆಸಲಾಗುತ್ತೆ. ಅದಾದ ನಂತರ 2027 ರಲ್ಲಿ 94 ಪಂದ್ಯಗಳನ್ನು ಇದೇ ಲೀಗ್ ಫಾರ್ಮ್ಯಾಟ್ ನಲ್ಲಿ ನಡೆಸಲಾಗುವುದು ಎಂಬುದಾಗಿ ಯೋಜಿಸಲಾಗಿದೆ.

ಕಳೆದ ವರ್ಷದ ಐಪಿಎಲ್ ಅನ್ನು ಗಮನಿಸುವುದಾದರೆ ಒಟ್ಟಾರೆಯಾಗಿ 60 ಪಂದ್ಯಗಳನ್ನು ಆಡಿಸಲಾಗಿತ್ತು ಅದರಲ್ಲಿ 56 ಪಂದ್ಯಗಳು ಲೀಗ್ ಪಂದ್ಯಗಳಾಗಿದ್ದವು ಹಾಗೂ ನಾಲ್ಕು ಪಂದ್ಯಗಳು ಪ್ಲೇಆಫ್ ನಂತರದ ಪಂದ್ಯಗಳಾಗಿದ್ದವು. ಅಂದರೆ ಈ ಲೀಗ್ ಹಂತದ ಫಾರ್ಮ್ಯಾಟ್ ನಲ್ಲಿ ಪರಸ್ಪರ ತಂಡಗಳು ಎರಡು ಪಂದ್ಯಗಳನ್ನು ಆಡಿದ್ದವು. ಅಂದರೆ ಈ ಲೀಗ್ನಲ್ಲಿ ತಂಡಗಳು ಒಟ್ಟಾರೆಯಾಗಿ 14 ಪಂದ್ಯಗಳನ್ನು ಆಡಿದ್ದವು. ಆದರೆ ಈ ಬಾರಿ ರೌಂಡ್ ರಾಬಿನ್ ಫಾರ್ಮ್ಯಾಟ್ ನಲ್ಲಿ ಪಂದ್ಯಗಳನ್ನು ಆಡಿಸಲಾಗಿದೆ.

ಅಂದರೆ ಎ ಗ್ರೂಪ್ ನಲ್ಲಿದ್ದ ತಂಡ ತನ್ನ ಗ್ರೂಪ್ನಲ್ಲಿ ಇರುವ ನಾಲ್ಕು ತಂಡಗಳ ವಿರುದ್ಧ ಎರಡು ಪಂದ್ಯಗಳನ್ನು ಆಡಿದೆ. ಬಿ ಗ್ರೂಪ್ ನಲ್ಲಿರುವ ನಾಲ್ಕು ತಂಡಗಳ ವಿರುದ್ಧ ತಲೆಗೊಂದು ಪಂದ್ಯಗಳನ್ನು ಹಾಗೂ ಡಿ ಗ್ರೂಪ್ ನಲ್ಲಿರುವ ಒಂದು ತಂಡದ ವಿರುದ್ಧ ಎರಡು ಪಂದ್ಯಗಳನ್ನು ಆಡಿದೆ. ಅಂದರೆ ಆ ಗ್ರೂಪ್ನಲ್ಲಿ ಇರುವ ತಂಡಗಳ ವಿರುದ್ಧ ಎರಡು ಪಂದ್ಯಗಳನ್ನು ಹಾಗೂ ಮತ್ತೊಂದು ಗ್ರೂಪ್ನಲ್ಲಿ ಇರುವ ನಾಲ್ಕು ತಂಡಗಳ ವಿರುದ್ಧ ಒಂದು ಪಂದ್ಯ ಹಾಗೂ ಒಂದು ತಂಡದ ವಿರುದ್ಧ ಎರಡು ಪಂದ್ಯಗಳನ್ನು ಆಡಿದೆ. ಅಂದರೆ ಒಂದು ತಂಡ ಒಟ್ಟಾರೆಯಾಗಿ 14 ಪಂದ್ಯಗಳನ್ನು ಆಡಿದೆ. ಈ ಮೇಲೆ ಈಗ ನಾವು ಹೇಳಿರುವ ಫಾರ್ಮೆಟ್ ನಲ್ಲಿಯೇ 2023 ಹಾಗೂ 24 ರ ಐಪಿಎಲ್ ಪಂದ್ಯಗಳು ನಡೆಯಲಿವೆ.

ಆದರೆ 2025 ರ ಐಪಿಎಲ್ ನಲ್ಲಿ ಒಟ್ಟಾರೆಯಾಗಿ 84 ಬಂದೆ ಗಳಿರುತ್ತವೆ ಹೀಗಾಗಿ ಇಲ್ಲಿ ಕೂಡ ಅದೇ ರೀತಿಯ ರೌಂಡ್ ರಾಬಿನ್ ಫಾರ್ಮೇಟ್ ಅನ್ನು ಅನುಸರಿಸಲಾಗುತ್ತದೆ. ಆದರೆ ಇಲ್ಲಿ ಕೊಂಚ ಮಟ್ಟಿಗೆ ಬದಲಾವಣೆ ಕಂಡುಬರುತ್ತದೆ. ಅದೇನೆಂದರೆ ತನ್ನ ಗ್ರೂಪ್ನಲ್ಲಿ ಇರುವ ನಾಲ್ಕು ತಂಡಗಳ ವಿರುದ್ಧ ಎರಡು ಪಂದ್ಯಗಳನ್ನು ಆಡಲಾಗುತ್ತದೆ ಆದರೆ ಬೇರೆ ಗ್ರೂಪಿನಲ್ಲಿ ಇರುವ ಮೂರು ಪಂದ್ಯಗಳ ವಿರುದ್ಧ ಒಂದೊಂದು ಪಂದ್ಯಗಳು ಹಾಗೂ ಎರಡು ತಂಡಗಳ ವಿರುದ್ಧ ತಲಾ ಎರಡು ಪಂದ್ಯಗಳನ್ನು ಆಡಲಾಗುತ್ತದೆ. ಅಂದರೆ ಈ ಲೀಗ್ನಲ್ಲಿ ಒಂದು ತಂಡ ತಲ 15 ಪಂದ್ಯಗಳನ್ನು ಆಡಲಿದೆ. ಈ ರೀತಿಯ ಫಾರ್ಮ್ಯಾಟ್ ನಲ್ಲಿಯೇ 2025 ಹಾಗೂ 26 ರ ಐಪಿಎಲ್ ನಡೆಯಲಿದೆ.

ಇನ್ನು 2027 ರಲ್ಲಿ ಯಾವುದೇ ರೀತಿಯ ಗ್ರೂಪ್ ಇರುವುದಿಲ್ಲ ಬದಲಾಗಿ ಒಂದು ತಂಡ ಉಳಿದ ಎಲ್ಲಾ ತಂಡಗಳ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದ್ದು ಒಟ್ಟಾರೆಯಾಗಿ ಎಲ್ಲ ತಂಡಗಳು ಲೀಗ್ ಹಂತದಲ್ಲಿ 90 ಪಂದ್ಯಗಳನ್ನು ಆಡಲಿದೆ. ಉಳಿದಂತೆ ಪ್ಲೇಆಫ್ ನಂತರದ ಎಲ್ಲಾ ಫಾರ್ಮೆಟ್ ಗಳು ಅದೇ ರೀತಿ ಇರಲಿವೆ. ಈ ಮಾದರಿಯಲ್ಲಿ 2023 ರಿಂದ 2027 ರವರೆಗೆ ಬಂದಿಗಳ ಸಂಖ್ಯೆಯನ್ನು ಕ್ರಮೇಣವಾಗಿ ಹೆಚ್ಚು ಮಾಡುವುದರಿಂದಾಗಿ ಪ್ರಸಾರದ ಹಕ್ಕನ್ನು ಖರೀದಿಸುವ ಸಂಸ್ಥೆಗಳಿಗೆ ಲಾಭವನ್ನು ನೀಡಬಹುದಾಗಿದೆ ಎಂಬುದಾಗಿ ಬಿಸಿಸಿಐ ಯೋಜನೆ ಹಾಕಿದೆ. ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.