ಮುಂದಿನ ಎರಡು ವರ್ಷಗಳ ವರೆಗೂ ಈ ಮೂರು ರಾಶಿಗಳಿಗೆ ಹಣದ ಮಳೆಯನ್ನು ಹರಿಸಲಿದ್ದಾರೆ ಶನಿ ದೇವ. ಯಾರ್ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿ ತನ್ನ ರಾಶಿಯಾಗಿರುವ ಕುಂಭರಾಶಿಗೆ 30 ವರ್ಷಗಳ ನಂತರ ಕಾಲಿಟ್ಟಿದ್ದು ಜೂನ್ 5ರಿಂದ ಈಗಾಗಲೇ ಹಿಮ್ಮುಖ ಚಲನೆ ಕೂಡ ಪ್ರಾರಂಭವಾಗಿದೆ. ಇದರ ಮಧ್ಯೆ ಕೆಲವು ತಿಂಗಳುಗಳ ವರೆಗೆ ಮಕರ ರಾಶಿಯಲ್ಲಿ ಕೂಡ ಶನಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. 2024 ರವರೆಗೆ ಎಂದರೇ ಇನ್ನು ಎರಡು ವರ್ಷಗಳ ಕಾಲ ಕುಂಭರಾಶಿಯಲ್ಲಿ ಶನಿ ಇರುವ ಕಾರಣದಿಂದಾಗಿ 3 ರಾಶಿಯವರಿಗೆ ಲಾಭ ಉಂಟಾಗುತ್ತದೆ. ಹಾಗಿದ್ದರೆ ಆ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ; ಮೇಷ ರಾಶಿಯವರು ಉದ್ಯೋಗಿಗಳಾಗಿದ್ದಾರೆ ಸಂಬಳ ಹೆಚ್ಚಾಗಲಿದೆ ಹಾಗೂ ವ್ಯಾಪಾರಸ್ಥರಾಗಿದ್ದಾರೆ ಲಾಭ ಹೆಚ್ಚಾಗಲಿದೆ. ಕೆಲಸವನ್ನು ಬದಲಾಯಿಸಲು ಇಚ್ಚಿಸುವವರಿಗೆ ಉತ್ತಮ ಹಾಗೂ ಹೊಸ ಹೊಸ ಕೆಲಸದ ಅವಕಾಶಗಳು ದೊರೆಯಲಿವೆ. ನೀಲಿ ರತ್ನವನ್ನು ಧರಿಸುವುದು ಹಾಗೂ ಶನಿದೇವನಿಗೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ಅನುಸರಿಸುವ ಕಾರಣದಿಂದಾಗಿ ನೀವು ಮುಂದಿನ ದಿನಗಳಲ್ಲಿ ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ.

ವೃಷಭ ರಾಶಿ; 2024 ರವರೆಗೆ ಶನಿದೇವನ ಕೃಪೆಯಿಂದಾಗಿ ವೃಷಭ ರಾಶಿಯವರಿಗೆ ಸಾಕಷ್ಟು ಲಾಭದಾಯಕ ದಿನಗಳು ಕಂಡುಬರಲಿವೆ. ಅದರಲ್ಲೂ ಪ್ರಮುಖವಾಗಿ ಕೆಲಸದ ಯೋಗದಲ್ಲಿ ಶನಿಯ ಪ್ರಭಾವ ಹೆಚ್ಚಿರುವ ಕಾರಣದಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಾಗಿ ಹುಡುಕಿಕೊಂಡು ಬರುತ್ತದೆ. ಕೆಲಸದಲ್ಲಿ ಕಂಡುಬರುತ್ತಿದ್ದ ಅಡಚಣೆಗಳು ಕೂಡ ದೂರವಾಗಲಿದೆ. ಬದುಕು ನೆಮ್ಮದಿಯಿಂದ ಸಾಗಲಿದೆ.

ಧನು ರಾಶಿ; ಧೈರ್ಯ ಹಾಗೂ ಆತ್ಮವಿಶ್ವಾಸ ಧನುರಾಶಿಯವರಿಗೆ ಈ ಸಂದರ್ಭದಲ್ಲಿ ಹೆಚ್ಚಿರುತ್ತದೆ ಹೀಗಾಗಿ ಅವರು ಯಾವುದೇ ಕೆಲಸ ಮಾಡಿದರೂ ಕೂಡ ಫಲಿತಾಂಶ ಅವರ ಗೆಲುವೇ ಆಗಿರುತ್ತದೆ. ಇವರು ಮಾಡುವ ಒಳ್ಳೆಯ ಕೆಲಸದಿಂದಾಗಿ ಕೆಲಸದ ಸ್ಥಳದಲ್ಲಿ ಗೌರವವನ್ನು ಪಡೆಯುತ್ತಾರೆ ಹಾಗೂ ಶತ್ರುಗಳ ವಿರುದ್ಧವೂ ಗೆಲುವನ್ನು ಸಾಧಿಸುತ್ತಾರೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ.