ಭಾರತದ ತಂಡ ಎರಡನೇ ಪಂದ್ಯದಲ್ಲಿಯೂ ಕೂಡ ಸೋಲನ್ನು ಕಾಣಲು ಈ ಮೂರು ಅಂಶಗಳೇ ಕಾರಣ: ಯಾವ್ಯಾವು ಗೊತ್ತೇ??

ಭಾರತದ ತಂಡ ಎರಡನೇ ಪಂದ್ಯದಲ್ಲಿಯೂ ಕೂಡ ಸೋಲನ್ನು ಕಾಣಲು ಈ ಮೂರು ಅಂಶಗಳೇ ಕಾರಣ: ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಮತ್ತೊಮ್ಮೆ ಸೌತ್ ಆಫ್ರಿಕಾ ವಿರುದ್ಧದ ಟಿ-20 ಪಂದ್ಯದಲ್ಲಿ ಸೋತು ಸುಣ್ಣವಾಗಿದೆ. 5 ಪಂದ್ಯಗಳ ಟಿ-20 ಸರಣಿಯಲ್ಲಿ ಈಗಾಗಲೇ 2-0ಯ ಹಿನ್ನೆಲೆಯೇನು ಹೊಂದುವ ಮೂಲಕ ಈ ಸರಣಿಯನ್ನು ಸೋಲುವ ಭೀ’ತಿಯನ್ನು ಎದುರಿಸುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಕ್ರಿಕೆಟ್ ತಂಡ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇಶಾನ್ ಕಿಶನ್ ರವರ 34ರನ್ ಶ್ರೇಯಸ್ ಅಯ್ಯರ್ ರವರ 40 ರನ್ ಹಾಗೂ ದಿನೇಶ್ ಕಾರ್ತಿಕ್ ರವರ 30ರನ್ ಗಳ ಮೂಲಕ ಸ್ಪರ್ಧಾತ್ಮಕ 148 ರನ್ನುಗಳನ್ನು ಗಳಿಸಲು ಸಾಧ್ಯವಾಯಿತು.

ತಂಡದ ನಾಯಕ ರಿಷಬ್ ಪಂತ್ ಸೇರಿದಂತೆ ಹಾರ್ದಿಕ್ ಪಾಂಡ್ಯ ಋತುರಾಜ ಗಾಯಕ್ವಾಡ್ ರವರು ರನ್ ಗಳಿಸಲು ಸಂಪೂರ್ಣ ವಿಫಲರಾದರು ಎಂದು ಹೇಳಬಹುದಾಗಿದೆ. 149 ರನ್ನುಗಳ ಸುಲಭ ಗುರಿಯನ್ನು ಬೆನ್ನತ್ತಲು ಪ್ರಾರಂಭಿಸಿದ ಸೌತ್ ಆಫ್ರಿಕಾ ವನ್ನು ತಡೆಯಲು ಭುವನೇಶ್ ಕುಮಾರ್ ಅವರು ಪ್ರಯತ್ನ ಪಟ್ಟರೂ ಕೂಡ ಸಾಧ್ಯವಾಗಲಿಲ್ಲ. ಹೌದು ಗೆಳೆಯರೆ ಭುವನೇಶ್ವರ್ ಕುಮಾರ್ ಅವರು ನಾಲ್ಕು ವಿಕೆಟ್ ಗಳನ್ನು ಕಿತ್ತರು ಸೌತ್ ಆಫ್ರಿಕಾದ ಪರವಾಗಿ ಕ್ಲಾಸೆನ್ ರವರು 46 ಎಸೆತಗಳಲ್ಲಿ ಬರೋಬ್ಬರಿ 81 ರನ್ನುಗಳನ್ನು ಬಾರಿಸುವ ಮೂಲಕ ಸೌತ್ಆಫ್ರಿಕ ತಂಡಕ್ಕೆ ಸುಲಭ ಗೆಲುವು ತಂದಿತ್ತರು. ಇನ್ನು ಭಾರತೀಯ ಕ್ರಿಕೆಟ್ ತಂಡದ ಮೂರು ತಪ್ಪುಗಳು ಸೋಲಿಗೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ.

ಮೊದಲನೇದಾಗಿ ಭಾರತೀಯ ಕ್ರಿಕೆಟ್ ತಂಡದ ನಾಯಕ ರಿಷಬ್ ಪಂತ್ ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ ಇಬ್ಬರೂ ಕೂಡ ನೀರಸವಾದ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದು ತಂಡದ ಸೋಲಿಗೆ ಕಾರಣವಾಗಿದೆ. ಎರಡನೇದಾಗಿ ಅಕ್ಷರ ಪಟೇಲ ರವರು ನಿರೀಕ್ಷಿತ ಪ್ರದರ್ಶನವನ್ನು ನೀಡಲಿಲ್ಲ. ಮೂರನೇದಾಗಿ ಬೌಲಿಂಗ್ ಸಂದರ್ಭದಲ್ಲಿ ಕ್ಲಾಸೆನ್ ರವರನ್ನು ನಿಯಂತ್ರಿಸಲು ಭಾರತೀಯ ಬೌಲರ್ ಗಳು ವಿಫಲರಾಗಿದ್ದು ತಂಡದ ಸೋಲಿಗೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಸರಣಿಯಲ್ಲಿ ಹಿನ್ನಡೆ ಅನುಭವಿಸಿರುವ ಭಾರತೀಯ ಕ್ರಿಕೆಟ್ ತಂಡ ಮುಂದಿನ ಪಂದ್ಯಗಳಲ್ಲಿ ಮತ್ತೆ ಪುಟಿದೇಳುವ ನಿರೀಕ್ಷೆಯಲ್ಲಿದೆ.