ಭಾರತದ ಭವಿಷ್ಯದ ನಾಯಕನನ್ನು ಆಯ್ಕೆ ಮಾಡಿದ ಹರ್ಭಜನ್ ಸಿಂಗ್: ಯಾರಂತೆ ಗೊತ್ತೇ?? ನಿಮ್ಮ ಆಯ್ಕೆ ರಾಹುಲ್ ಗಿಂತ ಉತ್ತಮವೇ ಎಂದ ನೆಟ್ಟಿಗರು.

ಭಾರತದ ಭವಿಷ್ಯದ ನಾಯಕನನ್ನು ಆಯ್ಕೆ ಮಾಡಿದ ಹರ್ಭಜನ್ ಸಿಂಗ್: ಯಾರಂತೆ ಗೊತ್ತೇ?? ನಿಮ್ಮ ಆಯ್ಕೆ ರಾಹುಲ್ ಗಿಂತ ಉತ್ತಮವೇ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೆ ವಿರಾಟ್ ಕೊಹ್ಲಿ ರವರು ನಾಯಕತ್ವದಿಂದ ಕೆಳಗಿಳಿದನಂತರ ಮೂರು ಫಾರ್ಮೆಟ್ ಗಳಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸುವ ನಾಯಕನನ್ನಾಗಿ ರೋಹಿತ್ ಶರ್ಮ ರವರನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ಆದರೆ ನಿಮಗೆಲ್ಲ ಗೊತ್ತಿರುವ ಹಾಗೆ ರೋಹಿತ್ ಶರ್ಮಾ ರವರು ಇನ್ನೂ ಹೆಚ್ಚು ವರ್ಷಗಳ ಕಾಲ ಕ್ರಿಕೆಟ್ ಆಡುವುದು ಅನುಮಾನ ಹೀಗಾಗಿ ಭವಿಷ್ಯದ ನಾಯಕನನ್ನು ಈಗಲೇ ತಯಾರು ಮಾಡಬೇಕಾಗಿರುವ ಅನಿವಾರ್ಯ ಪರಿಸ್ಥಿತಿ ಬಿಸಿಸಿಐ ಗಿದೆ.

ಸದ್ಯಕ್ಕೆ ರೋಹಿತ್ ಶರ್ಮಾ ರವರ ನಂತರ ಕನ್ನಡಿಗ ಕೆಎಲ್ ರಾಹುಲ್ ರವರು ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆ ಆಗಬಹುದಾದ ಅಂತಹ ಸಾಧ್ಯತೆ ಹೆಚ್ಚಾಗಿದೆ ಈಗಾಗಲೇ ಅವರ ತಂಡದ ಉಪನಾಯಕನಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ನಾಯಕತ್ವದ ರೇಸ್ ನಲ್ಲಿ ಹಲವಾರು ಕ್ರಿಕೆಟಿಗರ ಹೆಸರು ಕೇಳಿಬರುತ್ತಿದೆ. ಕೆ ಎಲ್ ರಾಹುಲ್ ರವರ ಹೆಸರನ್ನು ಹೊರತುಪಡಿಸಿ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ತಂಡವನ್ನು ಮುನ್ನಡೆಸಿರುವ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿರುವ ರಿಷಬ್ ಪಂತ್ ರವರ ಹೆಸರು ಕೂಡ ನಾಯಕತ್ವದಲ್ಲಿ ಕೇಳಿಬರುತ್ತಿದೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವ ಹರ್ಭಜನ್ ಸಿಂಗ್ ರವರು ಈ ಆಟಗಾರ ಕ್ಯಾಪ್ಟನ್ ಆದರೆ ಖಂಡಿತವಾಗಿ ತಂಡ ಶಕ್ತವಾಗಿರುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಕೆಲವು ನೆಟ್ಟಿಗರು ಕೆಎಲ್ ರಾಹುಲ್ ಅವರಿಗಿಂತ ನಿಮ್ಮ ಕ್ಯಾಪ್ಟನ್ ಭಾರತ ತಂಡದ ಬೆಸ್ಟ್ ಕ್ಯಾಪ್ಟನ್ ಆಗ್ತಾರ ಎನ್ನುವುದಾಗಿ ಚಾಲೆಂಜ್ ಹಾಕಿದ್ದಾರೆ. ಹಾಗಿದ್ದರೆ ಹರ್ಭಜನ್ ಸಿಂಗ್ ರವರು ಸಲಹೆ ನೀಡಿರುವ ಆಟಗಾರ ಇನ್ಯಾರು ಅಲ್ಲ ಈ ಬಾರಿ ಗುಜರಾತ್ ಟೈಟನ್ಸ್ ತಂಡದ ಕಪ್ತಾನನಾಗಿ ಮೊದಲ ಪ್ರಯತ್ನದಲ್ಲೇ ಕಪ್ ಗೆದ್ದಿರುವ ಹಾರ್ದಿಕ್ ಪಾಂಡ್ಯ. ಹೌದು ಗೆಳೆಯರೆ ಹರ್ಭಜನ್ ಸಿಂಗ್ ರವರ ಪ್ರಕಾರ ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ಕಪ್ತಾನ ಆಗುವುದಕ್ಕೆ ಎಂಬುದಾಗಿ ಸೂಚನೆ ನೀಡಿದ್ದಾರೆ. ಕೇವಲ ಒಬ್ಬ ನಾಯಕನಾಗಿ ಮಾತ್ರವಲ್ಲದೇ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಆತ ತಂಡಕ್ಕೆ ಗೆಲುವನ್ನು ಸಾಧಿಸಿ ಕೊಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ ಎಂಬುದಾಗಿ ಹೇಳಿದ್ದಾರೆ.