ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸಚಿನ್ -ಸೌರವ್ ಅಲ್ಲ, ತಮ್ಮ ನೆಚ್ಚಿನ ಕ್ರಿಕೆಟ್ ಲೆಜೆಂಡ್ ಯಾರು ಎಂದು ತಿಳಿಸಿದ ಹಾರ್ಧಿಕ್ ಪಾಂಡ್ಯ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

2,530

ನಮಸ್ಕಾರ ಸ್ನೇಹಿತರೇ ಹಾರ್ದಿಕ್ ಪಾಂಡ್ಯ ರವರು ಒಂದು ಕಾಲದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಒಂದು ಪಂದ್ಯಕ್ಕೆ 500 ರೂಪಾಯಿಯಂತೆ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ಭಾರತೀಯ ಕ್ರಿಕೆಟ್ ತಂಡದಲ್ಲಿ ಹಾಗೂ ಐಪಿಎಲ್ ನಲ್ಲಿ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಸ್ಟಾರ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅತ್ಯಂತ ವೇಗವಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅವರು ಬೆಳವಣಿಗೆ ಹೊಂದುವುದಕ್ಕೆ ಅವರ ಪರಿಶ್ರಮವೇ ಕಾರಣ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಹೌದು ಗೆಳೆಯರೆ ಮೊದಲು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಯ್ಕೆಯಾಗುವ ಮೂಲಕ ನಂತರ ತಮ್ಮ ಪ್ರತಿಭೆಯ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುತ್ತಾರೆ. ಪರ್ಫೆಕ್ಟ್ ಆಲ್-ರೌಂಡರ್ ಆಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಹಲವಾರು ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನದಿನಗಳಲ್ಲಿ ಇಂಜುರಿಯ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದರು. ಆದರೆ ಈಗ ಐಪಿಎಲ್ ನಲ್ಲಿ ಮತ್ತೆ ವಾಪಸಾಗುವ ಮೂಲಕ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆಗುವ ಮೂಲಕ ತಮ್ಮ ಮರು ವಾಪಸಾತಿಯನ್ನು ಅದ್ದೂರಿಯಾಗಿಯೇ ಘೋಷಿಸಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಬ್ಬ ಕ್ರಿಕೆಟಿಗನಿಗೂ ಕೂಡ ಪೂರ್ತಿ ಆಗುವಂತಹ ಒಬ್ಬ ಕ್ರಿಕೆಟಿಗ ಖಂಡಿತವಾಗಿ ಜೀವನದಲ್ಲಿ ಇದ್ದೇ ಇರುತ್ತದೆ.

ಹಾರ್ದಿಕ್ ಪಾಂಡ್ಯ ಅವರ ವಿಚಾರದಲ್ಲಿ ಅವರ ನೆಚ್ಚಿನ ಕ್ರಿಕೆಟಿಗೆ ಆಯ್ಕೆಯನ್ನು ಸಾಕಷ್ಟು ವಿಚಿತ್ರವಾಗಿ ಕಂಡು ಬರುತ್ತದೆ. ಹಾರ್ದಿಕ್ ಪಾಂಡೆ ಹೇಳುವಂತೆ ಅವರು ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ಜಾಕ್ ಕಾಲಿಸ್ ಸೇರಿದಂತೆ ಹಲವಾರು ಲೆಜೆಂಡ್ ಆಟಗಾರರನ್ನು ಇಷ್ಟಪಡುತ್ತಿದ್ದರು ನಿಜ ಆದರೆ ಅವರ ನೆಚ್ಚಿನ ಆಟಗಾರ ವಾಸಿಂ ಜಾಫರ್ ಆಗಿದ್ದರು ಎಂಬುದಾಗಿ ಹೇಳಿದ್ದಾರೆ. ವಾಸಿಂ ಜಾಫರ್ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಗಿಂತ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಸಾಕಷ್ಟು ದೊಡ್ಡ ಮಟ್ಟದ ಮರಿಯಲಾಗದ ದಾಖಲೆಗಳನ್ನು ಹೊಂದಿದ್ದಾರೆ. ವಾಸಿಂ ಜಾಫರ್ ರವರು 260 ಡೊಮೆಸ್ಟಿಕ್ ಪಂದ್ಯಗಳಲ್ಲಿ 19410 ರನ್ನುಗಳನ್ನು ಬಾರಿಸಿದ್ದಾರೆ. ವಾಸಿಂ ಜಾಫರ್ ರವರನ್ನು ತಮ್ಮ ನೆಚ್ಚಿನ ಕ್ರಿಕೆಟಿಗೆ ಎಂದು ಹೇಳುವ ಮೂಲಕ ಹಾರ್ದಿಕ್ ಪಾಂಡ್ಯ ರವರು ಕ್ರಿಕೆಟ್ ಜಗತ್ತನ್ನು ಅಚ್ಚರಿಗೆ ತಳ್ಳಿದ್ದಾರೆ ಎಂದು ಹೇಳಬಹುದಾಗಿದೆ.