ಬಿಗ್ ನ್ಯೂಸ್: ವಾಹನ ಸವಾರರಿಗೆ ಸಿಹಿ ಸುದ್ದಿ, ಜೆರ್ಮನಿ ದೇಶದ ರೀತಿ ಟೋಲ್ ವ್ಯವಸ್ಥೆ ಸೃಷ್ಟಿ ಮಾಡಲು ನಡೆಯುತ್ತಿದೆ ಚರ್ಚೆ: ಹೇಗಿರಲಿದೆ ಗೊತ್ತೇ??

ಬಿಗ್ ನ್ಯೂಸ್: ವಾಹನ ಸವಾರರಿಗೆ ಸಿಹಿ ಸುದ್ದಿ, ಜೆರ್ಮನಿ ದೇಶದ ರೀತಿ ಟೋಲ್ ವ್ಯವಸ್ಥೆ ಸೃಷ್ಟಿ ಮಾಡಲು ನಡೆಯುತ್ತಿದೆ ಚರ್ಚೆ: ಹೇಗಿರಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆ ತಿಳಿದಿರಬಹುದು ಇದೇ ಏಪ್ರಿಲ್ 1ರಿಂದ ಅಂದರೆ ಆರ್ಥಿಕ ವರ್ಷದ ಮೊದಲ ದಿನದಿಂದಲೇ ಟೋಲ್ ದರದಲ್ಲಿ ಹೆಚ್ಚಳ ಕಂಡುಬಂದ ಕಾರಣದಿಂದಾಗಿ ಚಾಲಕರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದರು. ಆದರೆ ಈಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಜರ್ಮನಿ ಹಾಗೂ ಯುರೋಪಿಯನ್ ದೇಶಗಳು ಅನುಸರಿಸುವ ಅತ್ಯಂತ ಸುಲಭದ ವ್ಯವಸ್ಥೆಯ ಮೂಲಕ ಟೋಲ್ ಸುಂಕವನ್ನು ಸಂಗ್ರಹ ಮಾಡುವ ಯೋಜನೆ ಭಾರತದಲ್ಲಿಯೂ ಕೂಡ ಅತಿ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂಬುದಾಗಿ ಕೇಳಿಬರುತ್ತಿದೆ.

ಸದ್ಯಕ್ಕೆ ಇರುವ ಪರಿಸ್ಥಿತಿಯ ಪ್ರಕಾರ ಒಂದು ಟೋಲ್ ನಿಂದ ಇನ್ನೊಂದು ಟೋಲ್ ಗೆ ಇರುವ ಅಂತರದ ಆಧಾರದಲ್ಲಿ ಟೋಲ್ ಸುಂಕದ ರೂಪದಲ್ಲಿ ಹಣವನ್ನು ಪಡೆಯಲಾಗುತ್ತಿತ್ತು. ಇದರ ನಡುವೆ ಪೂರ್ಣ ಅಂತರವನ್ನು ಕ್ರಮಿಸಲು ಇದ್ದರೂ ಕೂಡ ಪೂರ್ತಿ ಹಣವನ್ನು ಪಾವತಿ ಮಾಡಬೇಕಾದ ಪರಿಸ್ಥಿತಿ ಇತ್ತು. ಆದರೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಈ ಸಿಸ್ಟಮ್ ಅನ್ನು ತೆಗೆದುಹಾಕುವ ನಿರೀಕ್ಷೆ ಇದೆ. ಮುಂದಿನ ಹೊಸ ಸಿಸ್ಟಮ್ ನಲ್ಲಿ ಸ್ಯಾಟಲೈಟ್ ಮೂಲಕ ಎಷ್ಟು ಕಿಲೋಮೀಟರ್ ಸಂಚಾರ ಮಾಡಿದ್ದಾರೆಯೋ ಕೇವಲ ಅಷ್ಟೇ ತೆರಿಗೆಯನ್ನು ಪಾವತಿ ಮಾಡುವ ವಿಧಾನವನ್ನು ಅಳವಡಿಸಲಾಗುತ್ತದೆ ಎಂಬುದಾಗಿ ಕೇಳಿಬರುತ್ತಿದೆ. ಜರ್ಮನಿ ಸೇರಿದಂತೆ ಯುರೋಪಿಯನ್ ದೇಶಗಳಲ್ಲಿ ಕೂಡ ಬಹುತೇಕ ಎಲ್ಲಾ ಸರ್ಕಾರಗಳು ಸ್ಯಾಟಲೈಟ್ ಆಧಾರದ ಮೇಲೆ ಇಂತಹ ಟೋಲ್ ಟ್ಯಾಕ್ಸ್ ಪದ್ಧತಿಯನ್ನು ಅಳವಡಿಸಿಕೊಂಡಿವೆ ಎಂಬುದಾಗಿ ನೀವು ಸರ್ಚ್ ಮಾಡಿ ನೋಡಬಹುದಾಗಿದೆ.

ಈ ಪ್ರಕಾರ ಸ್ಯಾಟಲೈಟ್ ನಿಂದ ಆ ಗಾಡಿ ಟೋಲ್ ರಸ್ತೆಗೆ ಕಾಲಿಟ್ಟ ತಕ್ಷಣವೇ ಟ್ಯಾಕ್ಸ್ ಲೆಕ್ಕಚಾರ ಪ್ರಾರಂಭವಾಗುತ್ತದೆ. ಒಂದು ವೇಳೆ ಬೇರೆ ರಸ್ತೆಯಲ್ಲಿ ಅದು ತಿರುವನ್ನು ಪಡೆದುಕೊಂಡರೆ ಅಲ್ಲಿಗೆ ಟ್ಯಾಕ್ಸ್ ಲೆಕ್ಕಚಾರ ನಿಲ್ಲುತ್ತದೆ. ಸದ್ಯಕ್ಕೆ 97% ಭಾರತದಲ್ಲಿ ವಾಹನಗಳು ಫಾಸ್ಟ್ಯಾಗ್ ಮೂಲಕ ಟ್ಯಾಕ್ಸ್ ಭರಿಸುತ್ತಿದ್ದಾರೆ. ಸದ್ಯಕ್ಕೆ ತಜ್ಞರು ಈ ಕುರಿತಂತೆ ವರದಿಯನ್ನು ಸಿದ್ಧಪಡಿಸುತ್ತಿದ್ದ ಮುಂದಿನ ವಾರದಲ್ಲಿ ವರದಿ ಬಹಿರಂಗ ಪಡಿಸುವ ಸಾಧ್ಯತೆ. ಈ ನಿಯಮ ಜಾರಿಯಾದರೆ ಖಂಡಿತವಾಗಿ ಚಾಲಕರಿಗೆ ಲಾಭವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.