ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿ ತಂಡ ಈ ಬಾರಿ ಅಪ್ಪಿ ತಪ್ಪಿಯೂ ಇವರನ್ನು ಕೈ ಬಿಡಲ್ಲ: ಕೈಬಿಟ್ಟರೆ ಅದಕ್ಕಿಂತ ತಪ್ಪು ಮತ್ತೊಂದಿಲ್ಲ. ಯಾರ್ಯಾರನ್ನು ಗೊತ್ತೇ??

113

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿ ಐಪಿಎಲ್ ಮುಗಿದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಫೈಯರ್ 2 ಹಂತಕ್ಕೆ ತೇರ್ಗಡೆಯಾಗಿ ಅಲ್ಲಿ ಮಾತ್ರ ಸಫಲವಾಗಿದೆ ಎಂದು ಹೇಳಬಹುದಾಗಿದೆ. ಫೈನಲಿಗೆ ಹೋಗಿಲ್ಲ ಎಂದಮಾತ್ರಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದೆ ಎಂದಲ್ಲ. 2016 ರ ನಂತರ ಪ್ರಥಮ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ನಲ್ಲಿ ಫೈನಲ್ ಹಂತಕ್ಕೆ ಬಿಡುಗಡೆಯಾಗುವ ಸಂಪೂರ್ಣ ಭರವಸೆಯನ್ನು ಮೂಡಿಸಿತ್ತು.

ಆದರೆ ಕೆಲವೊಂದು ಚಿಕ್ಕಪುಟ್ಟ ತಪ್ಪುಗಳಿಂದಾಗಿ ತಂಡ ಸೆಮಿಫೈನಲ್ ಹಂತದಲ್ಲಿ ಎಡವಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿ ಹೊಸ ನಾಯಕ ಆಗಿದ್ದರು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಡುಪ್ಲೆಸಿಸ್ ಅವರು ಮಾಡಿರುವ ಸಾಧನೆ ನಿಜಕ್ಕೂ ಕೂಡ ಪ್ರಶಂಸಾರ್ಹ. ಹೊಸ ಆಟಗಾರರು ತಂಡವನ್ನು ತುಂಬಿಕೊಂಡಿದ್ದರೂ ಕೂಡ ಅವರನ್ನು ನಿಭಾಯಿಸಿರುವ ರೀತಿ ನಿಜಕ್ಕೂ ಕೂಡ ಶ್ಲಾಘನೀಯ. ಇನ್ನು ಮುಂದಿನ ಐಪಿಎಲ್ನಲ್ಲಿ ಯಾರನ್ನು ಬಿಟ್ಟರು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಮೂರು ಆಟಗಾರರನ್ನು ಬಿಡೋದಕ್ಕೆ ಚಾನ್ಸೇ ಇಲ್ಲ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ ಇದು ಸತ್ಯ ಕೂಡ ಹೌದು. ಹಾಗಿದ್ದರೆ ಆ 3 ಆಟಗಾರರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ದಿನೇಶ್ ಕಾರ್ತಿಕ್. 16 ಪಂದ್ಯಗಳಿಂದ 330 ರನ್ನುಗಳನ್ನು ಬಾರಿಸಿರುವ ದಿನೇಶ್ ಕಾರ್ತಿಕ್ ಆರ್ಸಿಬಿ ತಂಡದ ಬಹುಮೂಲ್ಯ ಆಟಗಾರರಾಗಿದ್ದಾರೆ. ಎರಡನೇದಾಗಿ ವನಿಂದು ಹಸರಂಗ. ಈ ಬಾರಿಯ ಐಪಿಎಲ್ ನಲ್ಲಿ ಎರಡನೇ ಅತ್ಯಂತ ಹೆಚ್ಚು ವಿಕೆಟ್ ಟೇಕರ್ ಆಗಿ ಕಾಣಿಸಿಕೊಂಡಿರುವುದು ಇವರೇ. ಇವರು ಕೂಡ ಆರ್ಸಿಬಿಯ ಬಹುಮೂಲ್ಯ ಆಟಗಾರರಾಗಿದ್ದಾರೆ. ಮೂರನೇದಾಗಿ ಆಸೀಸ್ ವೇಗಿ ಜೋಶ್ ಹೆಝಲ್ ವುಡ್‌. ಮೊದಲ 3 ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು ಕೂಡ 20 ವಿಕೆಟ್ ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ಮೂರು ಪ್ರಮುಖ ಆಟಗಾರರನ್ನು ಆರ್ಸಿಬಿ ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳುವುದು ನಿಶ್ಚಿತವಾಗಿದೆ ಎಂದು ಹೇಳಬಹುದಾಗಿದೆ.

Get real time updates directly on you device, subscribe now.