ಅಕ್ತರ್ ದಾಖಲೆ ಇದೀಗ ಆಪತ್ತಿನಲ್ಲಿ. ಅಭ್ಯಾಸದ ನೆಟ್ ನಲ್ಲಿ ಉಮ್ರಾನ್ ಮಲಿಕ್ ಅದೆಷ್ಟು ವೇಗದಲ್ಲಿ ಬೌಲ್ ಮಾಡಿದ್ದಾರೆ ಗೊತ್ತೇ??- ಯಪ್ಪಾ ಇಷ್ಟೊಂದ??

ಅಕ್ತರ್ ದಾಖಲೆ ಇದೀಗ ಆಪತ್ತಿನಲ್ಲಿ. ಅಭ್ಯಾಸದ ನೆಟ್ ನಲ್ಲಿ ಉಮ್ರಾನ್ ಮಲಿಕ್ ಅದೆಷ್ಟು ವೇಗದಲ್ಲಿ ಬೌಲ್ ಮಾಡಿದ್ದಾರೆ ಗೊತ್ತೇ??- ಯಪ್ಪಾ ಇಷ್ಟೊಂದ??

ನಮಸ್ಕಾರ ಸ್ನೇಹಿತರೆ ಐಪಿಎಲ್ ಯಾವತ್ತೂ ಕೂಡ ಯುವ ಭಾರತೀಯ ಕ್ರಿಕೆಟ್ ಆಟಗಾರರನ್ನು ಮುನ್ನೆಲೆಗೆ ತಂದು ಅವರಿಗೆ ಒಂದು ಒಳ್ಳೆಯ ವೇದಿಕೆಯನ್ನು ಕಲ್ಪಿಸುವ ಅವಕಾಶದ ಟೂರ್ನಮೆಂಟ್ ಆಗಿದೆ ಎಂದರೆ ತಪ್ಪಾಗಲಾರದು. ಇಂಟರ್ನ್ಯಾಷನಲ್ ಕ್ವಾಲಿಟಿಯ ಲೆವೆಲ್ ನಲ್ಲಿ ಮೂಡಿಬರುವ ಐಪಿಎಲ್ ಈ ಬಾರಿಯೂ ಕೂಡ ಸಾಕಷ್ಟು ಜೀವ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ನೀಡಿದೆ ಎಂದರೆ ತಪ್ಪಾಗಲಾರದು. ಈ ಬಾರಿಯ ಐಪಿಎಲ್ ನಲ್ಲಿ ಕೂಡ ಸಾಕಷ್ಟು ಯುವ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಲು ಈ ದೊಡ್ಡ ವೇದಿಕೆಯನ್ನು ಬಳಸಿಕೊಂಡಿದ್ದಾರೆ.

ಅದರಲ್ಲೂ ವಿಶೇಷವಾಗಿ ಇಂದು ನಾವು ಮಾತನಾಡಲು ಹೊರಟಿರುವುದು ಜಮ್ಮು-ಕಾಶ್ಮೀರ ಮೂಲದ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಆಗಿರುವ ಉಮ್ರಾನ್ ಮಲ್ಲಿಕ್ ರವರು. ಹೌದು ಗೆಳೆಯರೇ ಐಪಿಎಲ್ ಉದ್ದಕ್ಕೂ 150 ಕಿಲೋಮೀಟರ್ ವೇಗಕ್ಕಿಂತಲೂ ಅಧಿಕ ವೇಗದಲ್ಲಿ ಸತತವಾಗಿ ಕನ್ಸಿಸ್ಟೆಂಟ್ ಆಗಿ ಬೌಲಿಂಗ್ ಮಾಡುತ್ತಿರುವ ಏಕೈಕ ಭಾರತೀಯ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಕೇವಲ ವೇಗದಿಂದ ಬೌಲ್ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಅನ್ನು ಈ ಬಾರಿಯ ಐಪಿಎಲ್ ನಲ್ಲಿ ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಇಂದಿನಿಂದ ಪ್ರಾರಂಭವಾಗುವ ಸೌತ್ ಆಫ್ರಿಕಾ ವಿರುದ್ಧ ಹಾಯ್ದು t-20 ಪಂದ್ಯಗಳ ಸರಣಿಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಉಮ್ರಾನ್ ಮಲಿಕ್ ಆಯ್ಕೆಯಾಗಿದ್ದಾರೆ. ಇನ್ನು ಈ ಬಾರಿ ನೆಟ್ ಪ್ರಾಕ್ಟೀಸ್ ವೇಳೆ ಇವರು ಮಾಡಿರುವ ದಾಖಲೆ ಈಗ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿರುವ ಶೋಯಬ್ ಅಖ್ತರ್ ಅವರ ದಾಖಲೆಯನ್ನು ಸರಿಗಟ್ಟುವ ವಿಶ್ವಾಸವನ್ನು ಸಾಬೀತು ಪಡಿಸಿದೆ ಎಂಬುದಾಗಿ ಹೇಳಬಹುದಾಗಿದೆ.

ಹೌದು ಗೆಳೆಯರೆ 2002-03 ರ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಆಗಿರುವ ಶೋಯಬ್ ಅಖ್ತರ್ ರವರು 161.3 ಕಿಲೋಮೀಟರ್ ಪ್ರತಿ ಗಂಟೆಗೆ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಆದರೆ ಇತ್ತೀಚಿಗಷ್ಟೇ ಉಮ್ರಾನ್ ಮಲ್ಲಿಕ್ ನೆಟ್ ಪ್ರಾಕ್ಟೀಸ್ ಮಾಡುವ ವೇಳೆ 163.7 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಖಂಡಿತವಾಗಿ ಇದೇ ಬೌಲಿಂಗನ್ನು ಅಂತರಾಷ್ಟ್ರೀಯ ಪಂದ್ಯದಲ್ಲಿ ಮಾಡಿದರೆ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿರುವ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾಗುತ್ತಾರೆ. ಈ ಮೂಲಕ ಶೋಯಬ್ ಅಖ್ತರ್ ರವರ ದಾಖಲೆಯನ್ನು ಧೂಳಿಪಟ ಮಾಡಲಿದ್ದಾರೆ.