ನಿಖಿಲ್ ಕುಮಾರಸ್ವಾಮಿ ರವರ ಮಗುವಿನ ನಾಮಕರಣ: ಅವ್ಯಾನ್ ಹೆಸರಿನ ಅರ್ಥವೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಯುವರಾಜ ಎಂದು ಬಿರುದಾಂಕಿತ ಆಗಿರುವ ನಿಖಿಲ್ ಕುಮಾರ್ ರವರು ಕಳೆದ ಎರಡು ವರ್ಷಗಳ ಹಿಂದೆ ರೇವತಿ ಅವರನ್ನು ಅರೆಂಜ್ ಮ್ಯಾರೇಜ್ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ಇವರಿಬ್ಬರು ಯಾವುದೇ ಪ್ರೇಮಿಗಳಿಗೆ ಕಡಿಮೆಯಿಲ್ಲದಂತೆ ಸೂಪರ್ ಜೋಡಿ ಎನ್ನುವುದಾಗಿ ಎಲ್ಲರಲ್ಲಿಯೂ ಕೂಡ ಫೇಮಸ್ ಆಗುತ್ತಾರೆ.

ಇನ್ನು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ನಿಖಿಲ್ ಕುಮಾರ್ ಅವರ ಪತ್ನಿ ರೇವತಿ ಅವರು ಗಂಡು ಮಗುವಿಗೆ ಜನ್ಮವನ್ನು ನೀಡುತ್ತಾರೆ. ಅಂದಿನಿಂದ ಇಂದಿನವರೆಗೂ ಕೂಡ ಮಗುವಿನ ಫೋಟೋವನ್ನು ಎಲ್ಲೂ ಕೂಡ ತೋರಿಸಿರಲಿಲ್ಲ. ಆದರೆ ಈಗ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್ ನಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮ ಮಾಡುವ ಮೂಲಕ ತಂದೆ-ತಾಯಿ ಇಬ್ಬರ ಜೊತೆಗೆ ಗಂಡು ಮಗು ಕಾಣಿಸಿಕೊಂಡಿರುವ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಿದೆ. ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ಕೇವಲ ಕುಟುಂಬಸ್ಥರು ಹಾಗೂ ಹಿತೈಷಿಗಳು ಮಾತ್ರ ಆಗಮಿಸಿದ್ದು ಸಾವಿರ ಜನಕ್ಕೂ ಅಧಿಕ ಜನರಿಗೆ ಊಟವನ್ನು ಈ ಸಂದರ್ಭದಲ್ಲಿ ಇರಿಸಿಕೊಳ್ಳಲಾಗಿತ್ತು.

ಇನ್ನು ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳ ಗಂಡು ಮಗನ ನಾಮಕರಣ ಕಾರ್ಯಕ್ರಮ ನಡೆದಿದ್ದು ಮಗುವಿಗೆ ಅವ್ಯಾನ್ ದೇವ್ ಎನ್ನುವುದಾಗಿ ಹೆಸರಿಡಲಾಗಿದೆ ಎಂದು ತಿಳಿದುಬಂದಿದೆ. ಎಲ್ಲರೂ ಕೂಡ ಈ ಹೆಸರಿನ ನಿಜವಾದ ಅರ್ಥವೇನು ಎಂಬ ಕುರಿತಂತೆ ಗೊಂದಲದಿಂದ ಕೂಡಿದ್ದಾರೆ. ನಿಖಿಲ್ ಕುಮಾರ್ ಅವರ ಪುತ್ರ ಅವ್ಯಾನ್ ರವರ ಹೆಸರಿನ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಅವ್ಯಾನ್ ಎಂದರೆ ವಿಘ್ನ ನಾಶಕ ಗಜಮುಖನ ಇನ್ನೊಂದು ಹೆಸರು ಎಂಬುದಾಗಿ ಸಂಸ್ಕೃತದ ಮೂಲದಿಂದ ತಿಳಿದುಬಂದಿದೆ. ನಿಖಿಲ್ ಕುಮಾರ್ ಅವರ ಮಗನ ಹೆಸರಿನ ಅರ್ಥದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.